KTV A Karnataka Television Ass.News

Monday, November 23, 2026

*ಕೆಟಿವಿಎ ನಿಂದ ಸಮಾಜಮುಖಿ ಕಾರ್ಯಕ್ರಮಗಳು*

      *’ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್’* ಆಗಸ್ಟ್ 2026ರಂದು ಚುನಾವಣೆ ನಡೆದು ಹಿರಿಯ ನಟ ಗಣೇಶ್‌ರಾವ್ ಕೇರ್ಸಕರ್ ಅತ್ಯದಿಕ ಮತಗಳಿಂದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಇವರ ಸಾರಥ್ಯದಲ್ಲಿ ಸಂಘದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ವಿಷಯವನ್ನು ತಿಳಿಸಲು ನೂತನ ಪದಾಧಿಕಾರಿಗಳೊಂದಿಗೆ ಮಾಧ್ಯಮದ ಮುಂದೆ ಹಾಜರಿದ್ದರು.

      ಅಧ್ಯಕ್ಷರು ಮಾತನಾಡಿ, ಸದರಿ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಆರು ಸಾಧಕರುಗಳಿಗೆ ಕರ್ನಾಟಕ ಕಲಾರತ್ನ ಪ್ರಶಸ್ತಿ ಪ್ರಧಾನ, ಪ್ರಣಯರಾಜ ಶ್ರೀನಾಥ್ ಅವರಿಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ, ಹಿರಿಯ ನಟಿ ಸವಿತಕ್ಕ ಜಾನಪದ ಗಾಯಕಿಗೆ ಕನ್ನಡ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುಂದಿನ ವರ್ಷ ಸಂಘವು ರಜತ ಮಹೋತ್ಸವ ಆಚರಿಸಲಿದೆ. ಅದರ ಕಾರ್ಯಕ್ರಮ ಹಮ್ಮಿಕೊಳ್ಳುವ ಸೌಭಾಗ್ಯ ನಮಗೆ ಸಿಕ್ಕಿದೆ. ನಿಂತುಹೊಗಿದ್ದ ’ಟಿವಿ ಠೀವಿ’ ಪತ್ರಿಕೆಯನ್ನು ಪ್ರಥಮ ಬಾರಿ ನೊಂದಣಿ ಮಾಡಿಸಿ ಚಾಲನೆಗೆ ತರಲಾಗಿದೆ. ಸದಸ್ಯರುಗಳಿಗೆ ಗ್ರೂಪ್ ಇನ್ಸೂರೆನ್ಸ್ ಜತೆಗೆ ಸರ್ಕಾರದಿಂದ ’ಕರ್ನಾಟಕ ಸಿನಿ ವರ್ಕರ‍್ಸ್ ಕಾರ್ಡ್’ ಮಾಡಿಸುವ ಯೋಜನೆ ಇದೆ. ಸದಸ್ಯತ್ವ ಪಡೆಯಲು 2500 ರಿಯಾಯತಿ ಮಾಡಲಾಗಿದೆ. ಸದಸ್ಯತ್ವ ಪಡೆಯದೇ ಇದ್ದವರಿಗೆ ಇದರಿಂದ ಅನುಕೂಲವಾಗಲಿದೆ. ತಂಡದೊಂದಿಗೆ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಕಿರುತೆರೆ ಅಕಾಡೆಮಿ, ಕಿರುತೆರೆ ನಿಗಮ/ಮಂಡಳಿ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸದಸ್ಯರುಗಳಿಗೆ ಗುರುತಿನ ಚೀಟಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ವಿಶೇಷವಾಗಿ ಮಾಧ್ಯಮದವರಿಗೆ ಸಂಘದಲ್ಲಿ ಸದಸ್ಯತ್ವ ಪಡೆಯಲು ಅನುವು ಮಾಡಿಕೊಡಲಾಗುವುದು. ಇನ್ನು ತರೆಹವಾರಿ ಯೋಜನೆಗಳನ್ನು ತರಲು ಚಿಂತನೆ ನಡೆಸಲಾಗಿದೆ. ಇದಕ್ಕೆಲ್ಲಾ ಪದಾಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿದೆ ಎಂದು ಹೇಳಲು ಖುಷಿಯಾಗುತ್ತದೆ. ಇದೇ 30, ಸೋಮವಾರದಂದು ಸಂಜೆ 4 ಗಂಟೆಗೆ ಡಾ.ಪುನೀತ್ ರಾಜ್‌ಕುಮಾರ್ ಆಡಿಟೋರಿಯಂ, ಯಡಿಯೂರು ಕರೆ ಮುಂಭಾಗದಲ್ಲಿ ಅದ್ದೂರಿ ಸಮಾರಂಭ ನಡೆಯಲಿದೆ. ಸಚಿವರುಗಳು, ಲೋಕಸಭಾ ಸದಸ್ಯರು, ನಾಯಕ ನಟ ಧ್ರುವಸರ್ಜಾ ಸೇರಿದಂತೆ ಗಣ್ಯರುಗಳು ಆಗಮಿಸಲಿದ್ದಾರೆ. ತಾವುಗಳು ಎಲ್ಲರೂ ಬರಬೇಕೆಂದು ಕೋರಿಕೊಂಡು ಗಣೇಶ್‌ರಾವ್ ಕೇರ್ಸಕರ್ ಮೈಕನ್ನು ಹಸ್ತಾಂತರಿಸಿದರು.

     ಚಿತ್ರೀಕರಣದ ಸೆಟ್‌ಗೆ ಭೇಟಿ ನೀಡಿ ಕಲಾವಿದರು, ತಂತ್ರಜ್ಘರುಗಳಿಗೆ ಅರಿವು ಮೂಡಿಸಿ ಸದಸ್ಯತ್ವ ಅಭಿಯಾನ ಶುರುಮಾಡಿದೆ ಎಂದು ಗೌರವಾಧ್ಯಕ್ಷೆ ಪದ್ಮವಾಸಂತಿ ಹೇಳಿದರು. ಗಣೇಶ್ ವ್ಯಕ್ತಿಯಲ್ಲ. ಶಕ್ತಿ ಅಂತ ಸುಂದರರಾಜ್ ಬಣ್ಣಿಸಿದರು. ಶಂಕರ್‌ನಾಗ್, ಪುನೀತ್‌ರಾಜ್‌ಕುಮಾರ್ ಅವರಂತೆ ಅಧ್ಯಕ್ಷರು ಕೆಲಸ ಮಾಡುತಿದ್ದಾರೆಂದು ’ಅಮೇರಿಕಾ ಅಮೇರಿಕಾ’ ಖ್ಯಾತಿಯ ಹೇಮಾ ಪಂಚಮುಖಿ ಹೇಳಿದರು. ಶಿಕ್ಷಣದಲ್ಲಿ ಸಾಧನೆ ಮಾಡಿದವರಿಗೆ ಗೌರವ ನೀಡುತ್ತಿರುವುದು ಸಂತಸ ತಂದಿದೆ ಅಂತಾರೆ ವನಿತಾವಾಸು. ಮೂರು ತಿಂಗಳಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇಷ್ಟಕ್ಕೆ ನಿಲ್ಲಿಸದೆ ಯಾರಿಗೂ ಬಗ್ಗದೆ,ಜಗ್ಗದೆ ವೇಗ ತಗ್ಗಿಸಬೇಡಿರೆಂದು ಅಭಿನಯ ಕಿವಿಮಾತು ಹೇಳಿದರು. ಕಲಾವಿದರ ವಲಯದಿಂದ ಗಣೇಶ್ ಕೇರ್ಸಕರ್ ಆಯ್ಕೆಯಾಗಿರುವುದು ಇದೇ ಮೊದಲು ಎಂದು ಎಸ್ಕಾರ್ಟ್ ಶ್ರೀನಿವಾಸ್ ಮಾಹಿತಿ ಹೊರ ಹಾಕಿದರು. ಆಂತರಿಕ ತೊಂದರೆ ಇರುವುದರಿಂದ ಸಂಘದಿಂದ ಒಂದು ರೂಪಾಯಿ ತೆಗೆಯದೆ, ಸಮಾರಂಭ ಏರ್ಪಡಿಸಲಾಗುತ್ತಿದೆ ಎಂದು ಕಾರ್ಯದರ್ಶಿ ಬೆಳ್ಳಿ ಚುಕ್ಕಿ ವೀರೇಂದ್ರ ಹೇಳಿದರು. ಬೇರೆ ಭಾಷೆಯಿಂದ ಬರುವ ಹಾಗೂ ಸ್ಥಳಿಯ ಕಲಾವಿದರಿಗೆ ಕಡ್ಡಾಯವಾಗಿ ಕಲಾವಿದರಿಗೆ ಗುರುತಿನ ಚೀಟಿ ನೀಡಬೇಕೆಂದು ವೀಣಾ ವೆಂಕಟೇಶ್ ಸಲಹೆ ನೀಡಿದರು. ಪ್ರತಿ ತಿಂಗಳು ನಾಲ್ಕನೇ ಭಾನುವಾರ ಸದಸ್ಯರುಗಳಿಂದ ಕರೋಕೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು  ಪ್ರಧಾನ ಸಂಚಾಲಕ ಎನ್.ಟಿ.ರಾಮಸ್ವಾಮಿ ಗೌಡ ಹೇಳಿದರು.

      ಗೋಷ್ಠಿಯಲ್ಲಿ ತಿಮ್ಮರಾಜು, ಖಜಾಂಚಿ ಗುರುಮೂರ್ತಿ ಹೆಗ್ದೆ, ಹರೀಶ್, ಹಿರಿಯೂರು ರಾಘವೇಂದ್ರ, ತನುಜಾ ಪ್ರಕಾಶ್ ಮುಂತಾದವರು ಉಪಸ್ತಿತರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,