*ವಿಭಿನ್ನ ಶೀರ್ಷಿಕೆ ರುಧ*
ಮಹಿಳಾ ಪ್ರಧಾನ *ರುಧ* ಸಿನಿಮಾದ ಮುಹೂರ್ತ ಸಮಾರಂಭವು ಸಂಜಯ್‌ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ ನಡೆಯಿತು. ಪ್ರಥಮ ದೃಶ್ಯಕ್ಕೆ ನಟಿ ಅನುಪ್ರಭಾಕರ್ ಮತ್ತು ರಘುಮುಖರ್ಜಿ ಕ್ಲಾಪ್ ಮಾಡಿ ಶುಭ ಹಾರೈಸಿದರು. ಕನಕಪುರ ಮೂಲದ ಉದ್ಯಮಿ *ಪುಟ್ಟರಾಜು ಅವರು ಕೆಪಿಜಿ ವಿಷನ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ* ಹೂಡುತ್ತಿರುವುದು ಮಾಡುತ್ತಿರುವುದು ಹೊಸ ಅನುಭವ. ಹಲವು ನಿರ್ದೇಶಕ ಬಳಿ ಕೆಲಸ ಮಾಡಿ, ’ಐತಲಕ್ಕಡಿ’ ಕಂತುಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿದ್ದ *ಶರತ್ ಶಿಡ್ಲಘಟ್ಟ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ* ಮಾಡುತ್ತಿದ್ದಾರೆ.
ಪೇದೆಯಾಗಿ ವರಲಕ್ಷೀ, ಹಿನ್ನ್ನೆಲೆಯ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ಮಾನಸಗೌಡ, ಲವಲವಕೆಯ ಮಧ್ಯಮ ವರ್ಗದ ಹುಡುಗ, ಫೋಟೋ ಸ್ಟುಡಿಯೋ ಮಾಲೀಕನಾಗಿ ರಥರ್ವ್ ತಮ್ಮ ಪಾತ್ರದ ಪರಿಚಯ ಮಾಡಿಕೊಂಡರು. ಛಾಯಾಗ್ರಹಣ ರಾಜು ಹೆಮ್ಮಿಗೆಪುರ, ಸಂಕಲನ ವಿಜಯ್, ಕ್ರಿಯೇಟೀವ್ ಮುಖ್ಯಸ್ಥ ಆರ್.ವಿಜಯ್, ಕಾರ್ಯಕಾರಿ ನಿರ್ಮಾಪಕ ತಿರುಪತಿ ರೆಡ್ಡಿ ಅವರದಾಗಿದೆ. ನವೆಂಬರ್ ಕೊನೆ ವಾರದಿಂದ ಶೂಟಿಂಗ್‌ಗೆ ತೆರೆಳಲು ತಂಡವು ಸಿದ್ದತೆ ಮಾಡಿಕೊಂಡಿದೆ.
ಪೂಜೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಿರ್ದೇಶಕರು, ೨೦೧೨ರಂದು ಕೇರಳ ಪ್ರ್ಯಾಂತ್ಯದಲ್ಲಿ ನಡೆದಂತ ಸತ್ಯ ಘಟನೆಯ ಒಂದು ಎಳೆಯನ್ನು ಬಳಸಿಕೊಂಡು, ಅದಕ್ಕೆ ಸೆಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಕಾಲ್ಪನಿಕ ಚಿತ್ರರೂಪ ನೀಡಲಾಗುತ್ತಿದೆ. ಸಣ್ಣ ಸುಳಿವನ್ನು ನೀಡಿದರೂ, ಕಥೆಯ ಸಾರಾಂಶ ತಿಳಿಯುತ್ತದೆ. ಅದಕ್ಕಾಗಿ ಈಗಲೇ ಏನನ್ನು ಹೇಳಲಾಗದು. ರುಧ ಸಂಸ್ಕ್ರತ ಪದವಾಗಿದ್ದು, ನಟೋರಿಯಸ್ ಎಂಬ ಅರ್ಥ ಕೊಡುತ್ತದೆ. ಚಿತ್ರದಲ್ಲಿ ರಕ್ತದೋಕುಳಿ ಹೆಚ್ಚು ಇರುತ್ತದೆ. ಇದು ಸನ್ನಿವೇಶಗಳಿಗೆ ಪೂರಕವಾಗಿರುತ್ತದೆ. ಮೂರು ಮುಖ್ಯ ಪಾತ್ರಗಳನ್ನು ಹೊರತುಪಡಿಸಿ, ಮಿಕ್ಕಂತೆ ಅನುಭವಿ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರಮೋದ್ ಮರವಂತೆ ಸಾಹಿತ್ಯದಲ್ಲಿ ಮೂರು ಹಾಡುಗಳು ಇರಲಿದ್ದು, ಸಂಗೀತ ಸಂಯೋಜಕರು ಸದ್ಯದಲ್ಲೆ ಆಯ್ಕೆ ಯಾಗಲಿರುವರು. ಕೊಡಗು ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ರೂಪಿಸಲಾಗಿದೆ ಎಂಬುದಾಗಿ ಶರತ್ ಶಿಡ್ಲಘಟ್ಟ ಮಾಹಿತಿ ನೀಡಿದರು.