ರಕ್ಕಸಪುರದೊಳ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ. ಕಿಚ್ಚ ಸುದೀಪ್
ಸಾಹಸ ನಿರ್ದೇಶಕ ಕೆ.ರವಿವರ್ಮ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ " ರಕ್ಕಸ ಪುರದೊಳ್ " ಚಿತ್ರ ಫೆಬ್ರವರಿ 6 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದ್ದು ಕಿಚ್ಚ ಸುದೀಪ್ ಸೇರಿದಂತೆ ಚಂದನವನ ನಿರ್ದೇಶಕರಿಂದ ಬೆಂಬಲ ವ್ಯಕ್ತವಾಗಿದೆ.
ನಟ ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ "ಚಿತ್ರವನ್ನು ನಿರ್ದೇಶಕ ಜೋಗಿ ಪ್ರೇಮ್ ಶಿಷ್ಯ ರವಿ ಸಾರಂಗ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟ್ರೈಲರ್ ಅನ್ನು ಕಿಚ್ಚ ಸುದೀಪ್, ನಿರ್ದೇಶಕರಾದ ಪ್ರೇಮ್, ಎ.ಪಿ ಅರ್ಜುನ್ ಸೇರಿದಂತೆ ಹಲವು ಗಣ್ಯರು ಸಾಹಸ ನಿರ್ದೇಶಕ ರವಿವರ್ಮಾ ಅವರ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ ಶುಭ ಹಾರೈಸಿದರು.
ಕಿಚ್ಚ ಸುದೀಪ್ ಮಾತನಾಡಿ ನಟ ರಾಜ್ ಬಿ ಶೆಟ್ಟಿ ಹೆಸರೇಳಲು ಆಗದ ಶೀರ್ಷಿಕೆ ಇಟ್ಟು ಸಿನಿಮಾ ಮಾಡ್ತಾರೆ. ಸಿನಿಮಾ ಗೆಲ್ಲುತ್ತವೆ. ನನಗೂ ಹೆಸರು ಹೇಳಲು ಆಗದ ಶೀರ್ಷಿಕೆ ಇಟ್ಟು ಸಿನಿಮಾ ಮಾಡಿ. ರಕ್ಕಸಪುರದೊಳ್ ಚಿತ್ರದ ಟ್ರೈಲರ್ ಉತ್ತಮವಾಗಿ ಮೂಡಿಬಂದಿದೆ. ರವಿ ವರ್ಮಾ ಜೊತೆಗೆ ಸಿನಿಮಾ ಉದ್ಯಮಕ್ಕೆ ಕಾಲಿಟ್ಟಿದ್ದು ಅವರ ಬೆಳವಣಿಗೆ ಕಂಡಿದ್ದೇನೆ. ಅವರ ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ಒಳಿತಾಗಲಿ ಎಂದರು
ನಟ ರಾಜ್ ಬಿ ಶೆಟ್ಟಿ ಮಾತನಾಡಿ , ಸಿನಿಮಾ ಒಪ್ಪಿಕೊಳ್ಳಲು ನಿರ್ದೇಶಕರೇ ಕಾರಣ.ಕನ್ನಡದಲ್ಲಿ ನಿರ್ದೇಶಕರ ಕೊರತೆ ಎಂದು ಪದೇ ಪದೇ ಹೇಳುವೆ . ನಿರ್ದೇಶಕರು ಕಥೆ ಹೇಳಿದ ರೀತಿ ಇಷ್ಟವಾಯಿತು. ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ತಂತ್ರಜ್ಞರು ಶ್ರೀಮಂತರು ಇರುವಾಗ, ಕಡಿಮೆ ಬಜೆಟ್ ಸಿನಿಮಾ ಯಶಸ್ಸು ಆದಾಗ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ. ಚಿತ್ರದಲ್ಲಿ ತಂತ್ರಜ್ಣರು ಶ್ರೀಮಂತರಾಗಿರುವ ಚಿತ್ರ. ಚಿತ್ರ ಯಶಸ್ಬಿಯಾದರೆ ಇಡೀ ಚಿತ್ರಕ್ಕೆ ಒಳ್ಳೆಯದಾಗಲಿದೆ ಎಂದರು
ನಿರ್ಮಾಪಕ ಕೆ ರವಿವರ್ಮಾ ಮಾತನಾಡಿ ರಕ್ಕಸಪುರದೊಳ್ ಸಿನಿಮಾ ಕಥೆ ಹುಟ್ಟಿಕೊಂಡಿದ್ದೇ ರೋಚಕ. ರಸ್ತುಂ ಸಿನಿಮಾ ಮಾಡುವಾಗ ನಿರ್ದೇಶಕ ರವಿ ಮೂರು ಎಳೆ ಹೇಳಿದ್ದ. ಕಥೆ ಕೇಳಿ ಥ್ರಿಲ್ ಆದೆ. ರಾಜ್ ಬಿ ಶೆಟ್ಟಿ ಕಥೆ ಒಪ್ಪಿಕೊಂಡಿದ್ದರು. ರಾಜ್ ಶೆಟ್ಟಿ ಕರೆ ಮಾಡಿ ಕಥೆಯ ಬಗ್ಗೆ ಮೆಚ್ಚೊಕೊಂಡರು. ಪ್ರೊಡಕ್ಣನ್ ನಲ್ಲಿ ಏನಾದ್ರೂ ತೊಂದರೆ ಆಗಿದ್ದರೆ ಕ್ಷಮೆ ಇರಲಿ. ಚಿತ್ರಕ್ಕಾಗಿ ಪ್ರತಿಯೊಬ್ಬರ ಸಹಕಾರ ದೊಡ್ಡದಿದೆ. ಎಲ್ಲರೂ ಪ್ರೀತಿ ವಿಶ್ವಾಸಕ್ಕಾಗಿ ಮಾಡಿದ್ದಾರೆ. ಸಿನಿಮಾದಲ್ಲಿ ದುಡಿದಿದ್ಸನ್ನು ಸಿನಿಮಾಗೆ ಹಾಕಿದ್ದೇನೆ. ಇನ್ನಷ್ಟು ಸಿನಿಮಾ ಮಾಡುವ ಉದ್ದೇಶವಿದೆ ಈ ಮಟ್ಟಕ್ಕೆ ಬರಲು ಕುಟುಂಬ ಮತ್ತು ಸ್ನೇಹಿತರು ಕಾರಣ ಎಂದರು
ಕನ್ನಡ ಮತ್ತು ಮಲೆಯಾಳಂ ಸಿನಿಮಾದಲ್ಲಿ ಮಾಡಿದ್ದೇವೆ. ಚಿತ್ರದ ಪ್ರತಿಕ್ರಿಯೆ ನೋಡಿ ಬೇರೆ ಬೇರೆ ಭಾಷೆಯಲ್ಲಿ ಡಬ್ ಮಾಡುವ ಉದ್ದೇಶವಿದೆ .ನಿರ್ದೇಶಕ ಪ್ರೇಮ್ , ಹಾಗು ಕೆವಿಎನ್ ಸಂಸ್ಥೆಯ ಕಾರಣದಿಂದ ರಕ್ಕಸಪುರದೊಳ್ ಚಿತ್ರ ಮೂಡಿ ಬಂದಿದೆ ಯಾವುದೇ ಕಾರಣಕ್ಕೂ ಪ್ರೋತ್ಸಾಹ ಮರೆಯಲ್ಲ ಎಂದು ಹೇಳಿದರು.
ನಿರ್ದೇಶಕ ರವಿ ಸಾರಂಗ ಮಾತನಾಡಿ ಸೈಕಾಲಜಿಕಲ್ ಆಕ್ಷನ್ ಥ್ರಿಲರ್ ಸಿನಿಮಾ,ನಟ ರಾಜ್ ಬಿ ಶೆಟ್ಟಿ ಆಫ್ ಮೈಂಡ್ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರ. ಚಿತ್ರ ಚೆನ್ನಾಗಿ ಬಂದಿದೆ ಫೆಬ್ರವರಿ 6 ರಂದು ಸಿನಿಮಾ ಬರುತ್ತಿದೆ ಎಲ್ಲರ ಸಹಕಾರವಿರಲಿ ಎಂದರು
ನಾಯಕಿ ಸ್ವಾಧಿಷ್ಡ ಕೃಷ್ಣ ಮಾತನಾಡಿ ಒಂದು ಸರಳ ಪ್ರೇಮ ಕಥೆಯ ನಂತರ ಎರಡನೇ ಚಿತ್ರ. ರಾಜ್ ಬಿ ಶೆಟ್ಟಿ ಜೊತೆ ಕೆಲಸ ಸಿಗಬೇಕು ಅಂದುಕೊಂಡಿದ್ದೆ. ಕನಸು ನಸನಸಾಗಿದೆ. ವಿಲಿಯಂ ಡೇವಿಡ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ . ನಾಯಕಿಯರು ಸ್ನೇಹಿತೆಯಾಗುವುದಿಲ್ಲ ಎನ್ನುತ್ತಾರೆ. ಆದರೆ ಅರ್ಚನಾ ಕೊಟ್ಟಿಗೆ ಜೊತೆ ನಟಿಸಿದ್ದೇನೆ . ಸುದೀಪ್ ಸರ್ ಜೊತೆ ಕೆಲಸ ಮಾಡುವ ಆಸೆ ಇದೆ ಎಂದರು
ನಟಿ ಅರ್ಚನಾ ಕೊಟ್ಟಿಗೆ ಮಾತನಾಡಿ, ಪ್ರೀತಿಯಿಂದ ಮಾಡಿದ ಸಿನಿಮಾ, ಸುದೀಪ್ ಸರ್ ಟ್ರೈಲರ್ ಬಿಡುಗಡೆ ಮಾಡಿರುವುದು ಖುಷಿಕೊಟ್ಟಿದೆ. ನಿರ್ಮಾಪಕ ರವಿವರ್ಮಾ ಚೊಚ್ಚಲ ನಿರ್ಮಾಣದಲ್ಲಿ ಉತ್ತಮ ಚಿತ್ರ ನೀಡಿದ್ದಾರೆ.ಎಲ್ಲರ ಸಹಕಾರವಿರಲಿ ಎಂದು ಹೇಳಿದರು
ವಿತರಕ ಕೆವಿಎನ್ ಪ್ರೊಡಕ್ಷನ್ ಸುಪ್ರೀತ್ ಮಾತನಾಡಿ ಸೆಕೆಂಡ್ ಹಾಫ್ ಚೆನ್ನಾಗಿ ಮೂಡಿಬಂದಿದೆ. ಟ್ರೈಲರ್ ಉತ್ತಮವಾಗಿ ಮೂಡಿಬಂದಿದೆ ಫೆಬ್ರವರಿ 6 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದರು
ನಿರ್ದೇಶಕ ಎಪಿ ಅರ್ಜುನ್, ಮಹೇಶ್ ಬಾಬು, ಛಾಯಾಗ್ರಾಹಕ ವಿಲಿಯಂ ಡೇವಿಡ್ ಸೇರಿದಂತೆ ಹಲವರು ಚಿತ್ರಕ್ಕೆ ಶುಭ ಹಾರೈಸಿದರು