Makkala Sainya.News

Sunday, May 03, 2026

 

*ಮೇ 22 ರಂದು ತೆರೆಗೆ ಎಸ್ ಕೆ ಸುನೀಲ್ ಕುಮಾರ್ ನಿರ್ದೇಶನದ "ಮಕ್ಕಳ ಸೈನ್ಯೆ"* .  

 

 ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವ  ಎಸ್ ಕೆ ಸುನೀಲ್ ಕುಮಾರ್ ಚೊಚ್ಚಲ ನಿರ್ದೇಶನದ " "ಮಕ್ಕಳ ಸೈನ್ಯೆ" ಚಿತ್ರ ಮೇ 22 ರಂದು ತೆರೆಗೆ ಬರುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.               

 

ಎಪ್ಪತ್ತರ ದಶಕದಲ್ಲಿ ಬಂದಿದ್ದ "ಸಿಂಹದ ಮರಿ ಸೈನ್ಯ" ಚಿತ್ರದ ನಂತರ ಆ ರೀತಿಯ ಮಕ್ಕಳ ಚಿತ್ರ ಬಂದಿರಲಿಲ್ಲ. ಅದೇ ರೀತಿಯ ಕಥೆ ಈ ಚಿತ್ರದಲ್ಲಿರುತ್ತದೆ. ಚಿತ್ರದಲ್ಲಿ ಸ್ನೇಹ, ಸಾಹಸ, ತಂದೆ - ಮಗಳ ಬಾಂಧವ್ಯ ಹಾಗೂ ಸನಾತನ ಎಂಬ ನಾಲ್ಕು ಭಾಗಗಳಿರುತ್ತದೆ. 

ಮಕ್ಕಳು ಮೊದಲ ಬಾರಿಗೆ ನಟಿಸಿದ್ದಾರೆ ಅಂತ ಹೇಳುವ ಹಾಗಿಲ್ಲ. ಅಷ್ಟು ಅದ್ಭುತವಾಗಿ ನಟಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಚಿತ್ರೀಕರಣ ನಡೆದಿದೆ. ಹಿರಿಯ ಸಾಹಿತಿ ದೊಡ್ಡರಂಗೇ ಗೌಡ ಅವರು ಗೀತರಚನೆ ಮಾಡಿದ್ದಾರೆ. ಸನ್ನಿರಾಜ್ ಸಂಗೀತ ನೀಡಿದ್ದಾರೆ. ಮಕ್ಕಳ ಚಿತ್ರವಾದರೂ ಯಾವುದೇ  ಕಮರ್ಷಿಯಲ್ ಚಿತ್ರಗಳಿಗೂ ಕಡಿಮೆ ಇಲ್ಲದ ರೀತಿಯಲ್ಲೇ ಚಿತ್ರ ಮೂಡಿ ಬಂದಿದೆ. ಚಿತ್ರ ಮೇ 22ರಂದು ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ.  ಮುನಿಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ. ಸಂಗೀತ ಅವರು ಸಹ ನಿರ್ದೇಶನ ಮಾಡಿದ್ದಾರೆ. "ಮಕ್ಕಳ ಸೈನ್ಯೆ"ಗೆ  ಸವಾಲಿಗೆ ಸವಾಲ್ ಎಂಬ ಅಡಿಬರಹವಿದೆ ಎಂದು ನಿರ್ದೇಶಕ ಸುನೀಲ್ ಕುಮಾರ್ ತಿಳಿಸಿದರು.  

 

ನಿರ್ಮಾಪಕ ಮುನಿಸ್ವಾಮಿ ಹಾಗೂ ಚಿತ್ರದಲ್ಲಿ ನಟಿಸಿರುವ ಮಹಾಲಕ್ಷ್ಮಿ, ಗಗನ, ಸೋನಾಕ್ಷಿ, ಶಶಾಂಕ್, ರಾಬರ್ಟ್, ರುದ್ರಪ್ಪ ಮುಂತಾದವರು "ಮಕ್ಕಳ ಸೈನ್ಯೆ" ಚಿತ್ರದ ಕುರಿತು ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,