(1) *’ಜನರಿಂದ ನಾನು ಮೇಲೆ ಬಂದೆ’ ಟ್ರೇಲರ್ ಬಿಡುಗಡೆ*
(2) *ನೈಜ ಘಟನೆಯ ಡ್ಯಾನ್ಸ್ ಕುರಿತಾದ ಕಥನ*
(3) *ಗಂಧರ್ವರಾಜ್ ಶಂಕರ್ ನಟನೆಯ ’ಜನರಿಂದ ನಾನು ಮೇಲೆ ಬಂದೆ’*
(4) *ಜನರಿಂದ ಸಾಧನೆ ಮಾಡಿದ ಹುಡುಗನ ಚಿತ್ರ*
*’ಜನರಿಂದ ನಾನು ಮೇಲೆ ಬಂದೆ’* ಚಿತ್ರದ ಟ್ರೇಲರ್‌ನ್ನು ಹಿರಿಯ ನಿರ್ದೇಶಕ ಸುನಿಲ್‌ಕುಮಾರ್ ಸಿಂಗ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ’ಗಜ’ ನಿರ್ಮಾಪಕ ಸುರೇಶ್‌ಗೌಡ್ರು ಉಪಸ್ತಿತರಿದ್ದರು. ನೆಟ್ಟಿಗೆರೆ ಬೋಳಾರ ಗ್ರಾಮದ *ಬಿ.ಹೇಮಾವತಿ ಅವರು ಮಂಜುನಾಥ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ* ಹೂಡುತ್ತಿದ್ದಾರೆ. *ನವಿಲುಗರಿ ನವೀನ್ ನಿರ್ದೇಶನದ* ನಾಲ್ಕನೇ ಹಾಗೂ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
*ಗಂಧರ್ವರಾಜ್ ಶಂಕರ್ ನಾಯಕ.* ಮಂಗಳೂರು ಮೂಲದ ಅಪ್ತಿ ಪಟವರ್ಧನ್ ಮತ್ತು ಮೈಸೂರಿನ ಕೃತಿಕಾದಿವಾಕರ್ ನಾಯಕಿಯರು. ಹಿರಿಯ ಕಲಾವಿದರುಗಳಾದ ವಿನೋದ್‌ರಾಜ್, ಅಭಿಜಿತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೈಲಜದ್ವಾರಕೀಶ್(ಹಿರಿಯ ನಟ ದ್ವಾರಕೀಶ್ ಎರಡನೇ ಪತ್ನಿ) ಶಿವಕುಮಾರ್ ಆರಾಧ್ಯ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಪ್ರಣವ್ ಸತೀಶ್, ಛಾಯಾಗ್ರಹಣ-ಸಂಕಲನ ಟಿ.ಆರ್.ಗೌತಮ್ ಸಾಹಿತ್ಯ ಪೃಥ್ವಿರಾಜ್ ಸಂಕಿ-ಭುವನ್.ಎಂ.ಎಸ್, ನೃತ್ಯ ಚಾಮರಾಜ ಮಾಸ್ಟರ್ ಅವರದಾಗಿದೆ.
ನಾಲ್ಕು ವರ್ಷದ ಹಿಂದೆ ಚೆನ್ನೈದಲ್ಲಿ ನಡೆದ ಘಟನೆ ಮತ್ತು ಮಂಗಳೂರು ಸ್ಥಳದಲ್ಲಿ ನೋಡಿದಂತಹುದನ್ನು ಪ್ರೇರಣೆಯಾಗಿ ತೆಗೆದುಕೊಂಡು ನಿರ್ದೇಶಕರು ಸಿನಿಮಾಕ್ಕೆ ರಚನೆ,ಚಿತ್ರಕಥೆ,ಸಂಭಾಷಣೆ, ಎರಡು ಗೀತೆಗೆ ಸಾಹಿತ್ಯ ಬರೆದು ಕೆಲವೊಂದು ಅಂಶಗಳನ್ನು ಕಮರ್ಷಿಯಲ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಡ್ಯಾನ್ಸ್ ಆಧಾರಿತ ಕಥೆಯಾಗಿದ್ದು, ಸ್ಲಂನಲ್ಲಿ ಜೀವನ ಸಾಗಿಸುತ್ತಾ ನೃತ್ಯಪಟು ಆಗಬೇಕೆಂದು ಕಷ್ಟಪಡುವ ಹುಡುಗ. ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು, ಡ್ಯಾನ್ಸೇ ಪ್ರಪಂಚ ಅಂದುಕೊಂಡಿರುವ ವಿದ್ಯಾವಂತ ಸ್ಟೂಡೆಂಟ್. ಒಂದು ಹಂತದಲ್ಲಿ ಭೇಟಿಯಾಗುವ ಇಬ್ಬರ ಗುರಿ ಒಂದೇ ಆಗಿರುತ್ತದೆ. ಮುಂದೆ ಜನರಿಂದ ಯಾವ ರೀತಿ ಪ್ರೋತ್ಸಾಹ ಸಿಗುತ್ತದೆ? ಅಂದುಕೊಂಡಂತೆ ಸಾಧನೆ ದಾರಿ ತಲುಪಿ ಯಶಸ್ವಿಯಾಗುತ್ತಾರಾ? ಎಂಬುದನ್ನು ಕುತೂಹಲ ಹಾಗೂ ಹಾಸ್ಯದೊಂದಿಗೆ ತೋರಿಸಲಾಗುತ್ತಿದೆ.
ಬೆಂಗಳೂರು, ಮೇಲುಕೋಟೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಸಿನಿಮಾವು ನವೆಂಬರ್ ಎರಡನೇ ವಾರದಲ್ಲಿ ತೆರೆ ಕಾಣುತ್ತಿದೆ.