Flirt.Film News

Sunday, October 19, 2025

 

'ಫ್ಲರ್ಟ್’ ಚಿತ್ರದ ಟ್ರೈಲರ್

 ಕಿಚ್ಚ ಸುದೀಪ್ ಬಿಡುಗಡೆ

 

 ನಟ ಚಂದನ್ ಕುಮಾರ್

ಪ್ರಥಮ ನಿರ್ದೇಶನದ ಚಿತ್ರ

 

   ಕನ್ನಡದ ಸುರಧ್ರೂಪಿ ನಟ ಚಂದನ್ ಕುಮಾರ್ ಫ್ಲರ್ಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋ ಜತೆಗೆ ಚಿತ್ರದ ನಾಯಕನಾಗೂ ನಟಿಸಿದ್ದಾರೆ. ಎವರೆಸ್ಟ್ ಪಿಕ್ಚರ್ಸ್ ಮೂಲಕ ನಿರ್ಮಾಣ ಸಹ ಮಾಡಿದ್ದಾರೆ.  ಎ ಪ್ಯೂರ್ ಡವ್ ಸ್ಟೋರಿ ಎಂಬ ಅಡಿಬರಹ ಫ್ಲರ್ಟ್ ಚಿತ್ರಕ್ಕಿದ್ದು, ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ  ನಾಯಕಿಯರಾಗಿ ನಟಿಸಿದ್ದಾರೆ.

    ಈಗಾಗಲೇ ಬಿಡುಗಡೆಗೆ ಸಿದ್ದವಾಗಿರುವ  ಈ ಚಿತ್ರದ ನೀ ನನ್ನ ಜೀವ ಎಂಬ ಫ್ರೆಂಡ್ ಶಿಪ್ ಹಾಡನ್ನು ಇತ್ತೀಚೆಗೆ ರಿಲೀಸ್ ಮಾಡೋ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು. ಚಂದನ್ ಆಪ್ತರಾದ ಕಿಚ್ಚ ಸುದೀಪ್ ಆ ಹಾಡಿಗೆ  ದನಿಯಾಗಿದ್ದರು.

ನವೆಂಬರ್ 7 ರಂದು ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ  ಮಾಲ್ ಆಫ್ ಏಷ್ಯಾದಲ್ಲಿ ನಡೆಯಿತು.  ಮುಖ್ಯ ಅತಿಥಿಯಾಗಿ ಆಗಮಿಸಿದ ಕಿಚ್ಚ ಸುದೀಪ್ ಟ್ರೈಲರನ್ನು  ಬಿಡುಗಡೆ ಮಾಡಿದರು.  

ಈ ಸಂದರ್ಭದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ  ಚಂದನ್,  ಈ ಸಿನಿಮಾ  ಆರಂಭದಿಂದಲೂ ಸುದೀಪ್ ಅವರು ನನಗೆ ತುಂಬಾ ಸಪೋರ್ಟ್ ಮಾಡುತ್ತ ಬಂದಿದ್ದಾರೆ. ಅಕ್ಟೋಬರ್ 25ಕ್ಕೆ ಬಿಗ್ ಬಾಸ್ ನಲ್ಲಿ ಸುದೀಪ್ ಅವರನ್ನು ನೋಡಿ 10 ವರ್ಷವಾಗುತ್ತೆ. ಸಿಸಿಎಲ್ ನಿಂದ ಹಿಡಿದು ಪ್ರೇಮಬರಹ ಚಿತ್ರಕ್ಕೆ ಅಲ್ಲದೆ ನಮ್ಮಹೋಟೆಲನ್ನು ಅವರೇ ಲಾಂಚ್ ಮಾಡಿಕೊಟ್ಟರು. ಇದೊಂದು ರೋಮ್ ಕಾಮ್ ಸಿನಿಮಾ ಆದರೂ ಫ್ರೆಂಡ್ ಶಿಪ್, ಲವ್, ಹೀಗೆ ಎಲ್ಲಾ ಎಂಟರ್ ಟೈನಿಂಗ್ ಎಲಿಮೆಂಟ್ಸ್ ಇದೆ.  ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ. ಎಲ್ಲರ ಡವ್ ನಲ್ಲೂ ಒಂದೊಂದು ಲವ್ ಇರುತ್ತದೆ. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ವ್ಯಾಲ್ಯೂ ಇದೆ. ಚಿತ್ರದಲ್ಲಿ  ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ.  ಚಿತ್ರಕ್ಕೆ ನನ್ನ ಭಾವ ಕೂಡ  ಫೈನಾನ್ಷಿಯಲ್ ಸಪೋರ್ಟ್ ಮಾಡಿದ್ದಾರೆ. ಹೀಗೆ ಎಲ್ಲರ ಸಹಕಾರದಿಂದ ಚಿತ್ರ ರಿಲೀಸ್ ಹಂತ ತಲುಪಿದ್ದು,ನ.4ರಂದು ರಿಲೀಸಾಗುತ್ತಿದೆ. ನಿಮ್ಮ ಸಹಕಾರ ಬೇಕು ಎಂದು ವಿನಂತಿಸಿಕೊಂಡರು.

    ಕಿಚ್ಚ ಸುದೀಪ್ ಮಾತನಾಡಿ ನಾನೂ ಸಹ ಮೊದಲ ಪ್ರಯತ್ನ ಮಾಡಿದಾಗ ಆತಂಕದಲ್ಲೇ ಇದ್ದೆ. ಚಂದನ್ ನಮ್ಮನೆ ಹುಡುಗ, ಆತ ಏನು ಮಾಡಿದರೂ ಇಷ್ಟವಾಗುತ್ತೆ. ನಾನು ನಿರ್ದೇಶನ‌ ಮಾಡ್ತಾನೆ ಅಂದಾಗ ತುಂಬಾ  ಖುಷಿಯಾಯ್ತು. ಈಗಾಗಲೇ ನಾನು ಸಿನಿಮಾನ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡುಬಂದಿದೆ. ಕಥೆಯಲ್ಲಿರುವ ಡೆಪ್ತ್ ಚೆನ್ನಾಗಿದೆ ಎಂದು ಶುಭ ಹಾರೈಸಿದರು.

     ಜಡ್ಜ್ ಪಾತ್ರ ಮಾಡಿರುವ ಹಿರಿಯನಟ ಅವಿನಾಶ್,  ನಾಯಕಿಯರಾದ ನಿಮಿಕಾ ರತ್ನಾಕರ್, ಗಿರೀಶ್ ಶಿವಣ್ಣ, ವಿನಯ್ ಗೌಡ ಇವರೆಲ್ಲ ತಮ್ಮ ಪಾತ್ರಗಳ ಬಗ್ಗೆ ವಿವರಿಸಿದರು. ಅತಿಥಿಗಳಾಗಿದ್ದ ನಿರ್ದೇಶಕ ಎ.ಪಿ. ಅರ್ಜುನ್, ನಟ ಸುನಿಲ್ ರಾವ್ ಚಂದನ್ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.

  ಸುದೀಪ್ ಅವರ ಹಾಡಿಗೆ ನಕುಲ್ ಅಭಯಂಕರ್ ಮ್ಯೂಸಿಕ್ ಮಾಡಿದ್ದು, ಜಸ್ಸಿ ಗಿಫ್ಟ್  ಉಳಿದ 3  ಹಾಡುಗಳ ಜತೆಗೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಹೆಚ್.ಸಿ. ವೇಣು ಅವ ಛಾಯಾಗ್ರಹಣ ಚಿತ್ರಕ್ಕಿದ್ದು. ಹಿರಿಯ ನಟಿ ಶೃತಿ, ಸಾಧು ಕೋಕಿಲ  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,