Kalaagni.Film News

Thursday, November 19, 2026

 

*ಸತ್ಯ ಘಟನೆಯ ಕಾಲಾಗ್ನಿ*

*ಮರ್ಡರ್ ಮಿಸ್ಟ್ರಿ ಚಿತ್ರ*

*ಸಿನಿಮಾರೂಪದಲ್ಲಿ ಕೋರಮಂಗಲದಲ್ಲಿ ನಡೆದ ಘಟನೆ*

*ಸೆಸ್ಪೆನ್ಸ್, ಥ್ರಿಲ್ಲರ್ ಕುರಿತಾದ ಚಿತ್ರ*

 

      ಚಂದನವನದಲ್ಲಿ ನೈಜ ಘಟನೆಯ ಅಂಶಗಳನ್ನು ಬಳಸಿಕೊಂಡ ಚಿತ್ರಗಳು ಹೆಚ್ಚಿಗೆ ಬರುತ್ತಿವೆ. ಅದಕ್ಕೆತಕ್ಕಂತೆ ನೋಡುಗರು ಇಂತಹ ಸಿನಿಮಾಗಳನ್ನು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ *’ಕಾಲಾಗ್ನಿ’* ಸಿನಿಮಾ ಸೇರ್ಪಡೆಯಾಗುತ್ತದೆ. ’ನಿಮ್ಮ ಮೈ ನೆರಳು ಕೂಡ ನಿಮ್ಮನ್ನು ಬೆನ್ನಟ್ಟಿದಾಗ’ ಎಂಬ ಕ್ಯಾಚಿ ಅಡಿಬರಹ ಇರಲಿದೆ. ಗುರುವಾರದಂದು ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನಡೆಯಿತು. ನಿರ್ಮಾಪಕರ ತಾಯಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಮಗನಿಗೆ ಶುಭ ಹಾರೈಸಿದರು.

 

      ಎಸ್.ಎಲ್.ಆರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಇಂಟಿರಿಯರ್ ಡೇಕೋರೇಟ್ ಉದ್ಯಮ ನಡೆಸುತ್ತಿರುವ ಬೆಂಗಳೂರಿನ *ಆರ್.ರಾಜು ಬಂಡವಾಳ* ಹೂಡುತ್ತಿರುವುದು ಹೊಸ ಅನುಭವ. ಇವರೊಂದಿಗೆ ಶಿವರುದ್ರಾಚಾರ್.ಎಂ.ಸಿ, ಬಾಲ್ಯಾ ನಾಯಕ್, ರಂಗೇಗೌಡರು, ವೆಂಕಟೇಶ್ ಮೂರ್ತಿ ಮತ್ತು ಹಣಮಂತರಾಯಪ್ಪ ಮುನ್ನಳ್ಳಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. *ಸಿ.ಮಲ್ಲಿಕಾರ್ಜುನ್ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ* ಮಾಡುತ್ತಿದ್ದಾರೆ.

      ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಮೈಸೂರಿನ ವೇದಶ್ರೀ, ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಮೀಸೆ ಆಂಜನಪ್ಪ, ಉಗ್ರಂ ರವಿ, ಮಂಜುನಾಥ್ ಭಟ್, ಸತೀಶ್‌ಗೌಡ್ರು, ಪಟ್ರೆ ನಾಗಣ್ಣ, ಭವಾನಿ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಚಿರಂಜೀವಿ ಅಭಿರಾಮ್, ಛಾಯಾಗ್ರಹಣ ವೀನಸ್ ಮೂರ್ತಿ, ಸಾಹಸ ಸಾಗರ್, ಸಂಕಲನ  ಮಂಜುನಾಥ್ ಹೊಸಮನೆ ಅವರದಾಗಿದೆ.

 

       ನಂತರ ಮಾತನಾಡಿದ ನಿರ್ದೇಶಕರು, ಕಥೆಗೆ ಸೂಕ್ತ ನಾಯಕನನ್ನು ತಲಾಷ್ ಮಾಡಲಾಗುತ್ತಿದೆ. ಸದ್ಯದಲ್ಲೆ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ. 1998, ಕೋರಮಂಗಲದಲ್ಲಿ ನಡೆದ ಘಟನೆಯನ್ನು ಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ. ಅಣ್ಣ ತಮ್ಮನಿಗಾಗಿ ತ್ಯಾಗ ಮಾಡುವ, ಮುಂದೆ ಆತನ ಬದುಕಲ್ಲಿ ಘೋರ ಘಟನೆ ನಡೆದಾಗ ಯಾವ ರೀತಿ ಹೊರಳುದಾರಿಗೆ ಹೋಗುತ್ತಾನೆ ಎಂಬುದನ್ನು ಸೆಸ್ಪೆನ್ಸ್, ಥ್ರಿಲ್ಲರ್ ಕ್ರೈಂನೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಗುರುವಾರ ಶುಭದಿನವಾಗಿದ್ದರಿಂದ ಇಂದಿನಿಂದಲೇ ಚಿತ್ರೀಕರಣ ಶುರು ಮಾಡಲಾಗುವುದು. ಮಾಧ್ಯಮದ ಸಹಕಾರ ಬೇಕೆಂದು ಸಿ.ಮಲ್ಲಿಕಾರ್ಜುನ್ ಕೋರಿದರು.

 

      ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಕಳಸ, ಸಕಲೇಶಪುರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,