ಸುಂದರ್ ರಾಜ್ ’ಚಾರ್ಜ್ ಶೀಟ್’ ಟೀಸರ್ ಲಾಂಚ್
ಕನ್ನಡ ಖ್ಯಾತ ಪೋಷಕ ನಟ ಸುಂದರ್ ರಾಜ್ ನಟನೆಯ 250ನೇ ಚಿತ್ರ ಚಾರ್ಜ್ ಶೀಟ್. ಇದರ ಟೀಸರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಲಾಂಚ್ ಮಾಡಿ ಶುಭಕೋರಿದ್ದಾರೆ.
ಚಾರ್ಜ್ ಶೀಟ್ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವರ್ಸಜಾ,
"ಈ ಚಿತ್ರದ ಸಾಂಗ್ ನೋಡಿದ ತಕ್ಷಣ ಸಿನಿಮಾ ನೋಡಬೇಕು ಅನಿಸುತ್ತದೆ. ಅಂಕಲ್ (ಸುಂದರ್‌ರಾಜ್) ಅವರ ಬಾಂಡಿಲಾಂಗ್ವೆಜ್ ನನಗೆ ಗೊತ್ತು. ಅವರು ಏನನ್ನೂ ಗ್ರಾಂಟೆಡ್ ಆಗಿ ತಗೊಳ್ಳಲ್ಲ. ಈ ಇಂಡಸ್ಟ್ರಿಯಲ್ಲಿ ಉಳಿಯಬೇಕೆಂದರೆ ಒಂದೇ ದಾರಿ ಅದು ಟ್ಯಾಲೆಂಟ್. ಅದು ಇರುವುದಕ್ಕೆನೇ ಅಂಕಲ್ ಅವರ ಸಿನಿಮಾ ಇವತ್ತು 250 ನೇ ವರೆಗೆ ತಲುಪಿದೆ. ಕ್ಲೋಸಪ್ ಇದ್ದಾಗ ಅವರ ನಟನೆ ಇದನ್ನೆಲ್ಲ ನೋಡಿದಾಗ ವಾಹ್ ಅನಿಸುತ್ತದೆ. ಖಂಡಿತವಾಗಲೂ ನಾನು ಈ ಸಿನಿಮಾವನ್ನು ನನ್ನ ಫ್ಯಾಮಿಲಿ ಜೊತೆ ಹೋಗಿ ನೋಡುತ್ತೇನೆ. ಒಂದು ಚಿತ್ರ ಒಂದು ವಿಶನ್ ಇಟ್ಕೊಂಡು ಮಾಡಿರುವುದು. ಆ ವಿಶನ್ ಗೆ ಜಸ್ಟಿಫಿಕೇಶನ್ ಕೊಡುವುದು ಇದೆಯಲ್ಲ ಬಹಳ ಇಂಪಾರ್ಟ್‌ಮೆಂಟ್. ನನಗೆ ಅಂಕಲ್ ಅವರ ಯಾವ ಸಿನಿಮಾ ಫೆವರೇಟ್ ಅಂದರೆ ಉದ್ಭವ. ಅನಂತ್ ನಾಗ್ ಅವರ ಜೊತೆ ಇವರ ನಟನೆ ಅದ್ಭುತ. ಬಂಗಾರ ಜಿಂಕೆಯಲ್ಲಿ ಎಲ್ಲರೂ ಮಾಡಿದ್ದಾರೆ. ನಮ್ಮ ತಾತ, ಆಂಟಿ ಮಾಡಿದ್ದಾರೆ. ಏನೆಲ್ಲಾ ಮೂವಿಸ್ ಮಾಡಿದ್ದಾರೆ. ಲಾಟ್ಸ್ ಆಫ್ ಲವ್, ವಿ ಲವ್ ಯು" ಎಂದರು. ಆನಂತರ ಮುಂದುವರಿಯುತ್ತಾ ಈ ವೇದಿಕೆಯಲ್ಲಿ ಅಂಕಲ್ ನಮಗೊಂದು ಪ್ರಾಮಿಸ್ ಮಾಡಬೇಕು, ನನಗೂ ನಿಮ್ಮ ಸಿನಿಮಾದಲ್ಲಿ ಚಾನ್ಸ್ ಕೊಡಬೇಕು. ಯಾವುದಾದರೂ ಚಿಕ್ಕ ಪಾತ್ರವಿದ್ದರೂ ಮಾಡ್ತೀವಿ. ನಮ್ಮ ಅಣ್ಣ ಇದ್ದಿದ್ದರೆ ಭಯಂಕರ ರೇಗಿಸೋನು. ಅಣ್ಣ ಮತ್ತು ನೀವು ಪ್ಲ್ಯಾನ್ ಮಾಡಿದ್ದೀರಲ್ವ, ಅದನ್ನು ನಾವು ಟೇಕಾಫ್ ಮಾಡೋಣ ಎಂದು ಹೇಳಿದರು.
ಸುಂದರ್ ರಾಜ್ ಅವರು ಮಾತನಾಡುತ್ತಾ, ಮುಖ್ಯವಾಗಿ ವಾಣಿಜ್ಯ ಮಂಡಳಿ ಒಂದು ಒಳ್ಳೊಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹೆಣ್ಮಕ್ಕಳೇ ಸ್ಟ್ರಾಂಗ್ ಗುರು. ಒತ್ತಡಗಳು ತುಂಬಾ ಇದೆ. ಯಾರಿಗೆ ಇಲ್ಲ. ಎಲ್ಲರಿಗೂ ಇದೆ. ಅದನ್ನೆಲ್ಲ ಬಿಟ್ಟು ಜಯಮ್ಮ ಬಂದಿದ್ದಾರೆ. ಮನಸ್ಸು ತುಂಬಿ ಬಿಟ್ಟಿದೆ. ಫುಲ್ ಮೀಲ್ಸ್ ಆಗಿದೆ. ನನ್ನ ಕೆರಿಯರ್‌ನಲ್ಲೇ ನಾನು ಇಂತಹ ಒಂದು ಪ್ರೆಸ್‌ಮೀಟ್‌ನ ನೋಡಿಲ್ಲ. ಸಿನಿಮಾ ಒಂದು ಕನಸು. ಎಲ್ಲರೂ ಹೀರೋ ಆಗೋಕೆ ಇಷ್ಟ ಪಡುತ್ತಾರೆ. ನಮ್ಮದು ಒಳ್ಳೆಯ ಬಿಸಿನೆಸ್ ಇತ್ತು. ದಿವಸಕ್ಕೆ 5,6 ಸಾವಿರ ವ್ಯಾಪಾರ ಇತ್ತು. ಆದರೆ ನನ್ನ ಆಸೆ ಇದ್ದಿದ್ದು ಕಾಸೇ ಕೊಡದೇ ಇರುವ ರಂಗಭೂಮಿಗೆ ಹೋದೆ ನಾನು. ನಾನು 8,9 ನೇ ಕ್ಲಾಸ್ ಓದಿರಬೇಕಾದರೆ, ಡಾಕ್ಟರ್ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ನಾನು ಆಕ್ಟರ್ ಆದೆ. ಈ ಚಾರ್ಚ್‌ಶೀಟ್ ಅನ್ನೋದು ನನಗೆ ರೋಮಾಂಚನ ಮಾಡಿತು. ದೇಶಕ್ಕೆ ರಕ್ಷಣೆ ಕೊಡುವವನು ಸೈನಿಕ. ಸ್ಟೇಟ್‌ಗೆ ರಕ್ಷಣೆ ಕೊಡುವವನು ಪೊಲೀಸ್. ಇದು ಜೆಪಿ ನಗರದಲ್ಲಿ ನಡೆದಂತಹ ಘಟನೆ ಈ ಸಿನಿಮಾ. ರಾಜ್‌ಕುಮಾರ್ ಅವರನ್ನು ನಾನು ನೆನಪು ಮಾಡುತ್ತೇನೆ. 1970 ರವರೆಗೆ 5000 ನೋಡಿರಲಿಲ್ಲ. ಅವರು ಯಾವತ್ತೂ ಕೋಟಿ ರೂ. ತಗೊಂಡವರಲ್ಲ. ಆದರೆ ಕೋಟಿ ಕೋಟಿ ಜನರ ಪ್ರೀತಿ ಗಳಿಸಿದರು. ಈ ಸಿನಿಮಾ ಬಜೆಟ್ ಕೇಳಿಲ್ಲ. ಮಾಡಿ ಅಂದೆ ಅಷ್ಟೇ. ನನ್ನ ಗುರುಗಳನ್ನು ನಾನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ತೇನೆ. ಕನ್ನಡ ಸಿನಿಮಾ ಪೈರೆಸಿ ಆಗಬಾರದು. ಅದು ಜೆರಾಕ್ಸ್ ಕಾಪಿ ಆಗುತ್ತದೆ. ಒರಿಜಿನಲ್ ನೋಡಿ. ನಾವು ಇಂಟರ್ನ್ಯಾಷನಲ್ ಮಟ್ಟಕ್ಕೆ ಹೋಗಿದ್ದೀವಿ. ಯಾವುದೇ ವಿಚಾರ ತಗೊಂಡಾಗ ಅದಕ್ಕೆ ಒತ್ತು ಕೊಡಬೇಕು. ಸಿನಿಮಾದಲ್ಲಿ ಯಾವುದೇ ಚಿಕ್ಕ ಪಾತ್ರ ಅಂತ ಇರಲ್ಲ. ವಿಲನ್, ಪೋಷಕ, ನಾಯಕ, ತಮಿಳು, ಮಲಯಾಳಂ, ಹಿಂದಿ ಯಲ್ಲಿ ನಟನೆ ಮಾಡಿದ್ದೀನಿ. ಆದರೆ ನಮ್ಮ ನಾಡೇ ನಮಗೆ ಚಂದ ಎಂದರು.
ನಿರ್ದೇಶಕರ ಕುರಿತು ಮಾತನಾಡುತ್ತಾ, ನಾನು ನಿಮ್ಮ ಫ್ಯಾನ್ ಅಂತ ಹೇಳಿದ್ರು. ಇವರು ಐಟಿ ಮಾಡಿದ್ದಾರೆ. ಈಗ ಅವರು ಸಿನಿಮಾ ಮಾಡುವ ಅಂತ ಹೇಳಿದ್ರು. ಇವರ ಡೈರೆಕ್ಷನ್ ನಲ್ಲಿ ಆಕ್ಟ್ ಮಾಡಬೇಕು ಅಂತ ಆಸೆ ಇತ್ತು. ಮಾಡಿದೆ ಅಂತ ಹೇಳಿದರು.
ನಿರ್ಮಾಪಕರನ್ನು ಉಳಿಸ್ಕೋಬೇಕು ನಾವು. ಒಂದು ಸಿನಿಮಾ ಮಾಡಿದರೆ ಹತ್ತು ಸಿನಿಮಾ ಮಾಡ್ತಾರೆ. ಕನ್ನಡ ಸಿನಿಮಾದ ಗತವೈಭವ ಇರಬೇಕು ಎಂದು ಹೇಳಿದರು. ಕಾದು ಕಾದು ಹದ ಬಂದು ಈ ಪಾತ್ರ ಮಾಡಿದ್ದೀನಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್,
ನಟಿ ಹಾಗೂ ಸುಂದರ್ ರಾಜ್ ಪುತ್ರಿ ಮೇಘನಾ ರಾಜ್ ಕೂಡ ಉಪಸ್ಥಿತರಿದ್ದರು.
ಚಿತ್ರಕ್ಕೆ ‘U/A’ ಪ್ರಮಾಣಪತ್ರ ದೊರಕಿದ್ದು ನಿರ್ದೇಶಕ
ವೆಂಕಟ್ ಭಾರದ್ವಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ದಿನೇಶ್ ಮತ್ತು ಲಕ್ಷ್ಮಣ್ ಜೊತೆಯಾಗಿ ನಿರ್ಮಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್ ಅವರ ಮೂಲ ಕಥೆಯನ್ನಯ ಆಧರಿಸಿಕೊಂಡು ನಿರ್ಮಾಣವಾಗಿರುವ ಈ ಚಿತ್ರಕ್ಕೆ ವೆಂಕಟ್ ಅವರೇ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸುಂದರ್ ರಾಜ್, ಹರ್ಷ್ ಅರ್ಜುನ್, ಸತ್ಯಶ್ರೀ, ಅಮರ್, ರೂಪೇಶ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಸಮೀರ್ ಕುಲಕರ್ಣಿ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತರೆ, ಪ್ರಮೋದ್ ಭಾರತೀಯ ಛಾಯಾಗ್ರಹಣ ಚಿತ್ರಕ್ಕಿದೆ.