KA-18.Film News

Saturday, June 20, 2026

 

*KA-18 ಇದು ಹಾರರ್,ಸೆಸ್ಪೆನ್ಸ್,ಥ್ರಿಲ್ಲರ್ ಸರಕು*

 

      ವಿನೂತನ ಶೀರ್ಷಿಕೆ *’KA-18’* ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಳಿಯ ನಟ ಮನೋಜ್ ಕ್ಯಾಮಾರ ಆನ್ ಮಾಡಿದರು. ಅಪ್ಪಾಜಿ ಪ್ರೊಡಕ್ಷನ್ಸ್ ಅಡಿಯಲ್ಲಿ ಹಿರೇಮಗಳೂರು ಮೂಲದ *ಎ.ಟಿ.ಎಂ.ಮಂಜು ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗಿ* ಬಣ್ಣ ಹಚ್ಚುತ್ತಿರುವುದು ಹೊಸ ಅನುಭವ. *ಮೋಹನ್ ಚಿಕ್ಕಿ ಮೂರನೇ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್* ಹೇಳುತ್ತಿದ್ದಾರೆ. ಉತ್ತರಕಾಂಡದ *ಸೋನಿಯಾ ರಾವುತ್ ಸಹ ನಿರ್ಮಾಪಕಿ ಹಾಗೂ ಹಾಡಿಗೆ ಹೆಜ್ಜೆ* ಹಾಕುತ್ತಿದ್ದಾರೆ.

 

        ಮುಖ್ಯ ಪಾತ್ರದಲ್ಲಿ ಎ.ಟಿ.ಎಂ.ಮಂಜು, ತನಿಷಾ ಕುಪ್ಪಂಡ, ಸೋನಿಯಾ ರಾವುತ್. ಖಳನಾಗಿ ದೀಪು ಇವರೊಂದಿಗೆ ವರ್ಧನ್, ವಿಜಿ, ಪೂಜಾ ಮುಂತಾದವರು ಅಭಿನಯಿಸಿದ್ದಾರೆ. ಶಶಿಕುಮಾರ್.ಜೆ.ಕೆ ಸಾಹಿತ್ಯ, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ರಘು ಶಿವರಾಮ್, ಸಾಹಸ ವೈಲೆಂಟ್ ವೇಲು, ನಿರ್ಮಾಣ ನಿರ್ವಹಣೆ ಮಂಜುನಾಥ್ ದೈವಜ್ಞ ಅವರದಾಗಿದೆ.

       ನಂತರ ಮಾತನಾಡಿದ ನಿರ್ದೇಶಕರು, ಗೆಳೆಯ ನಿರ್ದೇಶಕ ಆರ್ಯ ಮಹೇಶ್ ಸಹಕಾರ ಎಂದಿಗೂ ಮರೆಯಲಾಗದು. ನಿರ್ಮಾಪಕರು ಹೇಳಿದ ಒಂದು ಏಳೆಯನ್ನು  ಬಳಸಿಕೊಂಡು ಅದನ್ನು ವಿಸ್ತಾರ ಮಾಡಿಕೊಳ್ಳಲಾಗಿದೆ. ಚಿತ್ರವು ಎರಡು ಪಾತ್ರಗಳ ಸುತ್ತ ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಡೆಯುವ ಘಟನೆಯಲ್ಲಿ ನಾಲ್ಕೈದು ಎಲಿಮೆಂಟ್ಸ್ ಬರುತ್ತದೆ. ಚಿಕ್ಕಮಗಳೂರು ಸ್ಥಳದಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲು ಯೋಜನೆ ಹಾಕಲಾಗಿದೆ ಅಂತ ಮೋಹನ್ ಚಿಕ್ಕಿ ಮಾಹಿತಿ ಹರಿಬಿಟ್ಟರು.

 

       ಶಾಲೆ ಕಾಲೇಜು ದಿನಗಳಿಂದಲೂ ನಾಟಕ ಪ್ರೇಮಿ. ಅಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹುಚ್ಚು ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. 2000 ಇಸವಿಯಲ್ಲಿ ಅಪ್ಪನೊಂದಿಗೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಅಲ್ಲಿ ನೋಡಿದಂತ ಘಟನೆಯನ್ನು ನಿರ್ದೇಶಕರಿಗೆ ಹೇಳಿದೆ. ಈ ಸ್ಥಳ ಹಾಗೂ ಆ ಸ್ಥಳದ ಮಧ್ಯೆ ಮೂಲಭೂತ ಸೌಕರ್ಯವಿಲ್ಲದ ಹಾದಿಯಲ್ಲಿ ಮುಖ್ಯ ಕಾರಣವನ್ನು ಸಂಶೋಧನೆ ಮಾಡಲು ಹೋಗುತ್ತಿದ್ದಾಗ ಒಂದಷ್ಟು ಅಡಚಣೆಗಳು ಬರುತ್ತದೆ. ಕೊನೆಗೆ ಅದರಿಂದ ರಕ್ಷಣೆ ಸಿಗುತ್ತದಾ? ಇಲ್ಲವಾ ಎಂಬುದನ್ನು ಹೇಳ ಹೊರಟದ್ದೀವೆ. ಅಲ್ಲದೆ ಮೂಢನಂಬಿಕೆ ಅಂಶವನ್ನು ತೆಗೆದುಕೊಳ್ಳಲಾಗಿದೆ ಎಂದು ಎ.ಟಿ.ಎಂ.ಮಂಜು ಹೇಳಿದರು.

 

     ತನಿಷಾ ಕುಪ್ಪಂಡ ಹೇಳುವಂತೆ, ಅಂಕಿತಾ ಹೆಸರಿನಲ್ಲಿ ಕಾಡು ದಾರಿಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಪಯಣಿಸುವಾಗ ಸಣ್ಣ ಪುಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಯಾರು ಯಾರಿಗೆ ಒಳ್ಳೇದು, ಕೆಟ್ಟದ್ದು ಮಾಡುತ್ತಾರೆ ಎಂಬುದನ್ನು ಹೇಳ ಹೊರಟಿದ್ದಾರೆ ಎಂದರು.

 

Copyright@2018 Chitralahari | All Rights Reserved. Photo Journalist K.S. Mokshendra,