Fraud Rushi.Film News

Monday, October 13, 2025

 

*"ಫ್ರಾಡ್‍ ಋಷಿ" ಚಿತ್ರದ ಮೂರನೇ ಹಾಡು ಬಿಡುಗಡೆ ಮಾಡಿದ ನಮ್ ಋಷಿ* .

 

 *ಹಾಡು ಬಿಡುಗಡೆ ಮಾಡಿ ಹಾರೈಸಿದ ಡಾ||ವಿ.ನಾಗೇಂದ್ರಪ್ರಸಾದ್* .

 

 "ಒಳಿತು ಮಾಡು ಮನುಸ" ಹಾಡಿನ ಖ್ಯಾತಿಯ ನಮ್ ಋಷಿ, ನಿರ್ಮಾಣ, ನಿರ್ದೇಶನ ಹಾಗೂ ನಟನೆ "ಫ್ರಾಡ್ ಋಷಿ" ಚಿತ್ರದ ಮೂರನೇ ಹಾಡು "ನೀ ಹೆಜ್ಜೆ ಇಟ್ಟ ಕಡೆಯಲ್ಲೆಲ್ಲ ಗೆಜ್ಜೆನಾದ" ಎಂಬ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಡಾ||ವಿ.ನಾಗೇಂದ್ರಪ್ರಸಾದ್ ಅವರು ನಮ್ ಋಷಿ ಬರೆದಿರುವ ರಾಜೇಶ್ ಕೃಷ್ಣನ್ ಹಾಡಿರುವ ಈ ಹಾಡನ್ನು ಬಿಡುಗಡೆ ಮಾಡಿದರು. ಹಾಡು ಬಿಡುಗಡೆ ನಂತರ ಅತಿಥಿಗಳು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ನಾನು ಹಲವು ವರ್ಷಗಳಿಂದ ಋಷಿ ಅವರನ್ನು ಬಲ್ಲೆ. ಅವರ "ಒಳಿತು ಮಾಡು ಮನುಸ" ಹಾಡು ಯಾವ ರೀತಿ ಸೂಪರ್ ಹಿಟ್ ಆಗಿದೆ ಎಂದು ಎಲ್ಲರಿಗೂ ತಿಳಿದ ಸಂಗತಿ. ನಾನು ಕೂಡ ಆ ಹಾಡಿಗೆ ಅಭಿಮಾನಿ. ಗೀತರಚನೆಕಾರ ಋಷಿ ಈಗ ನಾಯಕನಾಗಿದ್ದಾರೆ. ಅವರ ಹೊಸ ಚಿತ್ರಕ್ಕೆ ನನ್ನ ಶುಭ ಹಾರೈಕೆಗಳು ಎಂದರು ಡಾ||ವಿ.ನಾಗೇಂದ್ರಪ್ರಸಾದ್.

ಗುರು ಸಮಾನರಾದ ನಾಗೇಂದ್ರಪ್ರಸಾದ್ ಅವರ ಹಾಡುಗಳಿಗೆ ನಾನು ಅಭಿಮಾನಿ ಎಂದು ಮಾತನಾಡಿದ ನಮ್ ಋಷಿ, ನನ್ನ ಹಾಡನ್ನು ನಾಗೇಂದ್ರಪ್ರಸಾದ್ ಅವರ ಹತ್ತಿರ ಬಿಡುಗಡೆ ಮಾಡಿಸಬೇಕೆಂಬ ಆಸೆಯಿತ್ತು. ಅದು ಇಂದು ಈಡೇರಿದೆ. ಇಂದು ನಮ್ಮ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ನಾನೇ ಬರೆದಿರುವ ಈ ಹಾಡನ್ನು ಜನಪ್ರಿಯ ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ನಮ್ಮ ಚಿತ್ರದಲ್ಲಿ ಐದು ಹಾಡುಗಳಿದೆ. ಈಗಾಗಲೇ ಮೂರು ಹಾಡುಗಳು ಬಿಡುಗಡೆಯಾಗಿದೆ. ಮೆಚ್ಚುಗೆಯನ್ನು ಪಡೆದುಕೊಂಡಿದೆ.  ಚಿತ್ರೀಕರಣಕ್ಕೂ ಮೊದಲು ಹಾಡುಗಳನ್ನು ಜನರಿಗೆ ತಲುಪಿಸಬೇಕೆಂಬ ಉದ್ದೇಶ ನನ್ನದು. ಅದರಂತೆ ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಈ ತಿಂಗಳ ಕೊನೆಗೆ ಶೂಟಿಂಗ್ ಶುರುವಾಗಲಿದೆ. ನಾನು ಸೇರಿದಂತೆ ಅನೇಕ ಸ್ನೇಹಿತರು ಸೇರಿ ನಮ್ ಋಷಿ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣ‌ ಮಾಡುತ್ತಿದ್ದೇವೆ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಕೊನೆಗೆ ಉತ್ತಮ ಸಂದೇಶ ಕೂಡ ಇದೆ ಎಂದರು.

 

ನಿರ್ಮಾಪಕರಾದ ಸೋಮಶೇಖರ್,  ಮಂಜು ಭದ್ರಾವತಿ, ಹರಿಕೃಷ್ಣ ಬಿ, ಮಧು ಬಿ, ಲೋಕಿ ಹಾಗೂ ನಾಯಕಿಯರಾದ ಚೈತ್ರ, ಸ್ವಾತಿ, ರಾಜೇಶ್ವರಿ, ಚೈತ್ರಾರಾಮ್ ಮುಂತಾದವರು "ಫ್ರಾಡ್ ಋಷಿ" ಚಿತ್ರದ ಕುರಿತು ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,