Balaramana Dinagalu.News

Wednesday, December 17, 2025

 

 *ಬಲರಾಮನ ದಿನಗಳು ಚಿತ್ರದ* *"ಶುರು ಶುರು" ಹಾಡು ಬಿಡುಗಡೆ*

 

" ಆ ದಿನಗಳು" ಚಿತ್ರದ ಭರ್ಜರಿ ಯಶಸ್ಸಿನ 18 ವರ್ಷಗಳ ನಂತರ  ನಿರ್ದೇಶಕ ಕೆ. ಎಂ ಚೈತನ್ಯ ನಿರ್ದೇಶನ ಮಾಡಿರುವ  "ಬಲರಾಮನ ದಿನಗಳು" ಚಿತ್ರದ   "ಶುರು ಶುರು" ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

 

ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಬಂಡವಾಳ ಹೂಡಿರುವ ಚಿತ್ರದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ಕಾಣಿಸಿಕೊಂಡಿದ್ದು ಇದು ವಿನೋದ್ ಅವರ 25 ನೇ  ಚಿತ್ರ. ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ  ಅವಿನಾಶ್ , ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ಸೇರಿದಂತೆ ಹಿರಿ- ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

 

ಶುರು ಶುರು ಹಾಡಿಗೆ ತಮಿಳಿನ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದು  ಹಿರಿಯ ಗೀತ ರಚನೆಕಾರ  ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಸಂಚಿತ್ ಹೆಗ್ಡೆ ಹಾಗು ಪುಣ್ಯ ಹಾಡಿದ್ದಾರೆ.

 

ನಿರ್ದೇಶಕ ಕೆ.ಎಂ ಚೈತನ್ಯ ಮಾತನಾಡಿ ಶುರು ಶುರು ಹಾಡಿನ ಮೂಲಕ ಸಿನಿಮಾ ಪ್ರಚಾರ ಶುರು ಆಗಿದೆ.  ಆ ದಿನಗಳು ಚಿತ್ರದ ಪಾರ್ಟ್ - 2 ಅಲ್ಲ.. ಬಲರಾಮನ ದಿನಗಳು ಚಿತ್ರ ಕಾಲ್ಪನಿಕ ಕಥೆ. ಆ ದಿನಗಳು ಚಿತ್ರ ಆದ ಮೇಲೆ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ,ಸಹಾಯಕ‌ ನಿರ್ದೇಶನ ಮಾಡಲು ಕೇಳಿದ್ದರು.‌ ಆ ಸಿನಿಮಾ ಜಿಗರ್ ಥಂಡಾ. ಅಲ್ಲಿ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದರು ಅದು ಗಮನ ಸೆಳೆದಿತ್ತು ಎಂದರು.

ನಿರ್ಮಾಪಕರಾದ ಶ್ರೇಯಸ್ ಮತ್ತು ಪದ್ಮಾವತಿ ಅವರು ಆ ದಿನಗಳು  ಚಿತ್ರದ ಮಾದರಿಯಲ್ಲಿ ಸಿನಿಮಾ ಮಾಡವೇಕು ಅದು ವಿನೋದ್ ಪ್ರಭಾಕರ್ ಗೆ ಎಂದು ಹೇಳಿದ್ದರು. ಗ್ಯಾಂಗ್ ಸ್ಡರ್ ಸಿನಿಮಾ ಮಾಡಲಾಗಿದೆ. ಜಯಂತ್ ಅವರು ಬರೆಯುವುದು ಸವಾಲಿನ‌ ಕೆಲಸ ಎಂದು ಹೇಳಿ ಅದ್ಬುತವಾಗಿ ಬರೆದಿದ್ದಾರೆ.ಬೇರೆ ಬೇರೆ ಸನ್ನಿವೇಶ ಚಿತ್ರೀಕರಣ ಮಾಡುವಾಗ  ಎಚ್. ಸಿ ವೇಣು ಅದ್ಬುತ ಸನ್ನಿವೇಶ ಸೆರೆ ಹಿಡಿದಿದ್ದಾರೆ. ಹಾಡಿನಲ್ಲಿ ಬಳಸಲಾಗಿದೆ. ಅದರಲ್ಲಿ ವಿನೋದ್ ಮತ್ತು ಪ್ರಿಯಾ ಅವರಿಗೆ ಸಲ್ಲಬೇಕು. ನಿರ್ಮಾಪಕರು ಆಸೆಯಿಂದ ಸಿನಿಮಾ‌ ಮಾಡಿದ್ದಾರೆ.ಸಿನಿಮಾ ಗೆದ್ದರೆ ಹತ್ತು ಹಲವಾರು ಸಿನಿಮಾ ಮಾಡ್ತಾರೆ.ಬೆಂಬಲ ಮುಖ್ಯ ಎಂದು ಹೇಳಿದರು

 

ನಟ ವಿನೋದ್ ಪ್ರಭಾಕರ್ ಮಾತನಾಡಿ ಬಲರಾಮನ ದಿನಗಳು ಚಿತ್ರಕ್ಕೆ ಆಡಿಯೋ ಕಂಪನಿಯೊಂದು ಗರಿಷ್ಠ ಮೊತ್ತ ನೀಡಿದೆ.ನನ್ನ. ಚಿತ್ರ ಜೀವನದ 25 ಚಿತ್ರಗಳಲ್ಲಿ ಆಡಿಯೋಗೆ ಗರಿಷ್ಢ ಮೊತ್ತ ನೀಡಿದ ಮೊದಲ ಚಿತ್ರ. ಜೊತೆಗೆ ಪಾತ್ರವೂ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕ ಚೈತನ್ಯ ಕೆಲ ಸನ್ನಿವೇಶಗಳನ್ನು ಕಂಪೋಸ್ ಮಾಡಲು ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ನಟಿ ಪ್ರಿಯಾ ಅವರ ಜೊತೆ ಚರ್ಚೆ  ಮಾಡಿ ಸನ್ನಿವೇಶದಲ್ಲಿ ನಟಿಸಿದ್ದೇವೆ ಉತ್ತಮವಾಗಿ ಮೂಡಿ ಬಂದಿದೆ ಎಂದರು

 

ನಟಿ ಪ್ರಿಯಾ ಆನಂದ್ ಮಾತನಾಡಿ, ಕನ್ನಡದಲ್ಲಿ ರಾಜ ಕುಮಾರ ಆದ ಬಳಿಕ ಇದು ಐದನೇ ಚಿತ್ರ. ಕನ್ನಡ ಕಲಿಯಲು ಪುನೀತ್ ರಾಜ್ ಕುಮಾರ್ ಕಾರಣ. ಭಾಷೆ ಗೊತ್ತಿದ್ದರೆ ಸನ್ನಿವೇಶಗಳಲ್ಲಿ ಸುಲಭವಾಗಿ ನಟಿಸಲು ಸಾದ್ಯವಾಗುತ್ತದೆ ಎಂದಿದ್ದರು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.ಬಲರಾಮನ ದಿನಗಳು ಚಿತ್ರ ಚೆನ್ನಾಗಿ ಬಂದಿದೆ. ಎಂದು ಮಾಹಿತಿ ಹಂಚಿಕೊಂಡರು.

 

ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಮಾತನಾಡಿ ಸುಮಾರು ಒಂದು ಸಾವಿರ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ.  ಶುರು ಶುರು ಹಾಡು ಆಗ್ರ 10 ಹಾಡುಗಳಲ್ಲಿ ಒಂದಾಗಲಿದೆ. ಜಯಂತ್ ಕಾಯ್ಕಿಣಿ ಅವರು ಉತ್ತಮ ಸಾಹಿತ್ಯ ನೀಡಿದ್ದಾರೆ. ಚಿತ್ರವೂ ಚೆನ್ನಾಗಿ ಬಂದಿದೆ ಎಂದು ಹೇಳಿದರು.

 

ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ ಸಿನಿಮಾ ಮಾಡಿರುವುದು ಖುಷಿ ಇದೆ. ಮುಂದಿನ ದಿನಗಳಲ್ಲಿ‌ ದೊಡ್ಡ ಸಿನಿಮಾ‌ ಮಾಡುವ ಆಸೆ ಇದೆ. ಕುಟುಂಬದ ಜೊತೆ ಕುಳಿತು ನೋಡುವ ಸಿನಿಮಾ ಮಾಡಿದ್ದೇವೆ , ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರಿಗೂ ಧನ್ಯವಾದಗಳು ಎಂದರು.

 

ಮತ್ತೊಬ್ಬ ನಿರ್ಮಾಪಕ ಶ್ರೇಯಸ್ ಮಾತನಾಡಿ ಚಿತ್ರೀಕರಣ ಪೂರ್ಣಗೊಂಡಿದೆ.ಟಿ ಸೀರೀಸ್ ಚಿತ್ರದ ಹಾಡಿನ‌ ಹಕ್ಕು ಖರೀದಿ ಮಾಡಿದ್ದು ಮತ್ತೊಂದು ಸಿನಿಮಾ ಮಾಡುವಷ್ಡು ಹಣ ನೀಡಿದ್ದಾರೆ. ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಾಗುವುದು  ಎಂದು ಹೇಳಿದರು

 

ಜಯಂತ್ ಕಾಯ್ಕಿಣಿ ಮಾತನಾಡಿ ಕ್ರಾಸ್ ವರ್ಡ್ ಪದ ಬಳಸಲಾಗಿದೆ. ಚಿತ್ರಮಂದಿರಕ್ಕೆ ಹೋಗಿ ನೋಡುವ ಸಿನಿಮಾ. ಇಷ್ಟ ಪಟ್ಟು ಮಾಡಿದ ಸಿನಿಮಾ , ಯುವ ಪ್ರತಿಭೆಗಳ ತಂಡ ಚಿತ್ರದಲ್ಲಿದೆ ಎಂದರು

 

ವಿನಯ್ ಗೌಡ ಮಾತನಾಡಿ  ಚಿತ್ರದಲ್ಲಿ ಕತ್ತಿ ಎನ್ನುವ ಪಾತ್ರ ಮಾಡಿದ್ದೇನೆ. ಶುಸು ಶುರು ಹಾಡಿನ ಮೂಲಕ ಬಲರಾಮನ ದಿನಗಳು ಅಬ್ಬರ ಶುರುವಾಗಿದೆ ಎಂದರು.

 

Copyright@2018 Chitralahari | All Rights Reserved. Photo Journalist K.S. Mokshendra,