February 30.Film News

Monday, November 17, 2025

 

ಸೈಕಲಾಜಿಕಲ್ ಥ್ರಿಲ್ಲರ್  "ಫೆಬ್ರವರಿ 30" ಚಿತ್ರದ ಟೀಸರ್ ಬಿಡುಗಡೆ

 

    ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ "ಫೆಬ್ರವರಿ 30". ಮೈಸೂರು ಮೂಲದ  ಪ್ರಶಾಂತ್ ಎಂ.ಎಲ್.ಅವರ ನಿರ್ದೇಶನದ ಈ ಚಿತ್ರಕ್ಕೆ ಶಂಕರ ಮೂವೀಸ್  ಇಂಟರ್ ನ್ಯಾಷನಲ್ ಮೂಲಕ ಜೋಸೆಫ್ ಬೇಬಿ ಅವರು ಬಂಡವಾಳ ಹೂಡಿದ್ದಾರೆ.

 ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಅಭಿಷೇಕ್, ಸಾಹಿತ್ಯಶೆಟ್ಟಿ, ಅಕ್ಷಯ್, ಮನೋಜ್, ಶಿವಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ  ಅಭಿನಯಿಸಿದ್ದಾರೆ. ಪಿ.ಎಂ. ಉನ್ನಿಕೃಷ್ಣನ್ ಅವರ ಛಾಯಾಗ್ರಹಣ, ಲಿಜಿನ್ ಪಂಬೋ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ನಿರ್ದೇಶಕ ಪ್ರಶಾಂತ್ ಮಾತನಾಡುತ್ತ ನಾನು ಐಟಿಯಲ್ಲಿ ವರ್ಕ್ ಮಾಡುತ್ತಿದ್ದು, ಬಿಡುವಿನ ವೇಳೆ ಕಥೆ ಬರೆಯುವುದು, ಷಾರ್ಟ್ ಫಿಲಂ ಮಾಡುವುದು ನನ್ನ ಹವ್ಯಾಸ. ಅದಕ್ಕೆ ಶಿವಕುಮಾರ್ ಸಾಥ್ ಕೊಟ್ಟರು. ನಾನ್ಯಾಕೆ ಸಿನಿಮಾ ಮಾಡಬಾರದು ಎಂಬ ಆಲೋಚನೆ ಹೊಳೆದು ಸಣ್ಣಕಥೆ ಮಾಡಿಕೊಂಡೆ. ಸ್ನೇಹಿತರ ಮೂಲಕ ಈ ನಿರ್ಮಾಪಕರ ಪರಿಚಯವಾಯಿತು. ಅವರು ಕಥೆ ಕೇಳಲಿಲ್ಲ. ಸಿನಿಮಾ ಮಾಡಿ ತೋರಿಸು ಅಂದರು. ಫೆಬ್ರವರಿ 30 ಟೈಟಲ್ ಕೇಳಿದಾಗಲೇ ಒಂದು ಕುತೂಹಲ ಮೂಡುತ್ತದೆ. ಅದೇ ಕ್ಯೂರಿಯಾಸಿಟಿಯಿಂದ ಥೇಟರಿಗೆ ಬರುವ ಪ್ರೇಕ್ಷಕರಿಗೆ ಉತ್ತರದ ಜತೆ ಥ್ರಿಲ್ಲಿಂಗ್ ಅನುಭವ ಸಿಗುತ್ತದೆ. "ಫೆಬ್ರವರಿ 30"

ಎಂಬ ದಿನಾಂಕ ನಮ್ಮ ಲೈಫಲ್ಲಿ ಬರುತ್ತೆ ಅಂತ ಯಾರೂ ಊಹಿಸಿರಲ್ಲ. ನಮ್ಮಲ್ಲಿರುವ ಅರಿಷಡ್ವರ್ಗಗಳೇ ಹೇಗೆ ನಮಗೆ ವಿಲನ್ ಆಗುತ್ತವೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ.

   ಐದು ಜನ ಸ್ನೇಹಿತರು ಒಂದು ಅಪರಿಚಿತ ಸ್ಥಳಕ್ಕೆ ಹೋದಾಗ ಅಲ್ಲಿ ಅವರಿಗೆ ಏನೆಲ್ಲ ಅನುಭವಗಳಾಗುತ್ತವೆ, ಒಂದು ಅಮಾನುಷ ಶಕ್ತಿಯ ವಿರುದ್ದ ಹೇಗೆಲ್ಲಾ ಹೋರಾಡುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಟ್ರೈ ಮಾಡಿದ್ದೇವೆ. ಕೇರಳದ ಅಮ್ಮಚ್ಚಿ ಕೊಟ್ಟಲ್ ಎಂಬಲ್ಲಿ  14 ದಿನ ಹಾಗೂ ಮೈಸೂರಿನಲ್ಲಿ 3 ದಿನ ಸೇರಿ 17. ದಿನಗಳ ಕಾಲ ದಿನದ 24 ಗಂಟೆಯೂ "ಫೆಬ್ರವರಿ 30" ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಮೈಸೂರಿನಲ್ಲಿ ಶುರುವಾಗೋ ಕಥೆ ಅಲ್ಲೇ ಎಂಡ್ ಆಗುತ್ತದೆ. ಚಿತ್ರವೀಗ ಬಿಡುಗಡೆಗೆ ಸಿದ್ದವಿದ್ದು ಮುಂದಿನ ತಿಂಗಳು ರಿಲೀಸ್ ಮಾಡೋ ಪ್ಲಾನಿದೆ ಎಂದರು. ನಾಯಕರಲ್ಲೊಬ್ಬರಾದ ಅಭಿಷೇಕ್ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮತ್ತೊಬ್ಬ ನಟ ಅಕ್ಷಯ್ ಮಾತನಾಡುತ್ತ ಶಿವಕುಮಾರ್ ನನಗೆ ಈ ಕಥೆ ಹೇಳಿದಾಗ ತುಂಬಾ ಇಂಟರೆಸ್ಟಿಂಗ್ ಅನಿಸಿತು. ಇಡುಕ್ಕಿನಲ್ಲಿರೋ  ವ್ಯಾಗುಮಾನ್ ಎಂಬ ಅದ್ಭುತ ಲೊಕೋಶನ್ ಅದು. ಹಿಂದೆ ಪಾಠಶಾಲಾ ಚಿತ್ರದಲ್ಲಿ ನಟಿಸಿದ್ದೆ. ಇದು ಎರಡನೇ ಚಿತ್ರ ಎಂದರು.

     ನಾಯಕಿ ಸಾಹಿತ್ಯಶೆಟ್ಟಿ ಮಾತನಾಡಿ ಇದು ನನ್ನ ಮೊದಲ ಚಿತ್ರ. ಅಭಿಷೇಕ್ ಜತೆ ನನ್ನ ಪಾತ್ರ ಬರುತ್ತದೆ ಎಂದರು.

   ನಟ ಮನೋಜ್ ಮಾತನಾಡಿ ರಂಗಭೂಮಿ ಹಿನ್ನೆಲೆಯಿಂದ ಬಂದವನು. ನಟನಾದಲ್ಲಿ ಕಲಿತೆ. ಇದು ಅರಿಷಡ್ವರ್ಗಗಳ ಕಥೆ. ನಿರ್ಮಾಪಕರು ತುಂಬಾ ಪ್ಯಾಷನ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಎಂದರು.

 ಛಾಯಾಗ್ರಾಹಕ ಉನ್ನಿಕೃಷ್ಣನ್ ಮಾತನಾಡಿ ರಾತ್ರಿ ವೇಳೆಯಲ್ಲೇ ಹೆಚ್ಚು ಶೂಟ್ ಮಾಡಿದ್ದೇವೆ ಎಂದರೆ ಸಂಗೀತ ನಿರ್ದೇಶಕ ಲಿಜಿನ್ ಬಾಂಬಿನೋ ಮಾತನಾಡಿ ಚಿತ್ರದಲ್ಲಿ ಒಂದೇ ಹಾಡಿದ್ದು, ವಾಸುಕಿ ವೈಭವ್ ದನಿಯಾಗಿದ್ದಾರೆ.  ಅಲ್ಕದೆ ಥೀಮ್ ಮ್ಯೂಸಿಕ್  ಮಾಡಿದ್ದೇವೆ ಎಂದರು.

ಚಿತ್ರದ ಸಹ ನಿರ್ದೇಶಕ ಹಾಗೂ ನಟ ಶಿವಕುಮಾರ್ ಶಿವಣ್ಣ ಮಾತನಾಡಿ  ಪ್ರಶಾಂತ್ ನನಗೆ  17ವರ್ಷದ ಸ್ನೇಹಿತ. ಒಂದೇ ಕಂಪನಿಯಲ್ಲಿದ್ದವರು. ನಾನೂ ಒಂದು ಪಾತ್ರ ಮಾಡಿದ್ದೇನೆ ಎಂದರು.  ತಾಂಡವ ರಾಮ್, ಛಾಯಾಶ್ರೀ, ಪ್ರಜ್ವಲ್, ಡಾ.ಜಗದೀಶ್ ಮೈಸೂರು ಹಾಗೂ ಇತರರು

"ಫೆಬ್ರವರಿ 30" ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,