Ananthara E Kissan Tv.News

Monday, September 21, 2026

 

ಅನಂತರ ಕಿಸ್ಸಾನ್ ಟಿವಿ-2

ಚಿತ್ರದ ಟ್ರೈಲರ್ ಬಿಡುಗಡೆ

 

  ಪೀಣ್ಯದಲ್ಲಿ ಇಂಡಸ್ಟ್ರಿ ನಡೆಸುತ್ತಿರುವ ಡಿ.ತ್ರಿಲೋಕ್ ಚಂದರ್ ಅವರೀಗ ಹೊಸ ಚಲನಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ‌. ಜತೆಗೆ ತರು ಫಿಲಂ ಅಕಾಡೆಮಿ ಸಂಸ್ಥೆ ಅಡಿ "ಅನಂತರ ಇ ಕಿಸ್ಸಾನ್ ಟಿವಿ-2" ಎಂಬ ಈ ಚಲನಚಿತ್ರವನ್ನು ತಾವೇ ನಿರ್ಮಾಣ ಸಹ  ಮಾಡಿದ್ದಾರೆ.

     ಈಗಾಗಲೇ ತನ್ನ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಚಿತ್ರದ ನಾಯಕನಾಗಿ ಯೋಗೇಶ್ ಗೌಡ, ನಾಯಕಿಯರಾಗಿ ಯಶಸ್ವಿನಿ, ರಮ್ಯ, ಸುಧಾ,

ಪವನ್ ಚಾರಿ, ವಾತ್ಸಲ್ಯ ಮುಂತಾದವರು ನಟಿಸಿದ್ದಾರೆ. ಸೃಜನ್, ಸುಹಾಸ್ ಅವರ ಛಾಯಾಗ್ರಹಣ, ಜೆವಿನ್ಸನ್ ಲೆವಿಸ್ ಅವರ ಸಂಗೀತ ಸಂಯೋಜನೆ ಹಾಗೂ ಸಂಕಲನ ಈ ಚಿತ್ರಕ್ಕಿದೆ.

   ಗ್ರಾಮೀಣ ಪರಿಸರದಲ್ಲಿ ಮುಗ್ಧ ಯುವಕನ ಸುತ್ತ ನಡೆಯುವ ಕಥೆಯಿದು. ಸ್ನೇಹಿತರ ಸಹವಾಸದಿಂದ ಕೊಲೆ ಪ್ರಕರಣದಲ್ಲಿ ಸಿಲುಕಿ, ಜೈಲಿಗೆ ಹೋಗಿ ಹೊರಬಂದ ಮೇಲೆ ಆ ಯುವಕನ ಮುಂದಿನ ಜೀವನ ಹೇಗಿರುತ್ತೆ, ಸಂಬಂಧಕ್ಕಿಂತ ಹಣಕ್ಕೇ ಹೆಚ್ಚು ಬೆಲೆ ಕೊಡುವ ಜನರ, ಸಂಬಂಧಿಕರ ಮಧ್ಯೆ ಆತನೊಬ್ಬನೇ  ಏಕಾಂಗಿಯಾಗಿ ಹೇಗೆ ಹೋರಾಡುತ್ತಾನೆ ಎಂದು ಈ ಚಿತ್ರದ ಮೂಲಕ ನಿರ್ದೇಶಕ ತ್ರಿಲೋಕ್ ಚಂದರ್ ಅವರು

 ಮನರಂಜನಾತ್ಮಕವಾಗಿ ಹೇಳಲು

 ಪ್ರಯತ್ನಿಸಿದ್ದಾರೆ.

  ಈ ವೇಳೆ ಮಾತನಾಡಿದ ನಿರ್ದೇಶಕ ತ್ರಿಲೋಕ್ ಚಂದರ್  ನಾನು ಕೂಲಿಂಗ್ ಸೊಲ್ಯುಶನ್ಸ್ ಇಂಡಸ್ಟ್ರಿ ಮಾಡುತ್ತಿದ್ದೇನೆ. ಜತೆಗೆ ಕನ್ನಡ ಬ್ಯುಸಿನೆಸ್ ಟಿವಿ ಚಾನಲ್ ಕೂಡ ಆರಂಭಿಸುತ್ತಿದ್ದೇನೆ. ಈ ಹಿಂದೆ ಒಂದು ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಕಳೆದುಕೊಂಡಿದ್ದೆ. ಆದರೂ ಸ್ಟಾರ್ಟಪ್ ಬ್ಯುಸಿನೆಸ್ ಮಾಡುವವರಿಗೆ  ನಮ್ಮ ಚಿತ್ರದ ಮೂಲಕ ಒಂದು ಮೆಸೇಜ್ ಕೊಡಬೇಕೆಂಬ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ಜತೆಗೆ ನಮ್ಮ ರೈತರು ಎದುರಿಸುತ್ತಿರೋ ಹಲವಾರು ಸಮಸ್ಯೆಗಳ ಬಗ್ಗೆಯೂ ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದೇವೆ ಎಂದು ವಿವರಿಸಿದರು. 

   ನಾಯಕ ಯೋಗೇಶ್ ಗೌಡ ಮಾತನಾಡಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನನಗೆ ನಿರ್ದೇಶಕರು ನಾಯಕನಾಗುವ  ಅವಕಾಶ ನೀಡಿದ್ದಾರೆ. ಚಿತ್ರದಲ್ಲಿ ನಾನು ಹಳ್ಳಿಯ ಯುವಕನ ಪಾತ್ರ ಮಾಡಿದ್ದೇನೆ ಎಂದರು.

    ನಟ ಮುರಳಿ ಕೃಷ್ಣ ಮಾತನಾಡಿ ಚಿತ್ರದಲ್ಲಿ ನಿರ್ದೇಶಕನ ಪಾತ್ರ ಮಾಡಿದ್ದೇನೆ ಎಂದರು. ಸಂಗೀತ ನಿರ್ದೇಶಕ ಜೆವಿನ್ಸನ್ ಲೆವಿಸ್  ಮಾತನಾಡುತ್ತ ನಾನು ಎಟಿ ರವೀಶ್, ಶ್ರೀಶಾಸ್ತ ಅವರ ಬಳಿ ಕೆಲಸ ಮಾಡಿದ್ದೆ. ಅನಂತರ ಇ ಕಿಸ್ಸಾನ್ ಟಿವಿ ಚಿತ್ರದಲ್ಲಿ ಒಟ್ಟು  ನಾಲ್ಕು ಹಾಡುಗಳಿದ್ದು, ಎಡಿಟಿಂಗ್  ವರ್ಕ್ ಕೂಡ ನಾನೇ ಮಾಡಿದ್ದೇನೆ ಎಂದರು. ನಾಯಕನ ಅತ್ತೆಯ ಪಾತ್ರ ಮಾಡಿರುವ ಸುಧಾ, ಕಾಮಿಡಿ ಪಾತ್ರ ಮಾಡಿರೋ ವಿಜಯಾ ಚಿತ್ರದ ಬಗ್ಗೆ  ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,