Appu Cup-4.nEWS

Saturday, July 04, 2026

 

*"ಅಪ್ಪು ಕಪ್ ಸೀಸನ್ 4" ಗೆ  ಅದ್ದೂರಿ ಚಾಲನೆ** .  

 

 ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ

 "ಅಪ್ಪು ಕಪ್"(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಮೂರು ಸೀಸನ್ ಅದ್ದೂರಿಯಾಗಿ ನಡೆದಿದೆ. ಇದೇ ಜುಲೈ 24, 25, 26 ರಂದು ಲೀಗ್ ಪಂದ್ಯಗಳು ನಡೆಯಲಿದೆ. "  ಇತ್ತೀಚೆಗೆ "ಅಪ್ಪು ಕಪ್ ಸೀಸನ್ 4" ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ.ಪ್ರಭಾಕರ್, ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿಗೋಲ್ಡ್ ಪ್ಯಾಲೆಸ್ ಮಾಲೀಕರಾದ ಟಿ.ಎ ಶರವಣ ಹಾಗೂ ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ  ಸಾ.ರಾ.ಗೋವಿಂದು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  "ಅಪ್ಪು ಕಪ್" ನಲ್ಲಿ ಭಾಗವಹಿಸುತ್ತಿರುವ ಹತ್ತು ತಂಡಗಳ ಮಾಲೀಕರು, ನಾಯಕರು, ರಾಯಭಾರಿಗಳು, ಮೆನ್ ಹಾಗೂ ವುಮನ್  ಐಕಾನ್ ಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ "ಅಪ್ಪು ಕಪ್ ಸೀಸನ್ 4" ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಉದ್ಘಾಟನಾ ಸಮಾರಂಭ ನಡೆದಿದೆ.

" ಅಪ್ಪು ಕಪ್" ಆರಂಭದಿಂದಲೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆಗೆ ಇದ್ದಾರೆ. ಅವರಿಗೆ ಹಾಗೂ ಟಿ.ಎ. ಶರವಣ ಅವರು ಸೇರಿದಂತೆ ಎಲ್ಲಾ ಗಣ್ಯರಿಗೆ ಧನ್ಯವಾದ. ಈ ಬಾರಿಯ "ಅಪ್ಪು ಕಪ್" ನ ಪಂದ್ಯಗಳು ಜುಲೈ 24,25,26 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪಂದ್ಯದ ನೇರ ಪ್ರಸಾರ ಕೂಡ ಇರುತ್ತದೆ. ಫೈನಲ್ ಯಾವ ಸ್ಥಳದಲ್ಲಿ ನಡೆಯುತ್ತದೆ ಎಂಬುದನ್ನು ಕೂಡ ಮುಂದೆ ತಿಳಿಸಲಾಗುವುದು ಆಯೋಜಕರಾದ ಚೇತನ್ ಸೂರ್ಯ ಹೇಳಿದರು‌.

"ಅಪ್ಪು ಕಪ್’ ಆರಂಭವಾದ ದಿನದಿಂದಲೂ ನಾನು ಚೇತನ್ ಸೂರ್ಯ ಅವರ ಜೊತೆಗೆ ಇದ್ದೇನೆ. ಮುಂದೆ ಕೂಡ ಇರುತ್ತೇನೆ ಎಂದು ಟಿ.ಎ. ಶರವಣ ತಿಳಿಸಿದರು. ಕೆ.ವಿ.ಪ್ರಭಾಕರ್ ಮತ್ತು ಸಾ.ರಾ.ಗೋವಿಂದು  ಅವರು ಸಹ " ಅಪ್ಪು ಕಪ್ ಸೀಸನ್ 4" ಯಶಸ್ವಿಯಾಗಲೆಂದು ಹಾರೈಸಿದರು.

 

ಅಪ್ಪು ಕಪ್ ಸೀಸನ್ 4 ರಲ್ಲಿ ಭಾಗವಹಿಸುತ್ತಿರುವ ತಂಡಗಳ ವಿವರ

 

 ೧) "ವೀರ ಕನ್ನಡಿಗ ಬುಲ್ಸ್" ಮಾಲೀಕರು ಮೊನೀಶ್ ಸಿ, ನಾಯಕ ದಿಗಂತ್ ಹಾಗೂ ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್.

 ೨) ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ಅರ್ಜುನ್ , ಸ್ಟಾರ್ ರಾಯಭಾರಿ ರವಿಶಂಕರ್.               

೩) "ಜಾಕಿ ರೈಡರ್ಸ್" ಮಾಲೀಕರು ವಿನುತ ಸುನೀಲ್, ‌ನಾಯಕ ಮನೋರಂಜನ್ ರವಿಚಂದ್ರನ್, ಸ್ಟಾರ್ ರಾಯಭಾರಿ ಮೋಹನ್. 

 ೪) "ಮೌರ್ಯ ಸ್ಟ್ರೈಕರ್ಸ್" ಮಾಲೀಕರು ನರಸಿಂಹಮೂರ್ತಿ, ನಾಯಕ ಹರೀಶ್ ನಾಗರಾಜ್ , ಸ್ಟಾರ್ ರಾಯಭಾರಿ ನಾಗೇಂದ್ರ ಅರಸ್.          

೫)"ಯುವರತ್ನ ಚಾಂಪಿಯನ್ಸ್ " ಮಾಲೀಕರು ಮಂಜು ಹಾಗೂ ವಿನೋದ್ ರಾಜ್ , ನಾಯಕ ಅವಿನಾಶ್ ದಳಪತಿ, ಸ್ಟಾರ್ ರಾಯಭಾರಿ ಅನಿರುದ್ಧ್ ಜತ್ಕರ್. 

 ೬) ಪವರ್ ಪೈತಾನ್ಸ್, ಮಾಲೀಕರು ಕೆ.ವಿ.ಪ್ರಭಾಕರ್ ಹಾಗೂ ಅರ್ಜುನ್ ಸೋಮಶೇಖರ್, ನಾಯಕ ಸದಾಶಿವ ಶೆಣೈ, ಸ್ಟಾರ್ ರಾಯಭಾರಿ ಅವಿನಾಶ್ ಎಸ್.ಡಿ . 

  ೭)ಗಂಧದಗುಡಿ ವಾರಿಯರ್ಸ್ ಮಾಲೀಕರು ವಿನಯ್ ಹಾಗೂ ಭರತ್ ಕುಮಾರ್, ನಾಯಕ ವಿಕ್ರಮ್ ರವಿಚಂದ್ರನ್, ಸ್ಟಾರ್ ರಾಯಭಾರಿ ಧರ್ಮಣ್ಣ.                     

 ೮) "ಜೇಮ್ಸ್ ವಾರಿಯರ್ಸ್" ಮಾಲೀಕರು ಪುಟ್ಟಸ್ವಾಮಿ - ನೆವಿ ಮಂಜು, ನಾಯಕ ರವಿಚೇತನ್, ಸ್ಟಾರ್ ರಾಯಭಾರಿ ರಾಜೇಶ್ ನಟರಂಗ.

 ೯)"ದೊಡ್ಮನೆ ಡ್ರಾಗನ್ಸ್"  ಮಾಲೀಕರು  ನಿರಂತರ ಗಣೇಶ್, ನಾಯಕ ಇಂದ್ರಜಿತ್ ಲಂಕೇಶ್, ‌ ರಾಯಭಾರಿ ಬಹದ್ದೂರ್ ಚೇತನ್ ಕುಮಾರ್.      

೧೦) "ಅರಸು ಹಂಟರ್ಸ್",   ಮಾಲೀಕರು ಪಂಚಾಕ್ಷರಯ್ಯ ಹಿರೇಮಠ, ನಾಯಕ ಇಮ್ರಾನ್ ಸರ್ದಾರಿಯಾ, ಸ್ಟಾರ್ ರಾಯಭಾರಿ ಭುವನ್ ಗೌಡ .

 

Copyright@2018 Chitralahari | All Rights Reserved. Photo Journalist K.S. Mokshendra,