ನೋ ಕೋಕೇನ್ ಕೊನೆ ದಿನದ ಶೂಟಿಂಗ್
ಬಿಗ್ ಬಾಸ್ ಪ್ರಥಮ್ ನಾಯಕ, ಹಿರಿಯ ಸಾಹಸ ಸಂಯೋಜಕ ಕೌರವ ವೆಂಕಟೇಶ್ ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ‘ನೋ ಕೋಕೇನ್’ ಸಿನಿಮಾದ ಕೊನೆ ದಿನದ ಚಿತ್ರೀಕರಣ ನಾಗರಬಾವಿಯಲ್ಲಿರುವ ಆರ್ಟ್ ಅಂಡ್ ಲೆನ್ಸ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ದ ಡಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್ ಎಂಬ ಅಡಿಬರಹವಿದೆ. ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ. ಅಂದು ಕಲಾವಿದರುಗಳಾದ ಹಿರಿಯ ನಟಿ ಭವ್ಯ, ನಾಯಕಿ ಆರ್ನಾ ಮೂಲೇರ್, ಶೋಭರಾಜ್, ಕೋಟ್ ಪ್ರಭಾಕರ್, ಮಿಮಿಕ್ರಿ ಗೋಪಿ, ಸುಶ್ಮಿತಾ ಮುಂತಾದವರು ಸೆಟ್‌ದಲ್ಲಿ ಹಾಜರಿದ್ದರು.
ಪತ್ರಕರ್ತರುಗಳು ಸೆಟ್‌ಗೆ ಭೇಟಿ ನೀಡಿದಾಗ ಪ್ರಥಮ್ ಭವ್ಯ ಮತ್ತು ಸುಶ್ಮಿತಾರಿಗೆ ಸೆಂಟಿಮೆಂಟ್ ದೃಶ್ಯವನ್ನು ಹೇಳಿಕೊಡುತ್ತಿದ್ದರು. ಶಾಟ್ ಓಕೆ ಆದಾಗ ತಂಡವು ಮಾತಿಗೆ ಕುಳಿತುಕೊಂಡತು.
ಪ್ರಥಮ್ ಮಾತನಾಡಿ ಇಂದು ಸಣ್ಣ ಪುಟ್ಟ ಪ್ಯಾಚ್ ಅಪ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ಸಿನಿಮಾದ ಕುರಿತು ಹೇಳುವುದಾದರೆ ನೈಜಿರಿಯಾದಿಂದ ೧೦೦೦ ಕೋಟಿ ಮೌಲ್ಯದ ಕಂಟೈನರ್ ಬರುತ್ತದೆ. ಅದನ್ನು ಬೆಂಗಳೂರಿನಿಂದ ಗೋವಾಗೆ ಸಾಗಿಸಲು ದುರುಳರು ಯೋಜನೆ ಹಾಕಿಕೊಂಡಿರುತ್ತಾರೆ. ಯಾವುದೇ ಕಾರಣಕ್ಕೂ ಅದು ತಲುಪಬಾರದು ಎನ್ನುವ ಧೋರಣೆ ನನ್ನದಾಗಿರುತ್ತದೆ. ಇದರ ಮಧ್ಯೆ ಇಂಟರ್‌ಪೂಲ್‌ನವರಿಂದಲೂ ಟಾಸ್ಕ್ ಆಗದೆ ಇದ್ದಾಗ, ಕೇಂದ್ರ ಸರ್ಕಾರವು ಮಹತ್ವದ ನಿರ್ಣಯ ತೆಗೆದುಕೊಳ್ಳುತ್ತದೆ. ಕೊನೆಗೆ ನಾಯಕ ಮತ್ತು ನಾಯಕಿ ಇಬ್ಬರು ಚಾಣಾಕ್ಷತನದಿಂದ ಅದನ್ನು ಯಾವ ರೀತಿ ನಾಶ ಮಾಡುತ್ತಾರೆ ಎಂಬುದನ್ನು ಹಾಸ್ಯ, ಆಕ್ಷನ್‌ನಿಂದ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಾಧ್ಯಮ ಸಹಕಾರಬೇಕೆಂದು ಕೇಳಿಕೊಂಡರು.
ಕೌರವವೆಂಕಟೇಶ್ ಮಾತನಾಡಿ ಪ್ರಥಮ್ ಅವರು ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕಲಾವಿದರು ಚಿತ್ರರಂಗಕ್ಕೆ ಇರಬೇಕೆಂದು ಹೇಳಿದರು.
ತಾಯಿಯಾಗಿ ಕಾಣಿಸಿಕೊಂಡಿರುವ ಭವ್ಯ, ಒಳ್ಳೆ ಪೋಲೀಸ್ ಆಯುಕ್ತರಾಗಿ ಶೋಭರಾಜ್, ನಾಯಕಿ ಆರ್ನಾ ಮೂಲೇರ್, ಬೇಜವಬ್ದಾರಿ ಇನ್ಸ್‌ಪೆಕ್ಟರ್ ಆಗಿ ಮಿಮಿಕ್ರಿಗೋಪಿ, ನಾಯಕನ ತಂಗಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸುಶ್ಮಿತಾ ಮೊನ್ನಯೆಷ್ಟೇ ರಿಯಾಲಿಟಿ ಶೋದ ಜೋಡಿ ನಂ.೧ರಲ್ಲಿ ವಿಜೇತರಾದ ಕೋಟೆ ಪ್ರಭಾಕರ್ ಪತ್ನಿಯೊಂದಿಗೆ ಆಗಮಿಸಿ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.
ಯೋಗರಾಜಭಟ್-ಭರ್ಜರಿ ಚೇತನ್ ಸಾಹಿತ್ಯದ ಗೀತೆಗಳಿಗೆ ಡಿ.ಆರ್.ಕಲ್ಕಿ ಅಭಿಷೇಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಸಾಮ್ರಾಟ್, ಸಂಕಲನ ರಘು ಅವರದಾಗಿದೆ.