Kalila.Film News

Wednesday, September 09, 2026

 

*ಗಣಪನ ಸನ್ನಿದಿಯಲ್ಲಿ ಕಲೀಲಾ ಮುಹೂರ್ತ*

 

       *’ಕಲೀಲಾ’* ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಮೊದಲ ದೃಶ್ಯಕ್ಕೆ ಸ್ಟಾರ್ ನಿರ್ದೇಶಕ ಸಿಂಪಲ್ ಸುನಿ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕೆವಿಆರ್ ಪಿಕ್ಚರ‍್ಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಕೆ.ರಾಘವ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

 

     ನಂತರ ಮಾತನಾಡಿದ ನಿರ್ದೇಶಕರು, ಇದೊಂದು ಮಾಸ್ ಕಂಟೆಂಟ್ ಜತೆಗೆ ಅಣ್ಣ ತಂಗಿ ಬಾಂಧವ್ಯವನ್ನು ಹೇಳಲಾಗುತ್ತಿದೆ. ’ಒಂದು ನಿಮಿಷದ ಕೋಪ, ಜೀವನವೆಲ್ಲ ತಾಪ’ ಎಂಬ ಗಾದೆಯಂತೆ ಚಿತ್ರದಲ್ಲಿ ಏನೂ ತಿಳಿಯದ ಮುಗ್ದ ಹುಡುಗನೊಬ್ಬ ಕೋಪದಲ್ಲಿ ತಪ್ಪು ಮಾಡಿಕೊಂಡು, ಮುಂದೆ ಆಗುವಂತ ಅನಾಹುತ, ನೋವುಗಳನ್ನು ಹೇಗೆ ಎದುರಿಸುತ್ತಾನೆ?. ಆತನ ಉದ್ದ ಹೆಸರನ್ನು ಕಡಿತ ಮಾಡಿದರೆ ಕಲೀಲ ಅಂತ ಕರೆಯಲಾಗುತ್ತದೆ. ಅಲ್ಲದೆ ಒಂದಷ್ಟು ಬಿಸಿ ರಕ್ತದ ಹುಡುಗಿಯರು ಬೈಕ್ ಓಡಿಸುತ್ತಾ, ಮಾರಿಯರಾಗಿ ಏನು ಮಾಡುತ್ತಾರೆ. ಇಂತಹ ಸನ್ನಿವೇಶಗಳು ಬಿಜಾಪುರದಲ್ಲಿ ತೆರೆದುಕೊಳ್ಳುತ್ತದೆ. ಈಗಿನ ಜನರು ಇಷ್ಟಪಡುವಂತ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಾಲ್ಪನಿಕ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಮಿಕ್ಕಂತೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಮಾಧ್ಯಮದ ಸಹಕಾರ ಬೇಕೆಂದು ಕೆ.ರಾಘವ್ ಕೋರಿಕೊಂಡರು.

      ಬಡ ಕಾರ್ಮಿಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿಯವೆರೆಗೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದೇನೆಂದು ನಾಯಕ ರಾಕೇಶ್ ಅಡಿಗ ಮಾತಿಗೆ ವಿರಾಮ ಹಾಕಿದರು. ಬಡ ಹಳ್ಳಿ ಹುಡುಗಿಯಾಗಿ ಖುಷಿ ನಾಯಕಿಯಾಗಿ ಹನ್ನೋಂದನೇ ಅವಕಾಶವಂತೆ.

             ಉಳಿದಂತೆ ಅಪೂರ್ವ, ಶಿಳ್ಳೆ ಮಂಜುನಾಥ್, ಜೋಗಿ ಉಮೇಶ್‌ಪುಂಗ, ಕಡ್ಡಿ ವಿಶ್ವ, ಬಲರಾಜವಾಡಿ, ಕಾಕ್ರೋಚ್ ಸುಧಿ, ವರ್ಧನ್, ಶೋಭಿತ, ಮಫ್ತಿ ಪ್ರದೀಪ್, ಪೂಜಾಶೆಟ್ಟಿ, ಶಿಲ್ಪ ಮುಂತಾದವರು ನಟಿಸುತ್ತಿದ್ದಾರೆ.

 

     ನಾಲ್ಕು ಹಾಡುಗಳಿಗೆ ಸಂಗೀತ ಮನುರಾಜ್, ಛಾಯಾಗ್ರಹಣ ಎಸ್.ಹಾಲೇಶ್, ಸಂಕಲನ ಗಿರೀಶ್‌ಕುಮಾರ್, ನೃತ್ಯ ರಘು.ಆರ್.ಜೆ, ಸಾಹಸ ಜಾನಿ ಮಾಸ್ಟರ್-ಮರಿಸ್ವಾಮಿ ಅವರದಾಗಿದೆ. ಬೆಂಗಳೂರು, ಬಿಜಾಪುರ ಮತ್ತು ಮೈಸೂರು ಸುಂದರ ತಾಣಗಳಲ್ಲಿ ನಲವತ್ತೈದು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,