Ninnantha Aparoopa 5 1.News

Monday, October 19, 2026

 

*ಗಾಯಕಿ ವಾಣಿ ಸತೀಶ್ - ವಿಜಯ್ ಪ್ರಕಾಶ್ ಹಾಡಿರುವ ’ನಿನ್ನಂತ ಅಪರೂಪ 5.1'  ಅಲ್ಬಂ ಹಾಡು ಬಿಡುಗಡೆ* .

 

ಅಮೇರಿಕಾದಲ್ಲಿ ಐಟಿ ಉದ್ಯೋಗದಲ್ಲಿರುವ ಕನ್ನಡತಿ ವಾಣಿ ಸತೀಶ್ ಸಂಗೀತ ಸಂಯೋಜಿಸಿ, ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಅವರ ಜೊತೆಗೆ ಹಾಡಿರುವ "ನಿನ್ನಂತ ಅಪರೂಪ 5.1" ಆಲ್ಬಂ ಹಾಡು ಇತ್ತೀಚಗೆ ಅನಾವರಣವಾಯಿತು. 

 

ದ್ವಾರ್ ಮ್ಯೂಸಿಕ್ ವತಿಯಿಂದ ಹೊರಬಂದಿರುವ

"ನಿನ್ನಂತ ಅಪರೂಪ 5.1" ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. "ನಿನ್ನಂತ ಅಪರೂಪ" ಹಾಡು ಸಿನಿಮಾ ಹಾಡಿನ‌ ರೀತಿಯಲ್ಲಿ ಮೂಡಿಬಂದಿದೆ.

 

ಮೂಲತಃ  ದಾವವಣಗೆರೆಯ ವಾಣಿ ಸತೀಶ್,  ಕೆಲಸದ ಜೊತೆ ಜೊತೆಗೆ ಅಮೇರಿಕದ ವಿವಿಧ ಭಾಗಗಳಲ್ಲಿ ಹಾಗು  ಕನ್ನಡ ಕೂಟಗಳಲ್ಲಿ 150 ಕ್ಕೂ  ಕಾರ್ಯಕ್ರಮ ನೀಡಿ ಹಲವು ಪ್ರಶಸ್ತಿ ಮತ್ತು ಮೆಚ್ಚುಗೆಯ ಪಡೆದುಕೊಂಡಿದ್ದಾರೆ.

 

"ನಿನ್ನಂತ ಅಪರೂಪ ಕಂಡಿಲ್ಲ ಎಲ್ಲೂ ನಾನು".. ಸಾಲಿನಿಂದ ಆರಂಭವಾಗುವ ಅಲ್ಬಂ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಭಗವಂತ ಕೌಶಲ್ಯ ನೀಡಿರುತ್ತಾರೆ. ಅದನ್ನು ಗುರುತಿಸಿ ಮುನ್ನೆಡೆಸುವುದು ಕಡಿಮೆ ಮಂದಿ. ಐಟಿ ಕೆಲಸದಲ್ಲಿದ್ದರೂ ವಾಣಿ ಸತೀಶ್ ಅವರು  ತುಂಬಾ ಸೊಗಸಾಗಿ ಹಾಡಿದ್ದಾರೆ. 5.1 ಅಂದರೆ ಹಾಡಲು ನೀವು ಐದು ವರ್ಷ ತೆಗೆದುಕೊಂಡಿದ್ದಾರೆ. ಜೊತೆ ಹಾಡಿನ ಚಿತ್ರೀಕರಣ ಮಾಡಲು 1 ತಿಂಗಳು ತೆಗೆದುಕೊಂಡರು ಎಂದು 5.1 ಹಿನ್ನೆಲೆಯಲ್ಲಿ ಹೇಳಿದರು. ಅಮೇರಿಕಾದ ಪೋರ್ಟ್ ಲ್ಯಾಂಡ್ ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ವಾಣಿ ಸತೀಶ್ ಅವರು ಮತ್ತಷ್ಟು ಹಾಡು ಬಿಡುಗಡೆ ಮಾಡಲಿ. ಸಿನಿಮಾದಲ್ಲಿ ಹಾಡು ಹೇಗಿರುತ್ತೋ  ಹಾಗೆ ಹಾಡಿನಲ್ಲಿ ಸಿನಿಮಾ ಇರುತ್ತೆ. ಸಂಗೀತ ಕ್ಷೇತ್ರದಲ್ಲಿ ಚಂದನ್ ಶೆಟ್ಟಿ, ಐಶ್ವರ್ಯ ರಂಗರಾಜನ್, ಸಂಚಿತ್ ಹೆಗ್ದೆ, ಸುಮೇದ್ ಸೇರಿದಂತೆ ಹಲವರು ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಂತೆ ವಾಣಿ ಸತೀಶ್ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯಲಿ, ದ್ವಾರ್ ಮ್ಯೂಸಿಕ್ ವತಿಯಿಂದ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಕನಸಿಗೆ ನೀವೇ ವೇದಿಕೆ ಸೃಷ್ಟಿಸಿಕೊಳ್ಳಬೇಕು ಎಂದರು. ನನಗೆ ನಟನೆ ಬರಲ್ಲ ದೊಡ್ಡ ದೊಡ್ಡ ನಿರ್ದೇಶಕರು ಅವಕಾಶ ನೀಡಿದರು. ಆದಕ್ಕೆ ಆದರ ಕೌಶಲ್ಯ ಬೇಕು. ನಟನೆ ನನಗೆ ಒಗ್ಗದ ಕೆಲಸ . ಸಂಗೀತ ಮಯ ಚಿತ್ರ ಬಂದರೆ ಅದಕ್ಕೆ ಸಂಗೀತ ನೀಡುವೆ.‌ "ಅಂದರ್ ಬಾಹರ್" ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಗಾಯಕನಾಗಿರುವುದರಿಂದ ಕಷ್ಟ ಆಗುತ್ತಿದೆ.  ಸಂಗೀತ ಸಂಯೋಜನೆ ಮಾಡಿ ಎಂದು ಈಗ ಅನೇಕರು ಕೇಳುತ್ತಿದ್ದಾರೆ. ಅಂತಹ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದರು.

ಗಾಯಕಿ, ಸಂಗೀತ‌ ನಿರ್ದೇಶಕಿ ವಾಣಿ ಸತೀಶ್ ಮಾತನಾಡಿ ಈ ಆಲ್ಬಂ ಸಾಂಗ್, ರೋಮಾಂಟಿಕ್ ಮೆಲೋಡಿ, ಬ್ಯಾಲೆ ಸ್ಟೈಲ್ ನಲ್ಲಿದೆ.  ವಿಜಯ್ ಪ್ರಕಾಶ್ ಅವರ ಜೊತೆ ಹಾಡುವುದು ಬಹು ವರ್ಷದ ಕನಸು. ಇದು ನನ್ನ ಕನಸಿನ‌ ಯೋಜನೆ‌, ಈ ಹಾಡು ಮೆಲೋಡಿ ಹಾಡು ಮಾಡಿದ್ದು ಭಾವನಾತ್ಮಕವಾಗಿ ಸಂಪರ್ಕ ಹೊಂದಿದೆ ಎಂದರು. ಐದು ವರ್ಷದ ಹಿಂದೆ ಆಲ್ಬಂ ಹಾಡು ಮಾಡುವ ಕನಸು ಆರಂಭವಾಯಿತು. ಮನೋ ಮೂರ್ತಿ ಅವರ ತಂಡದಲ್ಲಿದ್ದೆ‌ . ಅಮೇರಿಕಾದಲ್ಲಿ ಕಾರ್ಯಕ್ರಮ ಆದ ನಂತರ ವಿಜಯ್ ಪ್ರಕಾಶ್ ಅವರಿಗೆ ಹೇಳಿದ್ದೆ. ಅವರು ಆರಂಭದಲ್ಲಿ ಒಪ್ಪಿಕೊಂಡು ಕೆಲಸ ಮಾಡೋಣ ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಇದರ ಪರಿಣಾಮ "ನಿನ್ನಂತ ಅಪರೂಪ 5.1" ಹಾಡು ಸಿದ್ದವಾಗಿದೆ ಎಂದರು ಹೇಳಿದರು. "ನನ್ನ ದೊರೆ" ಕನ್ನಡ ಜಾನಪದ ಹಾಡಿಗೆ ಜಾಗತಿಕ ಮನ್ನಣೆ ಸಿಕ್ಕಿದೆ. "ಗುರುವಂದನೆ"  ಹಾಡಿನ ಬಗ್ಗೆ  ಮೆಚ್ಚುಗೆ ವ್ಯಕ್ತವಾಗಿದೆ. "ನಾ‌ ಕಂಡ ಕನಸು" ಹಾಡನ್ನು ಮೇಯರ್ ಬಂದು ಬಿಡುಗಡೆ ಮಾಡಿ ಹಾರೈಸಿದರು ಎಂದು ಮಾಹಿತಿ ಹಂಚಿಕೊಂಡರು

 

ಗೀತ ರಚನೆಕಾರ ಪ್ರಮೋದ್ ಮರುವಂತೆ ಹಾಗೂ ಮ್ಯೂಸಿಕ್ ಆರೆಂಜ್  ಮಾಡಿರುವ ಹರ್ಷವರ್ಧನ್ ರಾಜ್‌ ಅವರು ಸಹ ಹಾಡಿನ ಬಗ್ಗೆ ಮಾತನಾಡಿದರು

 

Copyright@2018 Chitralahari | All Rights Reserved. Photo Journalist K.S. Mokshendra,