Ayogya 2.Film News

Tuesday, July 21, 2026

 

*ಆಯೋಗ್ಯ-2 ಮೂರನೇ ಹಾಡು ರಿಲೀಸ್*

 

*ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆ*

 

 

ಸತೀಶ್ ನೀನಾಸಂ, ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಚಿತ್ರದ ಮೂರನೇ ಹಾಡು ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ’ಮುದ್ದು ಮುದ್ದು ಪುಟ್ಟಲಕ್ಷ್ಮಿ’  ಹಾಗೂ ಅಣ್ಣಾ ಬಂದ್ರೆ ಜೋಶ್ ಬತ್ತದೆ ಎಂಬ ಹಾಡುಗಳಿಗೆ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರತಂಡ, ಇದೀಗ ’ಹುಡ್ಗೀರ್ ಡೇಂಜರಸ್’ ಎಂಬ ಹಾಡನ್ನು ರಿಲೀಸ್ ಮಾಡಿದೆ. ಮಹೇಶ್ ಕುಮಾರ್ ನಿರ್ದೇಶವಿರುವ ಈ ಚಿತ್ರ ಆಗಸ್ಟ್ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

 

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ’ಬಹದ್ದೂರ್’ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ವಿಜಯ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸಂತೋಷ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ.ಮುನೇಗೌಡ ನಿರ್ಮಿಸಿದ್ದಾರೆ.

 

 

’ಅಯೋಗ್ಯ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಗೆಲ್ಲುವುದಕ್ಕೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾವು ಚಿರಋಣಿ. ನಿರ್ದೇಶಕ ಮಹೇಶ್ ಕುಮಾರ್ ಮಂಡ್ಯದ ಒಂದು ಹಳ್ಳಿಯ ಕಥೆಯಲ್ಲಿ ಜನರನ್ನು ರಂಜಿಸುವಂತಹ ಕಥೆ ಹೇಳಿದ್ದರು. ಆಯೋಗ್ಯ-2 ಸಿನಿಮಾದ ಕಂಟೆಂಟ್ ಕೂಡ ಒಂದು ಹಳ್ಳಿಯ ಕಥೆಯಾಗಿರದೇ ರಾಜ್ಯದ ಪ್ರತಿಹಳ್ಳಿಗು ತಲುಪುವಂತಹ ಸಬ್ಜೆಕ್ಟ್’ ಎಂದರು ನೀನಾಸಂ ಸತೀಶ್.

’ಆಯೋಗ್ಯ ಹಾಗೂ ಆಯೋಗ್ಯ 2 ಈ ಎರಡು ಸಿನಿಮಾಗಳನ್ನು ಹೆಚ್ಚು ಇಷ್ಟಪಟ್ಟು , ಕಥೆಯನ್ನು ಎಂಜಾಯ್ ಮಾಡುತ್ತ ಅಭಿನಯಿಸಿದ ಸಿನಿಮಾ. ಆಯೋಗ್ಯ 2 ಸಿನಿಮಾವನ್ನು ನಮ್ಮ ವಿಐಪಿಗಳೊಂದಿಗೆ (ಪ್ರೇಕ್ಷಕರು) ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡಲು ಕಾಯುತ್ತಿದ್ದೇನೆ, ಎಂಬುದು  ರಚಿತಾರಾಮ್ ಅನಿಸಿಕೆ.

 

ನಾನು ಡಿ ಬಾಸ್ ಅಪ್ಪಟ ಅಭಿಮಾನಿ. ಡಿ ಬಾಸ್ ಯಾವಾಗಲೂ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟೀಸ್ ಎಂದೇ ಪ್ರೀತಿಸುತ್ತಾರೆ. ನಮ್ಮ ಆಯೋಗ್ಯ 2 ಚಿತ್ರತಂಡ ಹುಬ್ಬಳ್ಳಿ ಭಾಗದ ಪ್ರೇಕ್ಷಕರ ಎದುರು ಮೂರನೇ ಹಾಡನ್ನು ರಿಲೀಸ್ ಮಾಡಿದ್ದೇವೆ. ಎಲ್ಲರೂ ಹಾರೈಸಿ ಎಂದರು ನಿರ್ದೇಶಕ ಮಹೇಶ್ ಕಮಾರ್.

 

 

ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ‘ಶಾಖಾಹಾರಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಶ್ವಜಿತ್ ರಾವ್ ಈ ಚಿತ್ರದ ಕ್ಯಾಮೆರಾಮನ್. ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,