Namma Range Rove.News

Monday, June 08, 2026

 

*"ನಮ್ಮ ರೇಂಜ್ ರೋವರ್" ನಲ್ಲಿ ಸುಮಧುರ ಹಾಡುಗಳು* .               

 

 ಸಿ.ಎಮ್.ಎಮ್ ಹಿಂದೂಸ್ತಾನ್ ಫಿಲಂಸ್ ಲಾಂಛನದಲ್ಲಿ ಡಾ||ಮೌಲಾ ಶರೀಫ್ ಸಿ.ಕೆ ನಿರ್ಮಿಸಿರುವ ಹಾಗೂ ಓ.ಎಸ್.ಆರ್ ಕುಮಾರ್ ನಿರ್ದೇಶಿಸಿರುವ "ನಮ್ಮ ರೇಂಜ್ ರೋವರ್" ಚಿತ್ರದ ಹಾಡುಗಳು ಹಾಗೂ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.  ಕೂಡಲಸಂಗಮದ ಪೂಜ್ಯ ಶ್ರೀಸಂಗಮಾನಂದ ಸ್ವಾಮಿಗಳು, ಮಾಜಿ ಶಾಸಕರಾದ ರಾಜಣ್ಣ, ಉದ್ಯಮಿ ವೀರಭದ್ರಾಚಾರಿ, ನಟ ಸಂಪೂರ್ಣೇಶ್ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಕಿಶೋರ್ ಕುಮಾರ್, ನಿರ್ಮಾಪಕರ ಸಂಘದ ಕಾರ್ಯದರ್ಶಿ ರಮೇಶ್ ಯಾದವ್, ವಿತರಕರಾದ ರಮೇಶ್ ಬಾಬು ಹಾಗೂ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ತಮ್ಮ ಪ್ರೋತ್ಸಾಹದ ಮಾತುಗಳ ಮೂಲಕ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಪೂಜ್ಯ ಸ್ವಾಮಿಗಳು ಹಾಡುಗಳು ಹಾಗೂ ಟೀಸರ್ ಬಿಡುಗಡೆ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಮೂಲತಃ ಕಡಪದವನು. ಕಿರುಚಿತ್ರ ನಿರ್ದೇಶನ ಮಾಡಿ ಅನುಭವವಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಅವಕಾಶ ನೀಡಿದ ನಿರ್ಮಾಪಕ ಮೌಲಾ ಶರೀಫ್ ಅವರಿಗೆ ಧನ್ಯವಾದ. ಚಿತ್ರದಲ್ಲಿ ಸುಮಧುರ ಹಾಡುಗಳಿದ್ದು, ಸತ್ಯ ಸೋಮೇಶ್ ಸಂಗೀತ ನೀಡಿದ್ದಾರೆ. ಸಿರಿ ಮ್ಯೂಸಿಕ್ ನಲ್ಲಿ ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಿದೆ. ತೆಲುಗು ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿರುವ ಆಟ ಸಂದೀಪ್ ಈ ಚಿತ್ರದ ಮೂಲಕ ನಾಯಕರಾಗಿದ್ದಾರೆ. ರಾಜಸ್ಥಾನ ಮೂಲದ ಮೇಘನಾ ರಜಪೂತ್ ಈ ಚಿತ್ರದ ನಾಯಕಿ. ಅರವಿಂದ್ ರಾವ್,  ಬ್ಯಾಂಕ್ ಜನಾರ್ದನ್, ಯತಿರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಾಜಾ ಶಿವಶಂಕರ್ ಛಾಯಾಗ್ರಹಣ ಹಾಗೂ ಗುರುಪ್ರಸಾದ್ ಸಂಕಲನವಿರುವ ಈ ಚಿತ್ರದ ಶೀರ್ಷಿಕೆ ಒಂದು ದುಬಾರಿ ಕಾರಿನ ಹೆಸರಿನದ್ದಾಗಿದೆ. ಚಿತ್ರಕ್ಕೆ ಶೀರ್ಷಿಕೆ ಪೂರಕವಾಗಿದೆ. ಈ ಶೀರ್ಷಿಕೆ ಇಡಲು ಕಾರಣ ಏನು? ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಚಿತ್ರವನ್ನು ಮುಂದಿನ ತಿಂಗಳು ತೆರಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು ನಿರ್ದೇಶಕ ಓ.ಎಸ್.ಆರ್ ಕುಮಾರ್.  

 

 ನಮ್ಮ ಊರು ಬಾಗೇಪಲ್ಲಿ. ಸುಪ್ರೀಂಕೋರ್ಟ್ ವಕೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಚಿಕ್ಕಂದಿನಿಂದಲೂ ರಾಜಕುಮಾರ್ ಅವರ ಚಿತ್ರಗಳನ್ನು ನೋಡಿ ಬೆಳೆದವನು. "ನಮ್ಮ ರೇಂಜ್ ರೋವರ್" ನಮ್ಮ ಸಂಸ್ಥೆಯ ನಿರ್ಮಾಣದ ಮೂರನೇ ಚಿತ್ರ. ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ನಾನು ಚಿತ್ರರಂಗಕ್ಕೆ ಬರಲು ಉಮೇಶ್ ಬಣಕಾರ್ ಅವರೆ ಕಾರಣ. ಮುಂದೆ ಕೂಡ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಯೋಜನೆ ಇದೆ. ಈ ಚಿತ್ರದ ಹಾಡುಗಳು ಹಾಗೂ ಟೀಸರ್ ಬಿಡುಗಡೆ ಮಾಡಿಕೊಟ್ಟ ಪೂಜ್ಯರಿಗೆ ಹಾಗೂ ಗಣ್ಯರಿಗೆ ಧನ್ಯವಾದ ಎಂದು ನಿರ್ಮಾಪಕ ಮೌಲಾ ಶರೀಫ್ ಹೇಳಿದರು.

 

 ತಮ್ಮ ಪಾತ್ರದ ಕುರಿತು ನಾಯಕಿ ಮೇಘನಾ ರಜಪೂತ್ ತಿಳಿಸಿದರು. ಅತಿಥಿ ಪಾತ್ರದಲ್ಲಿ ನಟಿಸಿರುವ ನಟ ಸನತ್ ಅವರು ಕೂಡ "ನಮ್ಮ ರೇಂಜ್ ರೋವರ್" ನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,