Boss.Film News

Monday, August 03, 2026

 

*ತನುಷ್ ಶಿವಣ್ಣ ಅಭಿನಯದ ‘ಬಾಸ್’ ಚಿತ್ರದ ಬಿಡುಗಡೆಗೆ ದರ್ಶನ್ ಅವರ ಒಪ್ಪಿಗೆ* .

                                                                                           *ಲವ ವಿ ನಿರ್ದೇಶನದ ಈ ಚಿತ್ರ ಆಗಸ್ಟ್ 7 ರಂದು ತೆರೆಗೆ* .

 

ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಹಾಗೂ ಲವ ವಿ ನಿರ್ದೇಶನದ ’ಬಾಸ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿತ್ತು. ಈ ಚಿತ್ರದ ಬಿಡುಗಡೆಗೆ ತಡೆ ಕೋರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದರ್ಶನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ‘ಬಾಸ್’ ಚಲನಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಅಲ್ಲದೆ, ದರ್ಶನ್ ಅವರು ಸಹ "ಬಾಸ್" ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ಅವರ ಪರ ವಕೀಲರ ಮುಂದೆ ಹೇಳಿದ್ದಾರೆ. ಆಗಸ್ಟ್ 7 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿತ್ತು.  ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಹೈಕೋರ್ಟ್ ನಲ್ಲಿ ನಮ್ಮ ಚಿತ್ರ ಬಿಡುಗಡೆಗೆ ಅವಕಾಶ ಸಿಕ್ಕ ನಂತರ  ನಾನು ವಿಜಯಲಕ್ಷ್ಮಿ ದರ್ಶನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರ ಪರ ವಕೀಲರಾದ ಪ್ರಥಮ್ ಅವರು ವಿಜಯಲಕ್ಷ್ಮಿ ಅವರ ಜೊತೆಗೆ ಮಾತನಾಡಿ, ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿಕೊಟ್ಟರು. ನಾನು ವಿಜಯಲಕ್ಷ್ಮಿ ದರ್ಶನ್ ಅವರ ಜೊತೆಗೆ ಮಾತನಾಡಿದೆ. ಅವರು ಮೊದಲು ಕೇಳಿದ ಪ್ರಶ್ನೆ, ನಿಮ್ಮ ಸಿನಿಮಾದಲ್ಲಿ ನಮ್ಮ ಕುಟುಂಬದ ಕುರಿತಾದ ಯಾವುದೇ ಸನ್ನಿವೇಶಗಳು ಇಲ್ಲ ತಾನೆ ಎಂದರು. ನಾನು ಇಲ್ಲ ಅಂತ ಹೇಳಿದೆ. ನಮ್ಮ ವಕೀಲರು ನಿಮ್ಮ ಚಿತ್ರವನ್ನು ನೋಡಿ ನಮಗೆ ತಿಳಿಸುತ್ತಾರೆ. ಯಾವುದಾದರೂ ಕುಟುಂಬಕ್ಕೆ ಸಂಬಂಧಿಸಿದ ಸನ್ನಿವೇಶಗಳಿದ್ದರೆ ನೀವು ಅದನ್ನು ತೆಗೆಯಬೇಕಾಗುತ್ತದೆ ಎಂದರು. ನಾನು ಆಗಲಿ ಎಂದೆ. ವಕೀಲರಾದ ಪ್ರಥಮ್ ಅವರು ಚಿತ್ರ ನೋಡಿ,‌ ವಿಜಯಲಕ್ಷ್ಮೀ ದರ್ಶನ್ ಹಾಗೂ ದರ್ಶನ್ ಅವರಿಗೆ ವಿಷಯ ತಿಳಿಸಿದ್ದಾರೆ. ಮೊದಲಿನಿಂದಲೂ  ಹೊಸಬರ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಹಾಗೂ ಒಂದು ಚಿತ್ರ ನಿರ್ಮಾಣದ ಹಿಂದೆ ಎಷ್ಟು ಕಷ್ಟಗಳಿದೆ ಎಂದು ಅರಿತಿರುವ ದರ್ಶನ್ ಅವರು ಸುಪ್ರೀಂ ಕೋರ್ಟ್ ಗೆ ಹೋಗುವುದು ಬೇಡ. ಅವರು ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರು ಸಹ ಫೋನ್ ನಲ್ಲಿ ಮಾತನಾಡಿ ಚಿತ್ರ ಬಿಡುಗಡೆ ಮಾಡಿ. ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ದರ್ಶನ್ ದಂಪತಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಪ್ರೋತ್ಸಾಹ ನೀಡಿ ಎಂದು ಚಿತ್ರದ ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ತಿಳಿಸಿದರು.

                                      

ನಿರ್ದೇಶಕ ಲವ ಅವರು ಸಹ ಚಿತ್ರದ ಬಿಡುಗಡೆ ಕುರಿತು ಮಾಹಿತಿ ನೀಡಿದರು. ನಾಯಕಿ ಪಾಯಲ್ ಚಂಗಪ್ಪ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಶರತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,