Common Man.Film News

Saturday, September 19, 2026

 

*ಟ್ರೈಲರ್ ನಲ್ಲಿ ’ಕಾಮನ್* *ಮ್ಯಾನ್’*

 *ಸೆಪ್ಟೆಂಬರ್*  *25ರಂದು* *ತೆರೆಗೆ*

 

   ಸಾಮಾನ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸಬಹುದು, ಏನೆಲ್ಲ ಸುಧಾರಣೆ ಮಾಡಬಹುದು, ಎದುರಿಸುವ ಸವಾಲುಗಳೇನು ಎಂದು ಹೇಳುವ ಕಾಮನ್ ಮ್ಯಾನ್ ಚಿತ್ರ ಇದೇ ತಿಂಗಳ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

   ಡಾ. ಎನ್.‌ನರಸಿಂಹ ಮೂರ್ತಿ ಅವರೇ ಕಥೆ ಬರೆದು ಸುರಭಿ ಫಿಲಂಸ್ ಅಡಿ‌  ಈ ಚಿತ್ರವನ್ನು ನಿರ್ಮಿಸಿದ್ದಾರೆ‌. ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರವಿದು. 

    ಕೆರೆಬೇಟೆ ಖ್ಯಾತಿಯ ಗೌರಿಶಂಕರ್ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

    ಟ್ರೈಲರ್‌ ಬಿಡುಗಡೆಗೊಳಿಸಿ ಮಾತನಾಡಿದ  ಸಂಗೀತ ನಿರ್ದೇಶಕ ವಿ.ಮನೋಹರ್, ’ಟ್ರೈಲರ್ ನೋಡಿದಾಗ ಪ್ರೇಕ್ಷಕರಲ್ಲಿ ಸಹಜವಾಗಿಯೇ ಕೌತುಕ ಮೂಡುತ್ತದೆ. ’ವಿಧಾನಸೌಧದ ಮೇಲೆ ನನಗೂ ಹಕ್ಕಿದೆ,

ಅದನ್ನು ನನಗೆ ಬರೆದುಕೊಡಿ’ ಎಂದು ಸಾಮಾನ್ಯ ಪ್ರಜೆಯೊಬ್ಬ ಕೇಳುವ ಅಂಶವೇ ಹೊಸದಾಗಿದೆ. ಈ ಚಿತ್ರದ ಕಥಾವಸ್ತು ಹಾಗೂ ಟ್ರೈಲರ್‌ನಲ್ಲಿ ಜನರನ್ನು ಥಿಯೇಟರ್‌ಗೆ ಸೆಳೆಯುವ ಗಟ್ಟಿತನವಿದೆ. ಈ ಚಿತ್ರದಿಂದ ಗೌರಿಶಂಕರ್‌ ಅವರ ಹೆಸರು ಗೌರಿಶಂಕರ ಪರ್ವತದಷ್ಟು ಎತ್ತರಕ್ಕೆ ಬೆಳೆಯಲಿ. ಈ ಚಿತ್ರ ದೊಡ್ಡಮಟ್ಟದಲ್ಲಿ ಯಶಸ್ಸು ಕಾಣಲಿ’ ಎಂದು ಶುಭ ಹಾರೈಸಿದರು.

   ನಟ ಬಲ ರಾಜ್ ವಾಡಿ ಮಾತನಾಡಿ ನಾನಿಲ್ಲಿ ನಾಯಕನ ತಂದೆ ಹಾಗೂ ರಂಗಭೂಮಿ ಕಲಾವಿದನ ಪಾತ್ರ ಮಾಡಿದ್ದೇನೆ ಎಂದರು. ನಿರ್ಮಾಪಕರ ಅಳಿಯನೂ ಆದ ನಟ ಕಿರಣ್ ಮಾತನಾಡಿ ಈ ಚಿತ್ರದಲ್ಲಿ ಸಿಎಂ ಮಗನಾಗಿ ನಟಿಸಿದ್ದೇನೆ ಎಂದರು.

   ನಿರ್ಮಾಪಕ ನರಸಿಂಹಮೂರ್ತಿ ಮಾತನಾಡುತ್ತ ಈಗಾಗಲೇ ಎಲ್ಲರೂ ಚಿತ್ರದ ಬಗ್ಗೆ ಮಾತಾಡಿದ್ದಾರೆ. ಬಹಳ ನೀಟಾಗಿ ಸಿನಿಮಾ ಮಾಡಿಕೊಟ್ಟಿರುವ ನಿರ್ದೇಶಕರಿಗೆ ಧನ್ಯವಾದ, ವಿನಯ್ ಚಂದ್ರ ಅದ್ಭುತವಾದ ಮ್ಯೂಸಿಕ್ ಮಾಡಿದ್ದಾರೆ. ಚಿತ್ರ ಇನ್ನೇನು ನಿಮ್ಮ ಮುಂದೆ ಬರಲಿದೆ, ಚಿತ್ರನೋಡಿ ಪ್ರೋತ್ಸಾಹಿಸಿ ಎಂದು  ಕೇಳಿಕೊಂಡರು.

  ಮಾತು ಮುಂದುವರೆಸುತ್ತ ನಾಯಕ ಗೌರಿಶಂಕರ್‌ ಅಲ್ಲದೆ ನಾಯಕಿಗೆ‌ ಇದು ಮೂರನೇ ಚಿತ್ರ, ಹೊಸಬರು ಅನಿಸದ ಹಾಗೆ ಪಾತ್ರ ನಿರ್ವಹಿಸಿದ್ದಾರೆ. ಉಳಿದ ಎಲ್ಲರೂ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಈಗಾಗಲೇ ಹಿಂದಿ, ತಮಿಳು, ತೆಲುಗಿಗೆ ನಮ್ಮ ಚಿತ್ರ ಡಬ್ಬಿಂಗ್ ಆಗಿದೆ. ಇದರ ಫಲಿತಾಂಶ ನೋಡಿಕೊಂಡು ಬೇರೆ ಭಾಷೆಯಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಕಾಮನ ಮ್ಯಾನ್ ವಿಧಾನಸೌಧವನ್ನೇ ಕೇಳೋದು ಸುಲಭದ ಮಾತಲ್ಲ, ಅದಕ್ಕೆ ಬಲವಾದ ಕಾರಣವನ್ನ ನೀಡಿದ್ದೇನೆ. 25ಕ್ಕೆ ಎಲ್ಲರೂ ಬಂದು ಚಿತ್ರ ನೋಡಿ. ನೀವು ಕೊಡುವ 200 ರೂ.ಗಳಲ್ಲಿ ಸಾವಿರಾರು ಜನರ ಜೀವನ ಅಡಗಿದೆ. ಒಬ್ಬ  ಪ್ರೊಡ್ಯೂಸರ್ ಹಿಂದೆ ಹೋದರೆ, ಒಂದಷ್ಟು ಟೆಕ್ನಿಷಿಯನ್ಸ್ ಹಿಂದೆ ಸರಿಯುತ್ತಾರೆ. ನನ್ನ ಮಗಳಾದ ವಸಂತ, ಕಿರಣ್, ಸತೀಶ್ ಇವರೆಲ್ಲ ನಾನು ಈ ಸಾಹಸ ಮಾಡಲಿಕ್ಕೆ ಕಾರಣ, ನಾನೊಬ್ಬನೇ ಆಗಿದ್ದರೆ ಇಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಾಗ್ತಿರಲಿಲ್ಲ. ಅಕೌಂಟೆಂಟ್ ಸರಳ ಅವರ ತುಂಬಾ ಆಕ್ಟಿವ್ ಆಗಿ ವರ್ಕ್ ಮಾಡಿದ್ದಾರೆ. ದಯವಿಟ್ಟು ಇದೊಂದು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.

 ಗೌರಿಶಂಕರ್ ಮಸತನಾಡಿ ಪ್ರತಿ ಮನುಷ್ಯನಲ್ಲೂ ಒಂದು ಆಸೆ ಅನ್ನೋದಿರುತ್ತೆ. ಅದೇರೀತಿ ಒಬ್ಬ ಕಾಮನ್ ಮ್ಯಾನ್ ಸಿಎಂ ಆಗಿ ಏನು ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.

    ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರ ಮಾಡಿದ್ದಾರೆ. ಉಳಿದ ಪಾತ್ರಗಳಲ್ಲಿ  ಹಿರಿಯ ನಟರಾದ ರಮೇಶ್ ಭಟ್, ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಹಾಗೂ ಇತರರು ನಟಿಸಿದ್ದಾರೆ.

   ವಿನಯ ಚಂದ್ರ ಅವರ ಸಂಗೀತ, ಜೆ‌.ಜಿ. ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ರಂಥ ಗಾಯಕರು ಹಾಡುಗಳಿಗೆ ದನಿಯಾಗಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,