Dr Sanjay Gowda.News

Tuesday, October 13, 2026

 

ಅದ್ದೂರಿ ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ಮಾಪಕ ಸಂಜಯ್‌ ಗೌಡ

 

 ಸ್ಯಾಂಡಲ್ ವುಡ್ ನ ಜನಪ್ರಿಯ ನಿರ್ಮಾಪಕ, ಸಾಮಾಜಿಕ ಕಾರ್ಯಕರ್ತ ಹಾಗೂ ಖ್ಯಾತ ಉದ್ಯಮಿ ಸಂಜಯ್‌ ಗೌಡ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಮಾಡಿದರು.  ಸಂಜಯ್ ಗೌಡ ಅವರ ಹುಟ್ಟುಹಬ್ಬಕ್ಕೆ ಪರಮಪೂಜ್ಯ ನಂಜಾವಧೂತ ಸ್ವಾಮಿಗಳುವ ಸಹ ಆಗಮಿಸಿ ಆಶೀರ್ವದಿಸಿದರು. ಮಾಜಿ ಸಂಸದರಾದ ಶಿವರಾಮೇ ಗೌಡ , ಕ.ರ.ವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ, ಬಿಬಿಎಂಪಿ ಮಾಜಿ ಸದಸ್ಯ ಗೋವಿಂದರಾಜು, ನಿರ್ಮಾಪಕ ರಮೇಶ್ ರೆಡ್ಡಿ, ನಟ ಧರ್ಮ, ಕಬ್ಬಡಿ ಬಾಬು, ಚಾಂದ್ ಪಾಷಾ ಅವರು ಸೇರಿದಂತೆ ಅನೇಕ ಗಣ್ಯರು ಹುಟ್ಟುಹಬ್ಬದ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.                                        

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿದ ಸಂಜಯ್ ಗೌಡ ಅವರು, ’ಪರಮಪೂಜ್ಯ ನಂಜಾವಧೂತ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾನು ನಾಡಿತಾಯಿದ್ದು, ಶ್ರೀಗಳು ನನ್ನ ಗುರುಗಳು ಎಂದು ಹೇಳಲು ಇಷ್ಟ ಪಡುತ್ತೇನೆ. ಅದೇ ರೀತಿ ಇವತ್ತು ನನ್ನ ಹುಟ್ಟುಹಬ್ಬಕ್ಕೆ ಕನ್ನಡ ಪರ ಹೋರಾಟಗಾರ ನಾರಾಯಣಗೌಡರು ಕೂಡ ಆಗಮಿಸಿದ್ದಾರೆ. ಅವರು ಯಾವಾಗಲೂ ನಮ್ಮ ಜೊತೆ ಅಣ್ಣನಾಗಿ ಇರುತ್ತಾರೆ. ಹಿರಿಯರಾದ ಶಿವರಾಮೇಗೌಡ ಅವರು ಸೇರಿದಂತೆ ಅನೇಕ ಗಣ್ಯರು ಇಂದು ಆಗಮಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು.  ದೊಡ್ಡ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇನೆ.‌  ಸದ್ಯದಲ್ಲೇ ನಿಮಗೆಲ್ಲಾ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತೇನೆ. ಕನ್ನಡಿಗ ಯಾವ ಮಟ್ಟಕ್ಕೆ ಸಿನಿಮಾ ಮಾಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ  ಸಹಕಾರ ಸದಾ ನನ್ನ ಮೇಲೆ ಇರಲಿ’ ಎಂದರು.

 

Copyright@2018 Chitralahari | All Rights Reserved. Photo Journalist K.S. Mokshendra,