Jai.Film Event.News

Friday, November 07, 2025

 

ಬೆಂಗಳೂರಿಗೆ ಜೈ ಚಿತ್ರಕ್ಕೆ ಜೈ ಎನ್ನಲು ಬಂದ ಬಾಲಿವುಡ್ ನ ಹಿರಿಯ ನಟ ಸುನೀಲ್ ಶೆಟ್ಟಿ

 

ಜೈ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ಸುನೀಲ್ ಶೆಟ್ಟಿಗೆ ಭರ್ಜರಿ ಸ್ವಾಗತ.

 

ಬೆಂಗಳೂರಿನ ಮಂತ್ರಿ ಮಾಲ್ ಗೆ ಜೈ ಚಿತ್ರದ ಪ್ರಚಾರಕ್ಕಾಗಿ ಬಂದ ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ ಮಂಗಳೂರಿನ ಸಂಸ್ಕೃತಿಯ ಮಂಗಳ ವಾದ್ಯಗಳೊಂದಿಗೆ ಸ್ವಾಗತಿಸಿದ ಚಿತ್ರ ತಂಡ.

 

ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಗೂ ಅಭಿನಯಿಸಿರುವ ಜೈ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ ಅದರ ಪ್ರಚಾರ ಕಾರ್ಯ ಕೂಡ ಭರದಿಂದ ನಡೆಯುತ್ತಿದೆ.

 

ಕೆಲವು ದಿನಗಳ ಹಿಂದೆ ಕೆಲವು ಸೆಲೆಬ್ರಿಟಿಗಳ ಜೋಡಿಗಳನ್ನು ಕರೆಸಿ ಪ್ರೇಮ ಗೀತೆಯನ್ನು ಬಿಡುಗಡೆಗೊಳಿಸಿದ್ದರು.

 

ಹಾಗೆಯೇ ಇಂದು "ಜೈ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಮುಂಬೈನಿಂದ ಸುನೀಲ್ ಶೆಟ್ಟಿ ಬೆಂಗಳೂರಿನ ಮಂತ್ರಿಮಾಲ್ ಗೆ ಬಂದು ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಚಿತ್ರದ ಟ್ರೇಲರ್ ಬಿಡುಗಡೆಗೆ ವೇದಿಕೆ ಏರಿದ ಸುನೀಲ್ ಶೆಟ್ಟಿಗೆ ಚಿತ್ರತಂಡ ಆಯೋಜಿಸಿದಂತೆ ಅವರ ಮೇಲೆ ಪುಷ್ಪವೃಷ್ಠಿಯನ್ನು ಅವರ ಅಭಿಮಾನಿಗಳು ನೆರವೇರಿಸಿದರು.

 

 ಟ್ರೇಲರ್ ಬಿಡುಗಡೆಗೊಳಿಸುವ ಸಮಯದಲ್ಲಿ ಮಾತಾಡಿದ ಸುನೀಲ್ ಶೆಟ್ಟಿ

 ನನಗೆ ಕನ್ನಡ ಗೊತ್ತು. ಆದರೆ ಅಷ್ಟಾಗಿ ಮಾತಾಡಲು ಬರುವುದಿಲ್ಲ ಎಂದು ಹೇಳಿ ಬಹುತೇಕ ತುಳುವಿನಲ್ಲಿ ಮಾತಾಡಿದರು.

ಇದು ನನ್ನ ಒರಿಜಿನಲ್ ಕೂದಲು ವಿಗ್ ಅಲ್ಲಾ ಅಂತ ಅಭಿಮಾನಿಗಳಿಗೆ ತಮಾಷೆ ಮಾಡಿದರು.

 ಸುನೀಲ್ ಶೆಟ್ಟಿ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು.

ನಮ್ಮ ಸಂಸ್ಕೃತಿಯ ಕಾಂತಾರ ಚಿತ್ರ ವರ್ಲ್ಡ್ ವೈಡ್ ಬಿಡುಗಡೆಯಾಗಿದ್ದಕ್ಕೆ ಖುಷಿ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಡಾ,, ರಾಜಕುಮಾರ್ ಅವರಿಗೆ ತುಂಬಾ ರೆಸ್ಪೆಕ್ಟ್ ಕೊಡ್ತೀನಿ ಎಂದರು.  ಹಾಗೆಯೇ ಪುನೀತ್ ಮತ್ತು ಕಿಚ್ಚನನ್ನು ನೆನಪಿಸಿಕೊಂಡರು.

ಬೆಂಗಳೂರಿನಲ್ಲಿ ನನ್ನಕ್ಕ ಇದ್ದರು ಈಗ ಅವರಿಲ್ಲ ಈಗ ನನ್ನ ಭಾವ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದರು.

ಹಾಗೂ ತಮ್ಮ ವಯಸ್ಸಿನ ಬಗ್ಗೆ ನಿರೂಪಕಿಯ ಪ್ರೆಶ್ನೆಗೆ ನನಗೆ ಜಸ್ಟ್ 65  ವಯಸ್ಸು ಅಷ್ಟೇ.  ನನ್ನ ಸೌಂಧರ್ಯಕ್ಕೆ ಕಾರಣ ನನ್ನ ನೆಲ, ನನ್ನೂರಿನ ಮೀನು, ನನ್ನೂರಿನ ಬೋಂಡ,(ಎಳನೀರು) ನನ್ನೂರಿನ ಸಂಸ್ಕೃತಿ ಕಾರಣ ಎಂದರು.

 

ನಂತರ ಮಾತಾಡಿದ ಚಿತ್ರದ ನಟ ನಿರ್ದೇಶಕ ರೂಪೇಶ್ ಶೆಟ್ಟಿ ನಾನು ಮಾತಾಡೋಕೆ ಪ್ರಿಪೇರ್ ಆಗಿ ಬಂದಿಲ್ಲ ನಮ್ಮ ಅಣ್ಣ ಸುನೀಲ್ ಶೆಟ್ಟಿ ಯವರು ನಾನು ಕಥೆ ಹೇಳಿದ 5 ನಿಮಿಷಗಳಲ್ಲಿ ಅಭಿನಯಿಸಲು ಒಪ್ಪಿಗೆ ಕೊಟ್ಟರು, 5 ದಿನ ಕಾಲ್ ಶೀಟ್ ಕೊಟ್ಟು ಒಂದು ರೂಪಾಯಿ ಕೂಡ ಸಂಭಾವನೆ ತೆಗೆದು ಕೊಳ್ಳದೇ ಅಭಿನಯಿಸಿದ್ದಾರೆ.

ನನಗೆ ಯಾರು ಗಾಡ್ ಫಾದರ್ ಇಲ್ಲ ಆದರೆ ದೇವರು ಕಳಿಸಿಕೊಟ್ಟ ಗಾಡ್ ಬ್ರದರ್ ಇವರು ಎಂದು ಖುಷಿಯಿಂದ ರೂಪೇಶ್ ಶೆಟ್ಟಿ ಹೇಳಿದರು.

ತದ ನಂತರ ಸುನೀಲ್ ಶೆಟ್ಟಿ ಮತ್ತು ನಿರ್ದೇಶಕ ರೂಪೇಶ್ ಶೆಟ್ಟಿ ಜೊತೆಗೂಡಿ ಹುಲಿ ನೃತ್ಯಕ್ಕೆ ಹೆಜ್ಜೆ ಹಾಕಿದರು.

 

ಸಂಗೀತ ನಿರ್ದೇಶಕ ಗುರುಕಿರಣ್ ಮಾತಾಡಿ ನಮ್ಮೆಲ್ಲರ ಅಣ್ಣ ಸುನೀಲಣ್ಣ ಬಂದಿದ್ದಾರೆ, ನಾನು ಮ್ಯೂಸಿಕ್ ವರ್ಲ್ಡ್ ಗೆ ಬರೋಕೆ ಕಾರಣ ಅವರೇ, ನಾನು ಚಿತ್ರರಂಗಕ್ಕೆ ಬರೋಕೆ ಮುಂಚೆ  ನನಗೆ ಸ್ಪೂರ್ತಿ ತುಂಬಿ, ಮೊದಲು ಏನಾದರು ಡೆಮೋ ಮಾಡ್ಕೊಂಡು ಬಾ ಅಂತ ಹೇಳಿದ್ದರು ಅದನ್ನು ನಾನು ಯಾವತ್ತು ಮರೆಯೋದಿಲ್ಲ ಎಂದರು.

ವೇದಿಕೆ ಮೇಲೆ "ಸಾಸೋಂಕಿ ದಡಕುಮೇ" ಗೀತೆಯ ಸಾಲನ್ನು ಹಾಡಿ ರಂಜಿಸಿದರು.

 

ಜೊತೆಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಅಶ್ವಥ್ ನಾರಾಯಣ್ ಅತಿಥಿಯಾಗಿ ಬಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು.

 

ಈ ಸಂಭ್ರಮವನ್ನು ಕಕ್ಕಿರಿದ ಸಿನಿ ಪ್ರೇಮಿಗಳು ಸಂಭ್ರಮಿಸಿ ಈ ದೃಶ್ಯಗಳನ್ನು ಕಣ್ತುಂಬಿಕೊಂಡರು.

 

ಚಿತ್ರದ ನಾಯಕಿ ಅದ್ವಿತಿ ಶೆಟ್ಟಿ ಟೆಡಿಷನಲ್ ಗ್ಲಾಮರ್ ಆಗಿ ಮಿಂಚುತಿದ್ದರು. ಅವರು ಕೂಡ ಸುನೀಲ್ ಶೆಟ್ಟಿಯವರ ಜೊತೆ ನಿಂತು ಕ್ಯಾಮರಾಗಳಿಗೆ ಫೋಸ್ ಕೊಟ್ಟರು ಸುನೀಲ್ ಶೆಟ್ಟಿ ಜೊತೆ ನಿಂತ ಖುಷಿ ಸಂಭ್ರಮ ಅವರ ಕಣ್ಣುಗಳಲ್ಲಿ ಕಾಣುತಿತ್ತು.

 

 ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ.

 

ಈ ಕಾರ್ಯಕ್ರಮದಲ್ಲಿ ಚಿತ್ರ ತಂಡದ ಬಹುತೇಕ ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು.

 

ಒಟ್ಟಿನಲ್ಲಿ ಕನ್ನಡದ ಮಣ್ಣಿನ ನಟ ಸುನೀಲ್ ಶೆಟ್ಟಿ ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಆಗಿದ್ದು, ಮೊದಲ ಬಾರಿಗೆ ತಮ್ಮ ತಾಯ್ನಾಡಿನ ಕನ್ನಡ ಮತ್ತು ತುಳುವಿನ ಚಿತ್ರದ ಪ್ರಚಾರಕ್ಕಾಗಿ ಬಂದ ಅವರನ್ನು ನೋಡಿದ ಸಿನಿ ಪ್ರಿಯರ ಸಂಭ್ರಮ ಗರಿಗೆದರಿತ್ತು.

 

Copyright@2018 Chitralahari | All Rights Reserved. Photo Journalist K.S. Mokshendra,