Manikanta.Film News

Friday, December 26, 2025

 

*ನಾಗಸಾಧುಗಳ ಸಮ್ಮುಖದಲ್ಲಿ ಮಣಿಕಂಠ ಮುಹೂರ್ತ*

 

       ಸ್ವಾಮಿ ಶರಣಂ ಅಯ್ಯಪ್ಪನ ಕುರಿತಾದ ಚಿತ್ರವು ಮೂರು ದಶಕಗಳ ನಂತರ *ಮಣಿಕಂಠ* ಹೆಸರಿನಲ್ಲಿ ಸಿನಿಮಾವೊಂದು ಸಿದ್ದಗೊಳ್ಳುತ್ತಿದೆ. ನವೆಂಬರ್-ಡಿಸೆಂಬರ್ ಅಂದರೆ ಸ್ವಾಮಿ ದರ್ಶನಕ್ಕೆ ಮಾಲಾಧಾರಿಯಾಗಿ ಹೋಗುವುದುಂಟು. ಈ ಹಿನ್ನಲೆಯಲ್ಲಿ ಮಹಾಲಕ್ಷೀಪುರಂನ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ದೇವಸ್ಥಾನದಲ್ಲಿ ಭಕ್ತರು ತುಂಬಿಕೊಂಡಿದ್ದರು. ಇದರ ನಡುವೆ ’ಮಣಿಕಂಠ’ ಮುಹೂರ್ತ ನಡೆಯಿತು. ತಂಡಕ್ಕೆ ಶುಭ ಹಾರೈಸಲು ಕಾಶಿಯಿಂದ ಸಾಕ್ಷಾತ್ ಎಂಟು ನಾಗಸಾಧುಗಳು ಆಗಮಿಸಿದ್ದು ವಿಶೇಷವಾಗಿತ್ತು. ಅವರ ಸಮ್ಮುಖದಲ್ಲಿ ಶುಭಕಾರ್ಯ ಯಶಸ್ವಿಯಾಗಿ ನಡೆಯಿತು.

 

        ಅಶ್ವಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ *ಅಶ್ವಿನಿ ಸಂತೋಷ್‌ಸಿಂಹ ನಿರ್ಮಾಣ* ಮಾಡುವುದರ ಜತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ *ಸಂತೋಷ್ ಸಿಂಹ ಹೊಸ ಅನುಭವ ಎನ್ನುವಂತೆ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಅಲ್ಲದೆ ನಾಯಕನಾಗಿ* ನಟಿಸುತ್ತಿದ್ದಾರೆ. ಹಾಗೂ ಇವರ ಇಬ್ಬರು ಮಕ್ಕಳು ಬಣ್ಣ ಹಚ್ಚುತ್ತಿದ್ದಾರೆ. ಒಂದು ರೀತಿಯಲ್ಲಿ ಇಡೀ ಕುಟುಂಬ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

 

       ಟೈಟಲ್ ರೋಲ್‌ದಲ್ಲಿ ಗುರು ಜೀವನ್‌ಸಿಂಹ, ವೇದನೆ ಪಾಡುವ ಪಾತ್ರದಲ್ಲಿ ತನುಶ್ರೀ ಸಿಂಹ, ತಾಯಿಯಾಗಿ ಬಿ.ಎಸ್.ಮಂಜುಳಾ, ವೈಷ್ಣವಿ.ಎಸ್.ಡಿ, ಶರತ್.ಎಸ್.ಎಂ, ಮಮತಾ, ಶಿವಣ್ಣ ಮುಂತಾದವರು ಅಭಿನಯಿಸಿದ್ದಾರೆ. ಚೇತನ್‌ಕುಮಾರ್ ಸಾಹಿತ್ಯದ ಐದು ಗೀತೆಗಳಿಗೆ ಸ್ವರೂಪ್.ಆರ್ ಸಂಗೀತ ಸಂಯೋಜಿಸುತಿದ್ದಾರೆ. ಛಾಯಾಗ್ರಹಣ-ಸಂಕಲನ ವರ್ಷಿತ್.ಎಸ್.ಎನ್, ಸಾಹಸ ಗಣೇಶ್ ಅವರದಾಗಿದೆ. ಬೆಂಗಳೂರು, ಶಬರಿಮಲೆ, ಪಂಪ, ದೊಡ್ಡಪಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

        ಪೂಜೆ ನಂತರ ಮಾತನಾಡಿದ ನಿರ್ದೇಶಕರು ಮಣಿಕಂಠನು ಪ್ರತಿಯೊಬ್ಬರ ಜೀವನದಲ್ಲಿ ಆವರಿಸಿಕೊಂಡು ಪವಾಡ ಮಾಡಿದ್ದಾನೆ. ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. ಹುಡುಕುತ್ತಾ ಹೋದರೆ ಮುಗಿಯುವುದಿಲ್ಲ. ಇಪ್ಪತ್ತೈದು ವರ್ಷ ದೊಡ್ಡಪಾದಕ್ಕೆ ಹೋಗಿ ಭಕ್ತಿಯಿಂದ ಸ್ವಾಮಿ ದರ್ಶನ ಮಾಡಿದ್ದೇನೆ. ನನ್ನ ಬದುಕಲ್ಲಿ ನಡೆದಂತ ಸತ್ಯ ಘಟನೆಗಳು, ಸ್ವಾಮಿಯ ಪವಾಡಗಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಅಲ್ಲದೆ ತಾಯಿ ಸೆಂಟಿಮೆಂಟ್, ಪ್ರೀತಿ ಎಲ್ಲವು ತುಂಬಿಕೊಂಡಿರುತ್ತದೆ. ಹೆಣ್ಣು ಮಕ್ಕಳು ಋತುಮತಿ ಆದ ತರುವಾಯ ಹೋಗದೆ ಇದ್ದಾಗ, ಅವರ ಯಾತನೆಗಳು. ಭಕ್ತರುಗಳಿಗೆ ಕರಪುಸ್ವಾಮಿ ಬಗ್ಗೆ ತಿಳಿಯದ ಸಂಗತಿಗಳು. ಮಾಲಾಧಾರಿಗಳು ತೊಂದರೆಗೆ ಸಿಲುಕಿಕೊಂಡಾಗ ಕರಪುಸ್ವಾಮಿ ಹೇಗೆ ಕಾಪಾಡುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ಪಾರಿವಾಳ ಬಂದು ಹೋಗಲಿದೆ. ಗ್ರಾಫಿಕ್ಸ್ ಬಳಸದೆ ನೈಜ ಪವಾಡಗಳನ್ನು ತೋರಿಸಲಾಗುತ್ತದೆ. ಇಂತಹುದೆ ಹಲವು ವಿಷಯಗಳು ಸಿನಿಮಾದಲ್ಲಿ ಇರುತ್ತದೆಂದು ಸಂತೋಷ್ ಸಿಂಹ ಮಾಹಿತಿ ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,