Mother.Film News

Wednesday, June 10, 2026

 

ಅಭಿನಯ ಸರಸ್ವತಿ ಶೃತಿ ಅವರ 175ನೇ ಸಿನಿಮಾ ಮುಹೂರ್ತ

 

 

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ’ಮದರ್’

 

 

ಅಭಿನಯ ಸರಸ್ವತಿ ಶೃತಿ ಅವರ 175ನೇ ಸಿನಿಮಾಗೆ ಇಂದು ಮುಹೂರ್ತ ನೆರವೇರಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮದರ್ ನೆರವೇರಿದೆ. ವಿನೋದ್ ಪ್ರಭಾಕರ್ ಅವರು ಮುಹೂರ್ತಕ್ಕೆ ಬಂದು ಶುಭ ಹಾರೈಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿ ಹಾರೈಸಿದ್ದಾರೆ.

 

ಇದೇ ವೇಳೆ ನಿರ್ದೇಶಕ ರಾಕೇಶ್ ಮಾತನ್ನಾಡಿ, ಮದರ್ ತುಂಬಾ ಪವರ್ ಫುಲ್ ಕಥೆ. ಮಂಡ್ಯದ ಅನಕ್ಷರಸ್ಥ ಮಹಿಳೆ ಸಂಸಾರ ಕಾಪಾಡುವುದಕ್ಕೆ ಹೋರಾಟ ಮಾಡುವ ಕಥೆಯೇ ಮದರ್. ಶೃತಿ ಅವರು ಅಳಿಸುವುದಿಲ್ಲ. ಇಲ್ಲಿ ಶೃತಿ ಅವರನ್ನು ಬೇರೆಯದ್ದೇ ರೀತಿಯಲ್ಲಿ ಕಾಣಬಹುದು. ರಗಡ್ ಲುಕ್ ನಲ್ಲಿ ಕಾಣಿಸ್ತಾರೆ. 35 ದಿನಗಳ ಕಾಲ ಶೂಟಿಂಗ್ ಮಾಡಲಾಗುತ್ತೆ, ಮಂಡ್ಯದ ಸುತ್ತ ಮುತ್ತ ನಡೆಯುತ್ತೆ ಎಂದು ನಿರ್ದೇಶಕ ರಾಕೇಶ್ ಸೋಮಣ್ಣ ಮಾಹಿತಿ ನೀಡಿದ್ರು.

 

 

ವಿನೋದ್ ಪ್ರಭಾಕರ್ ಮಾತನ್ನಾಡಿ, ಶೃತಿ ಅಮ್ಮನ್ನ ಅಮ್ಮ ಅಂತಾನೇ ಕರಿತೀನಿ. ಮಾದೇವ ಸಮಯದಲ್ಲಿ ರಾಕಿ ಕಟ್ಟಿದ್ದರು. ಅಕ್ಕನು ಅಮ್ಮನೆ ಅಲ್ವಾ. ಮಾದೇವ ಸೈಲೆಂಟ್ ಆದಾಗೆಲ್ಲಾ ಶೃತಿ ಅಮ್ಮ ವೈಲೆಂಟ್ ಆಗ್ತಾ ಇದ್ದರು. ಅವರು ಸೈಲೆಂಟ್ ಆದಾಗ ನಾನು ವೈಲೆಂಟ್ ಆಗ್ತಿದೆ. ಆ ಕಾಂಬಿನೇಷನ್ ಸಖತ್ ವರ್ಕ್ ಆಗುತ್ತೆ. ನಾನು ಇಲ್ಲಿಗೆ ಬರೋದಕ್ಕೆ ಕಾರಣ ಶೃತಿ ಅಮ್ಮನವರ 175ನೇ ಸಿನಿಮಾ ಅನ್ನೋದಕ್ಕೆ. ಅಷ್ಟು ಸುಲಭವಲ್ಲ 175 ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಇವರಿಗೆ ರಿಪ್ಲೇಸ್ಮೆಂಟ್ ಅಲ್ವೆ ಅಲ್ಲ ಎಂದು ಶೃತಿ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು‌.

 

ಹಿರಿಯ ನಟಿ ಶೃತಿ ಮಾತನ್ನಾಡಿ, ಪ್ರತಿ ಒಂದು ಸಿನಿಮಾಗಿಂತ ಇದು ವಿಶೇಷ. ನನ್ನನ್ನ ಚಿತ್ರರಂಗಕ್ಕೆ ಕರೆತಂದ ರಾಜ್‍ಕುಮಾರ್ ಸರ್ ಗೆ ಥ್ಯಾಂಕ್ಯೂ ಹೇಳ್ತೀನಿ. ಇಷ್ಟು ವರ್ಷ ನಾನು ಇಂಡಸ್ಟ್ರಿಯಲ್ಲಿ ಉಳೀತಾ ಇದ್ದೀನಿ ಅಂದ್ರೆ ದ್ವಾರಕೀಶ್ ಅಣ್ಣ ಮಾಡಿದ ಶೃತಿ ಸಿನಿಮಾ. ಡೈರೆಕ್ಟರ್ ಸರ್, ಮದರ್ ಟೀಂ ಕಥೆ ಕೇಳುವಾಗ ಆಸಕ್ತಿ ಅನ್ನಿಸ್ತು. ಏನಾದರೂ ಹೊಸತನ ಮಾಡಬೇಕು ಎಂಬ ತುಡಿತ ಅವರಲ್ಲಿತ್ತು. ಡೈರೆಕ್ಟರ್ ಸರ್ ಹೇಳ್ತಾ ಇದ್ದರು, ನಿಮ್ಮ 175ನೇ ಸಿನಿಮಾಗೆ ಚ್ಯುತಿ ಬರದಂತೆ ಮಾಡ್ತೀನಿ ಅಂದ್ರೆ ಆದ್ರೆ ನಿರ್ಮಾಪಕರಿಗೆ ಬೇಸರ ಆಗದಂತೆ ಅವರಿಗೆ ಚ್ಯುತಿ ಬರದಂತೆ ಮಾಡಿ. ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಕೆಲಸ ಸಿಗ್ತಾ ಇರುತ್ತೆ ಅದಕ್ಕೆ ಕಾರಣ ನಿರ್ಮಾಪಕರು. ಇಷ್ಟು ವರ್ಷದಲ್ಲಿ ವರ್ಕ್ ಶಾಪ್ ಯಾವ ಸಿನಿಮಾಗೂ ಮಾಡಿರಲಿಲ್ಲ. ಆದರೆ ಈ ಸಿನಿಮಾಗೆ ವರ್ಕ್ ಶಾಪ್ ಮಾಡುವಂತೆ ಕೇಳಿಕೊಂಡಿದ್ದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದರು.

 

 

ಪ್ರಮುಖ ಪಾತ್ರದಲ್ಲಿ ಮಾಡಿರುವ ಚಿರಂಜೀವಿ ಮಾತನ್ನಾಡಿ, ಸಿನಿಮಾದಲ್ಲಿ ಶೃತಿ ಅಮ್ಮನ ಮಗನ ಕ್ಯಾರೆಕ್ಟರ್. ಇಲ್ಲು ರಫ್ ಅಂಡ್ ರಗಡ್ ಕ್ಯಾರೆಕ್ಟರ್ ಮಾಡಿದ್ದೀನಿ. ನೀಟಾಗಿ ನಮ್ಮ ಪಾತ್ರಗಳನ್ನ ಪ್ರೆಸೆಂಟ್ ಮಾಡಿದ್ದಾರೆ. ನಮ್ಮ ಅನ್ನದಾತರು ಕೂಡ ಎಲ್ಲದಕ್ಕೂ ಸಪೋರ್ಟ್ ಮಾಡಿದ್ದಾರೆ. ಒಂದೊಳ್ಳೆ ಗ್ಲಿಂಪ್ಸ್ ಮೂಲಕ ಬರ್ತೇವೆ ಎಂದರು.

 

 

ನಿರ್ಮಾಪಕ ಕೆ ಸತೀಶ್ ಚಂದ್ರ ಅವರು ಮಾತನ್ನಾಡುತ್ತಾ, ಮೈಸೂರಲ್ಲಿ ಪ್ರೊಡಕ್ಷನ್ ನಂಬರ್ ಒನ್ ಅಂತ ಮೊದಲ ಸಿನಿಮಾ ಶುರು ಮಾಡ್ತಾ ಇದ್ದೀವಿ. ಇಲ್ಲಿ ಮದರ್ ಅನ್ನೋ ಎರಡನೇ ಸಿನಿಮಾವನ್ನ ಲಾಂಚ್ ಮಾಡ್ತಾ ಇದ್ದೀವಿ. ಎಲ್ಲರ ಸಹಕಾರ ಹೀಗೆ ಇರಲಿ ಅಂತ ಕೇಳಿಕೊಳ್ತೇನೆ ಎಂದರು.

 

 

 

ಆರತಿ ಹಾಗೂ ಸತೀಶ್ ಚಂದ್ರ ನಿರ್ಮಾಣದಲ್ಲಿ ಶಾಂತ್ವು ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ಶೃತಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಚಿರಂಜೀವಿ, ಪ್ರಸನ್ನ ಶೆಟ್ಟಿ, ಅರ್ಚನಾ ಹೆಗ್ಡೆ, ಅಭಯ್ ಪುನೀತ್, ಗೀತಾಂಜಲಿ, ಹಿಮಶ್ರೀ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಅಂಜನ್ ಮ್ಯೂಸಿಕ್, ಯು ಅಶ್ವಿನ್ ಛಾಯಾಗ್ರಹಣ, ವಸಂತ್ ಸಂಕಲನ, ನಾಗಾರ್ಜುನ ಶರ್ಮಾ ಸಾಹಿತ್ಯ ನೀಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,