Mitrarakshaka.Film News

Tuesday, August 04, 2020

571

"ಮಿತ್ರರಕ್ಷಕ " ಒಟಿಟಿ ಬಿಡುಗಡೆ

ಮಾದೇಶ್ ಎಂಟರ್ ಪ್ರೆಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಮಿತ್ರರಕ್ಷಕ" ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಇದೇ ೧೫ ರಂದು ಮೈ ಎಟಿಎಂ ಮೊಬೈಲ್ ಆಪ್ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ

ಚಿತ್ರವನ್ನು ಓಂಪ್ರಕಾಶ್ ನಾಯಕ್ ,ಕಥೆ, ಚಿತ್ರಕಥೆ,ಸಂಭಾμಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೇ ಚಿತ್ರತಂಡ ಆಪ್ತಮಿತ್ರ ಭಾಗ-೩ ಚಿತ್ರ ಮಾಡಲು ಮುಂದಾಗಿದ್ದ ತಂಡ ಆ ನಂತರ ಮಿತ್ರರಕ್ಷಕ ಎಂದು ಹೆಸರಿಟ್ಟಿದ್ದಾರೆ.ದಟ್ಟ ಕಾಡಿಗೆ ಹೋಗುವ ತಂಡ ಅಲ್ಲಿ ಒಬ್ಬರ ಕೊಲೆಯಾಗುತ್ತದೆ ಆ ಕೊಲೆಯನ್ನು ನಾಗವಲ್ಲಿ ಮಾಡಿದೆ ಎಂದೂ ಕೆಲವರು ತಿಳಿಯುತ್ತಾರೆ.ಆದರೆ ನಿಜವಾಗಿ ಕೊಲೆ ಮಾಡಿದವರು ಯಾರು ಎನ್ನುವುದು ರಹಸ್ಯದ ಸಂಗತಿ. ಚಿತ್ರದ ಚಿತ್ರೀಕರಣವನ್ನು ಶೃಂಗೇರಿ ಬೆಟ್ಟ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಓಂ ಪ್ರಕಾಶ್ ನಾಯಕ ನಾಗವಲ್ಲಿ ಪಾತ್ರ ಮಾಡಿದ್ದಾರೆ.  ದೇವದಾಸ್ ಸಂಗೀತ,ಕಿರಣ್ ಛಾಯಾಗ್ರಹಣ,ನವೀನ್ ಸಹನಿರ್ದೇಶನ,ಓಂಪ್ರಕಾಶ್ ಸಂಕಲನವಿದೆ. ಓಂಪ್ರಕಾಶ್ ನಾಯಕ್, ಶ್ರೀಧರ್,ಸ್ಮೈಲ್ ಶಿವು, ಸ್ವಪ್ನ, ಕಾವ್ಯ,ಅವಿನಾಶ್ ಭಾರದ್ವಾಜ್ ,ಪ್ರಸನ್ನ,ರುದ್ರೇಶ್, ಶಂಕರ್ ಬಾಬು,ಅನಿತಾ ಹೆಗ್ಗರ್, ನೆಲಮಂಗಲ ಬಾಬು ಮತ್ತಿತರ ತಾರಾಬಳಗವಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,