*ಲಯಕೋಕಿಲ ಚೊಚ್ಚಲ ನಿರ್ದೇಶನದ "ತಾಯ್ತ" ಚಿತ್ರ ಅಕ್ಟೋಬರ್ 30 ರಂದು ತೆರೆಗೆ.* .
*ರಿಯಾನ್ ಹಾಗೂ ಹರ್ಷಿಕಾ ಪೂಣಚ್ಛ ನಾಯಕ - ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಶಾಹಿದ್ ಅವರ ನಿರ್ಮಾಣ* .
ನಟನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಲಯಕೋಕಿಲ ಚೊಚ್ಚಲ ನಿರ್ದೇಶನದ, ಎಂ.ಎಸ್ ಪ್ರೊಡಕ್ಷನ್ ಲಾಂಛನದಲ್ಲಿ ಶಾಹಿದ್ ಅವರು ನಿರ್ಮಿಸಿರುವ ಹಾಗೂ ರಿಯಾನ್ - ಹರ್ಷಿಕಾ ಪೂಣಚ್ಛ ನಾಯಕ - ನಾಯಕಿಯಾಗಿ ನಟಿಸಿರುವ "ತಾಯ್ತ" ಚಿತ್ರ ಅಕ್ಟೋಬರ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಪೂರ್ವದಲ್ಲಿ ಚಿತ್ರದ ಟ್ರೇಲರ್ ಅನಾವರಣವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಭಾ.ಮ ಹರೀಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. ಸಿರಿ ಮ್ಯೂಸಿಕ್ ಮೂಲಕ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಇದೊಂದು ಸಂಪೂರ್ಣ ಹಾರಾರ್ ಜಾನರ್ ನ ಚಿತ್ರವಲ್ಲ. ಲವ್ ಜಾನರ್ ನ ಚಿತ್ರ. ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ. ನಿರ್ಮಾಪಕ ಶಾಹಿದ್ ಅವರು ಕಥೆ ಬರದಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ನಾನು ಮಾಡಿದ್ದೇನೆ. ರಿಯಾನ್ ಈ ಚಿತ್ರದ ನಾಯಕನಾಗಿ, ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಮಗಳು ಭಾನುಪ್ರಿಯ ಕೂಡ ಅಭಿನಯಿಸಿದ್ದಾರೆ. ಸಾಧುಕೋಕಿಲ, ಶೋಭ್ ರಾಜ್, ಶಾಹಿದ್, ಕರಿಸುಬ್ಬು, ಪುಷ್ಪಾಸ್ವಾಮಿ, ರೋಜಾ, ಸಿಮ್ರಾನ್, ಲಾವಣ್ಯ, ಸಹನಾ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾನು ಕೂಡ ನಟಿಸಿದ್ದೇನೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಆನಂದ್ ಹಾಗೂ ಗಗನ್ ಗೌಡ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಅಕ್ಟೋಬರ್ 30ರಂದು ನಮ್ಮ ಚಿತ್ರ ನಿಮ್ಮ ಮುಂದೆ ಬರಲಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ನಟ ಲಯಕೋಕಿಲ.
ನಾಯಕಿ ಹರ್ಷಿಕಾ ಪೂಣಚ್ಛ, ಮಾತನಾಡಿ, ಈ ಚಿತ್ರ ಅಕ್ಟೋಬರ್ 30 ರಂದು ತೆರೆಗೆ ಬರುತ್ತಿದೆ. ಈ ಚಿತ್ರ ತೆರೆಗೆ ಬರಲು ಲಯಕೋಕಿಲ ಅವರ ಶ್ರಮ ಬಹಳಷ್ಟಿದೆ. ತುಂಬಾ ಜನ ಕಲಾವಿದರು ಅಭಿನಯಿಸಿರುವ ಚಿತ್ರವಿದು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು.
ನಾಯಕ ರಿಯಾನ್ ಮಾತನಾಡಿ, ನನಗೆ ಸಮಾರಂಭವೊಂದರಲ್ಲಿ ಸಿಕ್ಕ ಲಯಕೋಕಿಲ ಅವರು, ನೀವು ಅಭಿನಯ ಮಾಡಿ ಎಂದು ಹೇಳಿದರು. ಅವರು ಹೇಳಿದ ಹಾಗೆ ಅವರ ನಿರ್ದೇಶನದ ಚಿತ್ರದಲ್ಲೇ ನಾನು ನಾಯಕನಾಗಿ ನಟಿಸಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ದಾಹವಿರಲಿ ಎಂದರು.
ನಿರ್ಮಾಪಕ ಶಾಹಿದ್ ಅವರು ಸಹ ಈ ಚಿತ್ರದಲ್ಲಿ ಅಭಿನಯಿಸಿರುವಾದಾಗಿ ಹೇಳಿದರು. ಲಯಕೋಕಿಲ ಪುತ್ರಿ ಭಾನುಪ್ರಿಯ, ರೋಜಾ, ಸಿಮ್ರಾನ್, ಕರಿಸುಬ್ಬು, ಪುಷ್ಪಾಸ್ವಾಮಿ ಮುಂತಾದ ಕಲಾವಿದರು, ಚಿತ್ರತಂಡದ ಸದಸ್ಯರು ಹಾಗೂ ಸಿರಿ ಮ್ಯೂಸಿಕ್ ಚಿಕ್ಕಣ್ಣ "ತಾಯ್ತ" ಚಿತ್ರದ ಕುರಿತು ಮಾತನಾಡಿದರು.