Dilmaar.Film News

Thursday, October 09, 2025

 

*'ದಿಲ್ಮಾರ್’ ಟ್ರೇಲರ್ ರಿಲೀಸ್..ಹೊಸಬರಿಗೆ ಧ್ರುವ ಸರ್ಜಾ ಸಾಥ್*

 

 

*ಕೆಜಿಎಫ್ ಡೈಲಾಗ್ ರೈಟರ್ ಚಂದ್ರಮೌಳಿ ಹೊಸ ಕನಸು ’ದಿಲ್ಮಾರ್’ ಗೆ ಧ್ರುವ ಸರ್ಜಾ ಬೆಂಬಲ*

 

*ದಿಲ್ಮಾರ್ ಟ್ರೇಲರ್ ರಿಲೀಸ್ ಮಾಡಿದ ಧ್ರುವ ಸರ್ಜಾ..ಇದೇ ತಿಂಗಳ 24ಕ್ಕೆ ಸಿನಿಮಾ ತೆರೆಗೆ ಎಂಟ್ರಿ*

 

 

’ಕೆಜಿಎಫ್’ ಸಿನಿಮಾದಲ್ಲಿ ಡೈಲಾಗ್‌ಗಳಿಂದಲೇ ಜಾದು ಮಾಡಿದ್ದ ರೈಟರ್ ಚಂದ್ರಮೌಳಿ ದಿಲ್ಮಾರ್ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಅವರ ಮೊದಲ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 24ಕ್ಕೆ ದಿಲ್ಮಾರ್ ತೆರೆಗೆ ಎಂಟ್ರಿ ಕೊಡುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಿಲ್ಮಾರ್ ಟ್ರೇಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

 

 

ನಟ ಧ್ರುವ ಸರ್ಜಾ ಮಾತನಾಡಿ, ದಿಲ್ಮಾರ್ ಚಿತ್ರದ ಮೊದಲ ಹೀರೋ ಡೈರೆಕ್ಟರ್ ಚಂದ್ರಮೌಳಿ ಅವರು. ಇವರು ದೊಡ್ಡ ದೊಡ್ಡ ಚಿತ್ರಗಳಿಗೆ ಡೈಲಾಗ್ ಬರೆದಿದ್ದಾರೆ. ಒಂದು ವಿಷನ್ ಇರುವ ರೈಟರ್ ಈಗ ಡೈರೆಕ್ಟರ್ ಆಗಿದ್ದಾರೆ. ಡೈರೆಕ್ಟರ್ ಗೆ ರೈಟಿಂಗ್ ಇದ್ದರೆ ಅವರು ವಂಡರ್ ಕ್ರಿಯೇಟ್ ಮಾಡುತ್ತಾರೆ. ಇವರು ಪ್ರಾಮಿಸಿಂಗ್ ಡೈರೆಕ್ಟರ್ ಆಗುತ್ತಾರೆ. ಟ್ರೇಲರ್ ನೋಡಿದ ತಕ್ಷಣ ನನಗೆ  ಸಿನಿಮಾ ನೋಡಬೇಕು ಎನಿಸಿತು. ಆದಿತಿ‌ ಮೇಡಂ ಹಾಗೂ ಡಿಂಪಲ್ ಹಯಾತಿ ಅವರು ಚೆನ್ನಾಗಿ ಕಾಣಿಸುತ್ತಿದ್ದಾರೆ. ನಾನು ಟ್ರೇಲರ್ ಲಾಂಚ್ ಗೆ ಬರಲು ಕಾರಣ ನನ್ನ ಗೆಳೆಯ ರಾಮ್ ಗೌಡ್ರು. ಅವರದ್ದು ಒಂದು ದೊಡ್ಡ ಜರ್ನಿ ಇದೆ. ಒಳ್ಳೆ ವ್ಯಕ್ತಿತ್ವ ಇರುವ ವ್ಯಕ್ತಿಗೆ ಕನ್ನಡಿಗರು ಕೈ ಹಿಡಿಯುತ್ತಾರೆ. ಅಕ್ಟೋಬರ್ 24ರಂದು ಎಲ್ಲಾ ಕನ್ನಡಿಗರು ಈ ಚಿತ್ರ ನೋಡಿ ಹೊಸಬರಿಗೆ ಸಪೋರ್ಟ್ ಕೊಡಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

 

ಚಿತ್ರದ ನಾಯಕ ರಾಮ್ ಮಾತನಾಡಿ, ಧ್ರುವ ಸರ್ ನಮ್ಮ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಅವರಿಗೆ ತಮ್ಮ ತಂಡದ ಕಡೆಯಿಂದ ಧನ್ಯವಾದ. 2006ರಿಂದ ಇಂಡಸ್ಟ್ರಿಯಲ್ಲಿ ಇದ್ದೇನೆ. ಹೀರೋ ಆಗಬೇಕು ಎಂದು ಹಳ್ಳಿಯಿಂದ ಕನಸು ಕಟ್ಟಿಕೊಂಡು ಬಂದಿದ್ದೆ. ಆ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿದೆ. ನಾನು ಅಂದಕಂಡ ಗುರಿ ತಲುಪಿದ್ದೇನೆ ಎಂಬ ಖುಷಿ ಇದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾವು ಯಾರೂ ಎಂದು ಗೊತ್ತಿಲ್ಲದೇ ನಮ್ಮ‌ ಪ್ರೊಡ್ಯೂಸರ್ ನಮ್ಮ ಚಿತ್ರಕ್ಕೆ ಹಣ ಹಾಕಿದ್ದಾರೆ. ಇದೇ‌‌ ತಿಂಗಳ 24ಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.

 

 

’ದಿಲ್ಮಾರ್’ ಸಿನಿಮಾ ನಾಯಕನಾಗಿ ಹೊಸ ಪ್ರತಿಭೆ ರಾಮ್ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಖಳನಾಯಕನಾಗಿ ಡೈಲಾಗ್ ಕಿಂಗ್ ಸಾಯಿ ಕುಮಾರ್ ಟಕ್ಕರ್ ಕೊಡುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ತೆಲುಗಿನ ನಟಿ ಡಿಂಪಲ್ ಹಯಾತಿ ಹಾಗೂ ಆದಿತಿ ಪ್ರಭುದೇವ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಅಶೋಕ್ ಅವರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ.

 

 

ಅರ್ಜುನ್ ರೆಡ್ಡಿ ಖ್ಯಾತಿಯ ರಾದನ್ ಸಿನಿಮಾಕ್ಕೆ ಸಂಗೀತ ನೀಡಿದ್ದು, ತನ್ವಿಕ್ ಅವರ ಛಾಯಾಗ್ರಹಣ, ಶಶಾಂಕ್ ಮುರುಳಿಧರನ್ ಸಂಕಲನ ಚಿತ್ರಕ್ಕಿದೆ. ಕೆ ಮಹೇಶ್ ಮತ್ತು ನಾಗರಾಜ್ ಭದ್ರಾವತಿ ನಿರ್ಮಾಣ ಮಾಡಿದ್ದಾರೆ.

 

 

*ಹೇಗಿದೆ  ಟ್ರೇಲರ್*?

 

ದಿಲ್ಮಾರ್ ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಪ್ರೀತಿ-ದ್ವೇಷ, ಆಕ್ಷನ್-ಎಮೋಷನ್ ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಲವ್‌ ಸ್ಟೋರಿಯಾದರೂ ಮಾಸ್‌ ಎಲಿಮೆಂಟ್ಸ್‌ ಮಿಕ್ಸ್ ಮಾಡಿ ಕಥೆಯನ್ನು ಸೊಗಸಾಗಿ ಚಂದ್ರಮೌಳಿ ಕಟ್ಟಿಕೊಟ್ಟಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,