Koragajja.News

Monday, November 24, 2025

 

*"ಕೊರಗಜ್ಜ" ಚಿತ್ರದ ಗುಳಿಗಾ...ಗುಳಿಗಾ...ಹಾಡಿನಿಂದ ’ಗುಳಿಗ ದೈವ’ಕ್ಕೆ ಸಂತೋಷ-ಪ್ರಶ್ನೆ ಇಟ್ಟಾಗ ಜ್ಯೋತಿಷ್ಯದಲ್ಲಿ ಕಂಡು ಬಂದ ಸತ್ಯ*

 

ಇತ್ತೀಚೆಗೆ ಜೀ಼ ಮ್ಯೂಜಿಕ್ ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ಬಿಡುಗಡೆ ಗೊಳಿಸಿದ "ಕೊರಗಜ್ಜ" ಚಿತ್ರದ, ಜಾವೆದ್ ಆಲಿ ಮತ್ತು ಸುಧೀರ್ ಅತ್ತಾವರ್ ಹಾಡಿರುವ,ಗೋಪಿ ಸುಂದರ್ ಸಂಗೀತ ಮತ್ತು ಸುಧೀರ್ ಅತ್ತಾವರ್ ಸಾಹಿತ್ಯದ  ಗುಳಿಗಾ...ಗುಳಿಗಾ...ಹಾಡಿನ ಅಬ್ಬರ ದೇಶದೆಲ್ಲೆಡೆ  ಹಬ್ಬಿ ಹವಾ ಎಬ್ಬಿಸುತ್ತಿರುವಂತೆಯೇ, ಭಯಂಕರ ಉಗ್ರ ರೂಪದ ಕಾರಣಿಕದ "ಗುಳಿಗದೈವ"  ಈ ಹಾಡಿನಿಂದ ಕ್ರೋಧ ಗೊಂಡಿರಬಹುದೇ ಅಥವ ದೈವಕ್ಕೆ ಅಪಚಾರಾಗಿರಬಹುದೇ ಎಂಬ  ಎಂಬ ಸಂಶಯದಿಂದ ಇಂದು ನಿರ್ದೇಶಕ ಸುಧೀರ್ ಅತ್ತಾವರ್ ರವರು ಕೇರಳದ ತ್ರಿಶೂರ್ ನಲ್ಲಿರುವ ಮಂಗಳೂರು ಮೂಲದ ಪ್ರಸಿದ್ಧ ಜ್ಯೋತಿಷ್ಯ ವಿಧ್ವಾನ್  ವರುಣ್ ಭಟ್ ರವರಲ್ಲಿ ಪ್ರಶ್ನೆ ಇಟ್ಟು ಕೇಳಿದಾಗ: ಚಿಂತನ-ಮಂತನ ನಡೆಸಿ ;ವ್ರಶ್ಚಿಕ ರಾಶಿ,ಒಂಭತ್ತರಲ್ಲಿ ಗುರು, ಐದರಲ್ಲಿ ಗುಳಿಗ, ಶನಿ ಎಲ್ಲಾ ಇರುವುದರಿಂದ...ಗುಳಿಗನಿಗೆ  ಸಂಪೂರ್ಣ ತ್ರಪ್ತಿ, ಸಂತೋಷ ಎಲ್ಲಾ ಇದೆ.ಕೊರಗಜ್ಜನಿಗೂ ಸಂತೋಷವಿದೆ, ದೇವರ ಆಶಿರ್ವಾದವೂ ಇದೆ ಎಂಬ ವಿಚಾರ ತಿಳಿದು ಬಂತು.

ಗುಳಿಗಾ ..ಗುಳಿಗಾ ಹಾಡಿನ ಬಗ್ಗೆ

 ಸೋಷಿಯಲ್ ಮೇಡಿಯಾದಲ್ಲಿ ಪರ-ವಿರೋಧ ಚರ್ಚೆಕೂಡಾ ಜೋರಾಗಿ ಸಾಗುತ್ತಿದೆ. ಇನ್ನು ಕೆಲವು ವಿಕ್ರತ ಮನಸ್ಥಿತಿಯವರಂತೂ ನಿರ್ದೇಶಕರಿಗೆ ಸೇರಿ ಚಿತ್ರತಂಡಕ್ಕೆ ಉರಿ ಶಾಪಹಾಕುವ ಕಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ.ಅಲ್ಲದೆ ಗುಳಿಗ ದೈವವೇ ರಕ್ತ ಕಾರಿ ಸಾಯಿಸುತ್ತದೆ ಎಂಬಿತ್ಯಾದಿ ವಿಕ್ರತ ಮನಸ್ಸಿನಿಂದ, ಮತ್ಸರದಿಂದ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.

 

ಪ್ರಶ್ನೆಯ ಮೂಲಕ ಜ್ಯೋತಿಷ್ಯ ದಲ್ಲಿ‌ ಗುಳಿಗನಿಗೆ ತ್ರಪ್ತಿ ಇರುವ ವಿಚಾರ ಕೇಳಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ಸಕ್ಸಸ್ ಫಿಲ್ಮ್ಸ್ ನ ವಿದ್ಯಾಧರ್ ಶೆಟ್ಟಿ ಹರ್ಷಗೊಂಡಿದ್ದಾರೆ.

ಜನರು ಅನಗತ್ಯವಾದ ಕೆಟ್ಟ ಕಮೆಂಟ್ ಹಾಕಿ ಕಿರಿ ಕಿರಿ ಮಾಡದೆ, ಚಿತ್ರದ ಯಶಸ್ಸಿಗೆ ಸಹಕರಿಸಬೇಕೆಂದು ಕೂಡಾ ನಿರ್ಮಾಪಕರು ಮನವಿ ಮಾಡಿರುತ್ತಾರೆ.

 

ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯ , ಬಹುನಿರೀಕ್ಷಿತ ಪ್ಯಾನ್ ಇಂಡಿಯಾ

"ಕೊರಗಜ್ಜ" ಚಿತ್ರ ಜನವರಿ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಪ್ರಮೋಷನ್ ಕೆಲಸ ಭರದಿಂದ ಸಾಗುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,