Mudhol.Miss and Mrs India.News

Wednesday, August 05, 2026

 

ಆಗಸ್ಟ್ .16ಕ್ಕೆ ಎಸಿ ಮಿಸ್ ಅಂಡ್ ಮಿಸ್ಟರ್ ಇಂಡಿಯಾ ಮೆಗಾ ಆಡಿಷನ್-

 ಮುಧೋಳ್ ಫಸ್ಟ್ ಸಾಂಗ್

 

  ಅಮೃತ ಸಿನಿಕ್ರಾಫ್ಟ್ ವತಿಯಿಂದ 9ನೇ ’ಮಿಸ್ ಅಂಡ್ ಮಿಸಸ್ ಇಂಡಿಯಾ ವುಮನ್ ಆಫ್ ಸಬ್ ಸ್ಟ್ಯಾನ್ಸ್’ ಸ್ಪರ್ಧೆ ನಡೆಯಲಿದೆ. ನಿನ್ನೆ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅಮೃತ ಸಿನಿಕ್ರಾಫ್ಟ್ ಸಂಸ್ಥಾಪಕಿ ಅಮೃತಾ ವಿಜಯ್ ರವಿಪಾಟಿ ಟಾಟಾ ಅವರು ಕಾರ್ಯಕ್ರಮದ  ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

    ಪ್ರತಿಭಾವಂತ ಮಹಿಳೆಯರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವುದು, ಅವರಲ್ಲಿ ಆತ್ಮ ವಿಶ್ವಾಸ ಬೆಳೆಸುವುದು ನಮ್ಮ ಉದ್ದೇಶ. ಪ್ರತಿ ವರ್ಷ ದುಬೈನಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆ ಈ ವರ್ಷ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸೀಜನ್ ನ ಮೆಗಾ ಆಡಿಷನ್ ಆಗಸ್ಟ್ .16ರಂದು ನಡೆಯಲಿದೆ. ಹಾಗೂ ಇದರ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ರೀಶ್ಮಾ ನಾಣಯ್ಯ ಅವರು ಆಯ್ಕೆಯಾಗಿದ್ದಾರೆ. ಜತೆಗೆ ಅಮೃತ ಸಿನಿಕ್ರಾಫ್ಸ್ ವತಿಯಿಂದ      ನಿರ್ಮಿಸಲಾಗುತ್ತಿರುವ ಮುಧೋಳ್ ಚಿತ್ರದ‌ ಫಸ್ಟ್ ಸಾಂಗನ್ನು ಆ.15ರಂದು ಲಾಂಚ್ ಮಾಡಲಾಗುವುದು ಹಾಗೂ ಚಿಂಟು ಸನ್ ಆಫ್ ವಿಶಾಲಾಕ್ಷಿ ಚಲನ ಚಿತ್ರದ ಫಸ್ಟ್ ಲುಕ್ ಕೂಡ ಅಂದೇ ರಿಲೀಸಾಗಲಿದೆ. ಅಲ್ಲದೆ ನಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಅಪ್ ಡೇಟ್ ಕೂಡ ನೀಡಲಾಗುವುದು ಎಂದು ಅಮೃತಾ ವಿಜಯ್ ಟಾಟಾ ಅವರು ತಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಹೊಸ ಚಿತ್ರಗಳ ಕುರಿತು ವಿವರಿಸಿದರು. ಈಗಾಗಲೇ ಮಿಸ್ ಅಂಡ್ ಮಿಸಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ 17 ಜನ ಸ್ಪರ್ಧಿಗಳ ಷಾರ್ಟ್ ಲಿಸ್ಟ್ ಕೂಡ ಆಗಿದೆ‌.

    ಈ ವರ್ಷದ ಬ್ರಾಂಡ್ ಅಂಬಾಸಿಡರ್ ಅದ ನಟಿ  ರೀಶ್ಮಾ ನಾಣಯ್ಯ ಮಾತನಾಡುತ್ತ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸೌಂದರ್ಯ ಸ್ಪರ್ಧೆಯನ್ನು ನಾನು ರೆಪ್ರೆಸೆಂಟ್ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗ್ತಿದೆ. ಇದೊಂದು ಸುಂದರ ವೇದಿಕೆ. ಮಹಿಳೆಯರು ತಮ್ಮ ಪ್ರತಿಭೆ ಪ್ರದರ್ಶಿಸಲು ಒಳ್ಳೆಯ ಅವಕಾಶವಿದು ಎಂದು ಹೇಳಿದರು. 

ನಟ ವಿಕ್ರಂ ರವಿಚಂದ್ರನ್ ಮಾತನಾಡುತ್ತ  ಮುಧೋಳ್ ಲೇಟಾಗ್ತಿರುವುದಕ್ಕೆ ಸ್ವಲ್ಪ ಬೇಜಾರಿದೆ‌. ಸಿನಿಮಾನ ಸ್ಟ್ರಾಂಗ್ ಆಗಿ ಕಟ್ಟಿಕೊಡಬೇಕು ಅನ್ನೋ ಪ್ರಯತ್ನದಲ್ಲಿ ತಡವಾಗಿದೆ. ನಿಯತ್ತಿಗೆ ಮತ್ತೊಂದು ಹೆಸರೇ ಮುಧೋಳ್, ನಾನು ಚಿತ್ರವನ್ನು ಕೈಗೆತ್ತಿಕೊಂಡ ಮೇಲೆ ಇವರು ಜತೆಯಾದರು. ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ರಿಲೀಸ್ ಮಾಡೋ ಪ್ಲಾನಿದೆ ಎಂದು ಹೇಳಿದರು. ಚಿಂಟು ಸನ್ನಾಫ್ ವಿಶಾಲಾಕ್ಷಿ ಚಿತ್ರದ ನಿರ್ದೇಶಕಿ ಮಾನಸಿ ಮಾತನಾಡಿ ನಮ್ಮ ಚಿತ್ರದಲ್ಲಿ ಹಿರಿಯನಟಿ ಲಕ್ಷ್ಮಿ, ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಅಮೃತಾ ಅವರ ಪತಿ ವಿಜಯ್ ಟಾಟಾ ಕೂಡ ಹಾಜರಿದ್ದು ತಮ್ಮ ಚಿತ್ರಗಳ ಪ್ರಗತಿಯ ಬಗ್ಗೆ ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,