Maarigedaari.Film News

Thursday, November 12, 2026

 

*ಮಾರಿಗೆ ದಾರಿ ಟ್ರೈಲರ್ ಬಿಡುಗಡೆ*

 

      *’ಮಾರಿಗೆ ದಾರಿ’* ಚಿತ್ರದ ಟ್ರೇಲರನ್ನು ನಟ ಶ್ರೇಯಸ್‌ಮಂಜು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಬೆಂಗಳೂರು ಮೂಲದ ಯುವ ಪ್ರತಿಭೆ *ಅಗಸ್ತ್ಯ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ನಿರ್ದೇಶನ ಜತೆಗೆ ನಾಯಕನಾಗಿ* ಅಭಿನಯಿಸಿದ್ದಾರೆ. ರಾಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ *ರಾಧ ಬಂಡವಾಳ* ಹೂಡಿದ್ದಾರೆ.

 

     ಐದಾರು ಸಿನಿಮಾಗಳಲ್ಲಿ ನಟಿಸಿ, ಸದ್ಯ ’ಲಕ್ಷೀ ನಿವಾಸ’ ಧಾರವಾಹಿಯಲ್ಲಿ ಬ್ಯುಸಿ ಇರುವ ಮಹಾಲಕ್ಷೀ ನಾಯಕಿ. ಉಳಿದಂತೆ ಕಾಕ್ರೋಚ್ ಸುಧಿ, ಬಲರಾಜವಾಡಿ, ಬೆನಕ ನಂಜಪ್ಪ, ವರ್ಧನ್, ಪ್ರದೀಪ್‌ಪೂಜಾರಿ, ಮಂಡ್ಯ ಸ್ಟಾರ್ ಅನಂತಕುಮಾರ್, ತಾರಕ ರಾಮ್, ನವಾಜ್ ಮುಂತಾದವರು ಅಭಿನಯಿಸಿದ್ದಾರೆ.

 

       ಕಿನ್ನಾಳ್‌ರಾಜ್-ಪ್ರಮೋದ್‌ಮರವಂತೆ-ತ್ರಿಲೋಕ ತ್ರಿವಿಕ್ರಮ ಸಾಹಿತ್ಯದ ನಾಲ್ಕು ಗೀತೆಗಳಿಗೆ ರಿಯೋಆಂಟೋನಿ ಸಂಗೀತ ಸಂಯೋಜಿಸಿದ್ದಾರೆ. ಜಗದೀಶ್‌ಗೌಡ ಛಾಯಾಗ್ರಹಣ ಮತ್ತು ಸಂಕಲನ, ಸಾಹಸ ಸೈಕ್ ಸೂರಿ ಅವರದಾಗಿದೆ.

  

       ಟೈಮ್ ಅನ್ನೋದು ಒಂದು ಖಾಯಿಲೆ ಇದ್ದ ಹಾಗೆ, ಇವತ್ತು ಇರೋದು ನಾಳೆ ಇದ್ದಂಗೆ ನಾಳಿದ್ದು ಇರೋಲ್ಲ. ಯಾವನು ಆದ್ರೆ ನನಗೇನು, ಕಣ್ಣಿಗೆ ಕಾಣಿಸಿಕೊಂಡರೆ ಕಾಲುಗಳು ಇರೋಲ್ಲ. ನನಗೆ ಹುಚ್ಚು ಹಿಡಿದಿದೆ. ಮತ್ತೆ ರಕ್ತ ನೋಡಬೇಕು ಅನಿಸಿದೆ ಇಂತಹ ಪವರ್‌ಫುಲ್ ಮಾಸ್ ಸ್ಯಾಂಪಲ್ ಡೈಲಾಗ್‌ಗಳು ತುಣುಕುಗಳಲ್ಲಿ ಕಾಣಿಸಿಕೊಂಡವು.

       ನಂತರ ಮಾತನಾಡಿದ ನಿರ್ದೇಶಕರು ಸಿನಿಮಾವು ಎಮೋಷನಲ್ ರಿವೇಂಜ್ ಅಂಶಗಳನ್ನು ಒಳಗೊಂಡಿದೆ. ಹೆಣ್ಣಿನ ಶೋಷಣೆ ವಿರುದ್ದ ಹೋರಾಡುವ ಒಬ್ಬ ವೀರನ ಜರ್ನಿಯಾಗಿದೆ.. ಇಂದಿನ ಮಣ್ಣಿನ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇಷ್ಟನ್ನು ಮಾತ್ರ ಹೇಳಬಹುದು ಶಿವ ಹಾಗೂ ಮಾರಿ ಹೀಗೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನಾಯಕಿ ಗೈರು ಹಾಜರಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ, ನಮ್ಮ ಕಡೆಯಿಂದ ಸಂಭಾವನೆ ಚುಕ್ತಾ ಆಗಿದೆ. ಆದರೂ ಅವರು ಸ್ಪಂದಿಸುತ್ತಿಲ್ಲ. ಕ್ಲೈಮಾಕ್ಸ್ 2.18 ನಿಮಿಷದ ಫೈಟ್‌ನ್ನು ಒಂದೇ ಟೇಕ್‌ದಲ್ಲಿ ಶೂಟ್ ಮಾಡಲಾಗಿ, ಇದಕ್ಕಾಗಿ ಮೂರು ತಿಂಗಳು ತಾಲೀಮು ನಡೆಸಲಾಯಿತು. ಕೇವಲ ಎರಡು ನಿಮಿಷದ ಟ್ರೇಲರ್‌ನಿಂದ ಸಿನಿಮಾದ ತೂಕ ಅಳೆಯಲಾಗದು. ಚಿತ್ರಮಂದಿರಕ್ಕೆ ಬಂದರೆ ನಿಮಗೆ ಖಂಡಿತ ಇಷ್ಟವಾಗುತ್ತದೆಂದು ಮಾಧ್ಯಮದ ಪ್ರಶ್ನೆಗಳಿಗೆ ಅಗಸ್ತ್ಯ ಉತ್ತರವಾದರು.

 

       ಮನೆಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಉಳಿಸಿಕೊಂಡ ಹಣವನ್ನು ಚಿತ್ರಕ್ಕೆ ಹಾಕಿದ್ದೇನೆ. ಮಗ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯ ಕಾಣಬೇಕೆಂಬುದೇ ನನ್ನ ಆಸೆ ಅಂತ ರಾಧ ಹೇಳಿಕೊಂಡ ಮಾತುಗಳು ಎಲ್ಲರ ಮನಸ್ಸು ಭಾರವಾಯಿತು.

 

        ವಾರಾಣಾಸಿ, ಬೆಂಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಡಕೇರಿ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ’ಪ್ರೇಮದ ಊರಲಿ’ ವಿತರಕ ಬಾಗೂರು ಪ್ರಶಾಂತ್ ಮುಖಾಂತರ ಚಿತ್ರವು ಇದೇ ತಿಂಗಳು ತೆರೆ ಕಾಣಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,