Ekka.Film News

Sunday, November 16, 2025

 

*ಸನ್‌NXT ದಲ್ಲಿ ’ಎಕ್ಕ’ ಸ್ಟ್ರೀಮಿಂಗ್ ಆಗುತ್ತಿದೆ*

 

        ಜುಲೈ ತಿಂಗಳಲ್ಲಿ ತೆರೆ ಕಂಡಿದ್ದ *ಎಕ್ಕ* ಚಿತ್ರದಲ್ಲಿ ಯುವರಾಜ್‌ಕುಮಾರ್, ಸಂಜನಾ ಆನಂದ್, ಸಂಪದ ಹುಲಿವಾನ, ಅತುಲ್ ಕುಲಕರ್ಣೀ ಅಭಿನಯಿಸಿದ್ದು ಹಿಟ್ ಆಗಿತ್ತು. ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಫಿಲಂಸ್ ಮತ್ತು ಪಿಆರ್‌ಕೆ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದು, ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದರು. ಅದರಲ್ಲೂ ಚರಣ್‌ರಾಜ್ ಸಂಗೀತ ಸಂಯೋಜನೆಯಲ್ಲಿ ’ಬ್ಯಾಂಗಲ್ ಬಂಗಾರಿ’ ಹಾಡು ವೈರಲ್ ಆಗಿ ಸದ್ದು ಮಾಡಿತ್ತು. ಈಗ ಸಿನಿಮಾ ನೋಡದೆ ಇರುವವರಿಗೆ ಸುವರ್ಣಾವಕಾಶ ಸಿಕ್ಕಿದೆ. ದಕ್ಷಿಣ ಭಾರತದ ಪ್ರಮುಖ OTT ಪ್ಲಾಟ್‌ಫಾರ್ಮ್ ಆಗಿರುವ ಸನ್‌NXTದಲ್ಲಿ ’ಎಕ್ಕ’ ಸಿನಿಮಾವು ನವೆಂಬರ್ 13ರಿಂದ ಡಿಜಿಟಲ್ ಪ್ಲಾಟ್‌ಫಾರ್ಮ್‌ದಲ್ಲಿ ಪ್ರದರ್ಶನಗೊಂಡು, ನಂ.1 ಟ್ರೆಂಡಿಂಗ್ ಶೀರ್ಷಿಕೆಯಾಗಿ ವೇಗವಾಗಿ ಹೋಗುತ್ತಿದೆ.

      ಆಕ್ಷನ್ ಪ್ಯಾಕಡ್ ಕಥೆ ಹೊಂದಿದ್ದು, ಯುವರಾಜ್‌ಕುಮಾರ್ ಅವರಿಗೆ ಹೆಸರು ತಂದುಕೊಟ್ಟಿತ್ತು. ಸನ್‌NXTದಲ್ಲಿ ಕನ್ನಡ ಅಲ್ಲದೆ ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಕೃಷ್ಣಂ ಪ್ರಣಯ ಸಖಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೂಡು, ಅಂಜನಿಪುತ್ರ, ಟಗರು ಇನ್ನು ಮುಂತಾದ ಯಶಸ್ವಿ ಚಿತ್ರಗಳನ್ನು ವೀಕ್ಷಕರಿಗೆ ತೋರಿಸಿದ ಕೀರ್ತಿ ಸನ್‌NXTಗೆ ಸಲ್ಲುತ್ತದೆ. 4000+ ಚಿತ್ರಗಳು, 44+ ಲೈವ್ ಚಾನೆಲ್‌ಗಳು, ಟಿವಿ ಕಾರ್ಯಕ್ರಮಗಳು ಮತ್ತು ಪ್ರಯಾಣದಲ್ಲಿರುವಾಗ ಹೆಚ್ಚಿನ ಮನರಂಜನೆ ಸಿನಿಪ್ರಿಯರಿಗೆ ನೀಡುತ್ತಾ ಬಂದಿದೆ. ಸದ್ಯ ’ಎಕ್ಕ’ ಸಿನಿಮಾವು ಸ್ರ್ಟೀಮಿಂಗ್ ಆಗುತ್ತಿರುವುದು ಸಂಸ್ಥೆಗೆ ಸಂತಸ ತಂದಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,