*"31 DAYS" ಚಿತ್ರದ ಗೆಲುವು. ಇದೇ ಸಂದರ್ಭದಲ್ಲಿ N- STAR ENTERPRISES ನ ಮುಂದಿನ ಚಿತ್ರಗಳ ಬಗ್ಗೆ ಮಾಹಿತಿ ನೀಡಿದ ನಿರಂಜನ್ ಶೆಟ್ಟಿ** .
"ಜಾಲಿಡೇಸ್" ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ, ರಾಜ ರವಿಕುಮಾರ್ ನಿರ್ದೇಶಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ "31 DAYS" ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ "31 DAYS" ಚಿತ್ರ ಸೆಪ್ಟೆಂಬರ್ 5 ರಂದು ಬಿಡುಗಡೆಯಾಯಿತು. ಇದು ನನ್ನ ಅಭಿನಯದ 8ನೇ ಚಿತ್ರ. ನಮ್ಮ ನಿರೀಕ್ಷೆಗೂ ಮೀರಿ ಜನ ನಮ್ಮ ಚಿತ್ರವನ್ನು ಒಪ್ಪಿಕೊಂಡಿರುವುದಕ್ಕೆ ಬಹಳ ಖುಷಿಯಾಗಿದೆ. ಅದರಲ್ಲೂ ಇತ್ತೀಚೆಗೆ ನಮ್ಮ ಸಿನಿಮಾ ನೋಡಿದ ಪ್ರೇಕ್ಷಕರೊಬ್ಬರು ನನ್ನನ್ನು ಭೇಟಿಯಾಗಿ ಕೇವಲ ಎರಡು ಪ್ರಮುಖಪಾತ್ರಗಳನ್ನಿಟ್ಟುಕೊಂಡು ಎರಡು ಗಂಟೆ ಸಿನಿಮಾ ಮಾಡುವುದು ಸುಲಭವಲ್ಲ. ಅಲ್ಲಿ ನೀವು ಗೆದ್ದಿದ್ದೀರಿ. "31 DAYS"ಎಲ್ಲೂ ಬೇಸರ ತರಿಸದ ಸಿನಿಮಾ ಎಂದರು. 1884 ರಲ್ಲಿ ಅಮೋಲ್ ಪಾಲೇಕರ್ ಅವರು ಅಭಿನಯಿಸಿದ್ದ " ವಸಂತ ಮಾಸ" ಎಂಬ ಸಿನಿಮಾದಲ್ಲಿ ಕೇವಲ ಎರಡೇ ಪಾತ್ರಗಳಿದ್ದವು.
ನಮ್ಮ ಚಿತ್ರಕ್ಕೆ ಆ ಚಿತ್ರವೂ ಸ್ಪೂರ್ತಿ ಎನ್ನಬಹುದು. ಪ್ರೇಕ್ಷಕರು ಹಾಗೂ ಚಿತ್ರ ಆರಂಭದ ದಿನದಿಂದಲೂ ಪತ್ರಕರ್ತರು ನೀಡುತ್ತಿರುವ ಪ್ರೋತ್ಸಾಹವೇ ಚಿತ್ರದ ಗೆಲುವಿಗೆ ಕಾರಣ. ನಾನು ಬಿಡುಗಡೆಗೆ ಪೂರ್ವದಲ್ಲೇ ಬಹುತೇಕ ಸೇಫ್ ಆಗಿದ್ದೀನಿ. ಅದಕ್ಕೆ ನಾನು ರೂಪಿಸಿದ ಹಲವು ಯೋಜನೆಗಳೆ ಕಾರಣ. ಇನ್ನೂ ಈ ಚಿತ್ರದ ವಿತರಕರಾದ ಪ್ರಶಾಂತ್ ಹಾಗೂ ಬಾಬಣ್ಣ ಅವರ ಸಹಕಾರದಿಂದ ಈ ವಾರ ಚಿತ್ರಮಂದಿರಗಳ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ನಾನು ಮತ್ತೊಂದು ವಿಷಯ ಹಂಚಿಕೊಳ್ಳುತ್ತಿದ್ದೇನೆ. ನಾವು ಸೀಮಿತ ಬಜೆಟ್ ನ ಮೂರು ಸಿನಿಮಾಗಳನ್ನು N -STAR ENTERPRISES ಲಾಂಛನದಲ್ಲೇ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಕಥೆ ಸಿದ್ದವಾಗಿದೆ. ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ನಾಯಕ ನಿರಂಜನ್ ಶೆಟ್ಟಿ ತಿಳಿಸಿದರು. ವಿಶೇಷವಾಗಿ ತಮ್ಮ ಎಲ್ಲಾ ಕಾರ್ಯಗಳಿಗೂ ಜೊತೆಯಾಗಿ ನಿಂತಿರುವ ಪತ್ನಿ, ನಿರ್ಮಾಪಕಿ ನಾಗವೇಣಿ ಎನ್ ಶೆಟ್ಟಿ ಅವರಿಗೂ ನಿರಂಜನ್ ಶೆಟ್ಟಿ ಧನ್ಯವಾದ ಹೇಳಿದರು.
ಚಿತ್ರದ ನಿರ್ದೇಶಕ ರಾಜ ರವಿಶಂಕರ್, ನಾಯಕಿ ಪ್ರಜ್ವಲಿ ಸುವರ್ಣ, ನಿರ್ಮಾಪಕಿ ನಾಗವೇಣಿ ಎನ್ ಶೆಟ್ಟಿ, ನಟ ಚಿಲ್ಲರ್ ಮಂಜು ಹಾಗೂ ವಿತರಕರಾದ ಪ್ರಶಾಂತ್ ಹಾಗೂ ಬಾಬಣ್ಣ ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.