Aditi.Film News

Thursday, April 09, 2026

 

*ಐದು ಶಾಟ್‌ಗಳಲ್ಲಿ ಚಿತ್ರೀಕರಣವಾದ ವಿಶ್ವದ ಮೊದಲ ಚಿತ್ರ*

 

      ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ *’ಅದಿತಿ’* ಚಿತ್ರಕ್ಕೆ ಮಿಲೆನಿಯಮ್ ಆಡ್ ಮೀಡಿಯಾ ಬ್ಯಾನರ್ ಅಡಿಯಲ್ಲಿ *ವ್ಯಾಲೆರಿನಾ ಮರಿಯ ರೋಜರ್ಸ್ ಮತ್ತು ನೆಲ್ಸನ್ ರೋಜರ್ಸ್.ಡಬ್ಲ್ಯೂ ಬಂಡವಾಳ* ಹೂಡಿದ್ದಾರೆ.  ಲಿಬರ್ಟಿ ಎಂಬ ಅಡಿಬರಹ ಇರಲಿದೆ. *ನೆಲ್ಸನ್ ರೋಜರ್ಸ್.ಡಬ್ಲ್ಯೂ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್* ಹೇಳಿದ್ದಾರೆ. ಇವರೊಂದಿಗೆ ಸೋಲೋಮನ್.ಕೆ.ಜಾರ್ಜ್ ನಿರ್ದೇಶನದಲ್ಲಿ ಕೈ ಜೋಡಿಸಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಹಾಡುಗಳು, ಟೀಸರ್ ಬಿಡುಗಡೆ ಮತ್ತು ವೈ2ಕೆ ಮ್ಯೂಸಿಕ್ ಆಡಿಯೋ ಕಂಪೆನಿ ಲೋಗೋ ಅನಾವರಣ ಸಮಾರಂಭವು ಪಂಚತಾರಾ ಹೋಟೆಲ್‌ದಲ್ಲಿ ಅದ್ದೂರಿಯಾಗಿ ನಡೆಯಿತು. ’ಆ ದಿನಗಳು’ ಖ್ಯಾತಿಯ ಚೇತನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

 

      ಮುಖ್ಯ ಪಾತ್ರದಲ್ಲಿ ಇಶಾನಾ ಸಣ್ಣಪ್ಪನವರ. ಇವರೊಂದಿಗೆ ಹರ್ಷಿತಾ ಕಲ್ಲಿಂಗಲ್, ಆರತಿ, ನಿಸರ್ಗ ಮಂಜುನಾಥ್, ಯಶಾ, ಡ್ಯಾನಿ ಕುಟ್ಟಪ್ಪ, ಸುನಿಲ್, ಅಜಿತ್‌ಕುಮಾರ್, ಗೋಪಿ ಮುಂತಾದವರು ನಟಿಸಿದ್ದಾರೆ.

       ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ’ಅದಿತಿ’ ಸಿನಿಮಾವು ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಶೀರ್ಷಿಕೆ ಹೆಸರಿನ ಹುಡುಗಿ ಯಾರು? ಯಾಕೆ ಬಂದಳು? ಏನು ಮಾಡಿದಳು? ಅದಕ್ಕೆ ಕಾರಣವೇನು? ಇವೆಲ್ಲವೂ ಕುತೂಹಲದೊಂದಿಗೆ ಸಾಗುತ್ತದೆ. ಇಷ್ಟನ್ನು ಮಾತ್ರ ಹೇಳಬಹುದು. ವಿಶ್ವದಲ್ಲೇ ಮೊದಲು ಎನ್ನಬಹುದಾದ ’ಅದಿತಿ’ ಸಿನಿಮಾವನ್ನು ಕೇವಲ ಐದು ಶಾಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರತಿಯೊಂದು ದೃಶ್ಯಗಳು ೨೦-೨೫ ನಿಮಿಷ ಇರುತ್ತದೆ. ಇದಕ್ಕಾಗಿ ತಿಂಗಳುಗಟ್ಟಲೆ ಕಲಾವಿದರಿಗೆ ತರಭೇತಿ ನಡೆಸಿ ಕ್ಯಾಮಾರ ಮುಂದೆ ಕೆಲಸ ತೆಗೆದುಕೊಂಡಿದ್ದೇವೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಹೆಚ್.ದಾಸ್ ಅವರ ಸಲಹೆ, ಸಹಕಾರ ನೀಡುವುದಲ್ಲದೆ ಅದ್ಬುತ ಶಾಟ್ಸ್‌ಗಳನ್ನು ಸೆರೆ ಹಿಡಿದುಕೊಟ್ಟಿದ್ದಾರೆ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಹಾಗೂ ಕೊಂಕಣಿ ಭಾಷೆಗಳಲ್ಲಿ ಸಿನಿಮಾವು ಏಕಕಾಲಕ್ಕೆ ಬರಲಿದೆ. ಎಲ್ಲಾ ಭಾಷೆಯ ಚಿತ್ರಗಳಿಗೆ ಮಹಿಳೆಯರೇ ಸಂಭಾಷಣೆ ಬರೆದಿರುವುದು ವಿಶೇಷ. ಕನ್ನಡದಲ್ಲಿ ಕುಮುದಹಳ್ಳಿ ಅರುಣ್‌ಮೂರ್ತಿ ಪಂಚಿಂಗ್ ಡೈಲಾಗ್ ಬರೆದಿದ್ದಾರೆ. ಮನರಂಜನೆ ಇರಬೇಕು ಎನ್ನುವ ಸಲುವಾಗಿ ಎರಡು ಗ್ಲಾಮರಸ್ ಹಾಡುಗಳಿಗೆ  ಪ್ರಿಯಾ ಮಾಲಿ, ಚೇತನ ನಾಯಕ್ ಧ್ವನಿಯಾಗಿದ್ದಾರೆ. ಇಂತಹ ಸಿನಿಮಾಕ್ಕೆ ಮಾಧ್ಯಮದ ಪ್ರೋತ್ಸಾಹ ಬೇಕೆಂದು ನೆಲ್ಸನ್ ರೋಜರ್ಸ್.ಡಬ್ಲ್ಯೂ ಕೋರಿದರು.

 

       ಸಂಗೀತ ರಮೇಶ್ ಕೃಷ್ಣ-ಕೃಷ್ಣ ಪ್ರಿಯದರ್ಶನ್, ಕೊನೆ ಹಂತದ ಛಾಯಾಗ್ರಹಣ ವೆಂಕಟೇಶ್.ಆರ್, ಸಂಕಲನ ಸೋಲೋಮನ್.ಕೆ.ಜಾರ್ಜ್, ಹಿನ್ನಲೆಶಬ್ದ ರಾಜ್ ಭಾಸ್ಕರ್ ಅವರದಾಗಿದೆ. ಬೆಂಗಳೂರು, ಕನಕಪುರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೆ ಚಿತ್ರವು ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದು, ಜೂನ್ ತಿಂಗಳಲ್ಲಿ ಜನರಿಗೆ ತೋರಿಸಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,