Love Case.Film News

Friday, November 07, 2025

 

 *ಲವ್ ಕೇಸ್ ಚಿತ್ರದ ಮುಹೂರ್ತ*

 

ಶ್ರೀ ಬಂಡೆ ಮಹಾಕಾಳಿಸನ್ನಿಧಿಯಲ್ಲಿ ಲವ್ ಕೇಸ್ ಚಿತ್ರಕ್ಕೆ ಚಾಲನೆ

 

ಎಂ.ಬಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಮೋಹನ್ ಬಾಬು ನಿರ್ಮಾಣದಲ್ಲಿ ಜೈಶ್ ನಿರ್ದೇಶನದಲ್ಲಿ ಲವ್ ಕೇಸ್ ಸಿನಿಮಾದ ಮುಹೂರ್ತ ಇಂದು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ‌ ನೆರವೇರಿದೆ.

 

ಶ್ರೀನಗರ ಕಿಟ್ಟಿ, ಟಗರು ಪಲ್ಯ ನಾಗಭೂಷಣ್ , ಸಾಯಿಕುಮಾರ್, ಸುಧಾರಾಣಿ, ಪ್ರಮೋದ್ ಶೆಟ್ಟಿ, ಜೀ ಕನ್ನಡ ಮಹಾನಟಿ ಖ್ಯಾತಿಯ ವಂಶಿ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ರಂಜನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.

ಲವ್ ಕೇಸ್ ಪ್ಯೂರ್ ಲವ್ ಸ್ಟೋರಿ ಅನ್ನೋ ಅಡಿ ಬರಹವಿರೋ‌ ಈ ಚಿತ್ರಕ್ಕೆ ವಿ.ಹರಿಕೃಷ್ಣರವರ ಪುತ್ರ ಆದಿ ಹರಿಕೃಷ್ಣ ಸಂಗೀತ ಸಂಯೋಜಿಸ್ತಿದ್ದಾರೆ. ಮಾಸ್ತಿ ಸಂಭಾಷಣೆ ಲವ್ ಕೇಸ್ ಚಿತ್ರಕ್ಕಿದ್ದು,ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಅನುಕೃಷ್ಣ ಸಂಕಲನ ಚಿತ್ರಕ್ಕಿದೆ.

 

ಶ್ರೀ ಬಂಡೆವಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ಸಮಾರಂಭ ಆಯೋಜಿಸಿದ್ದ ಲವ್ವಕೇಸ್ ಚಿತ್ರದ ಶೀರ್ಷಿಕೆಯನ್ನ ಚಿಂತಾಮಣಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಅನಾವರಣಗೊಳಿಸಿದ್ರು, ವೇದಿಕೆಯಲ್ಲಿ ಹಿರಿಯ ನಟಿ ಸುಧಾರಾಣಿ , ಶ್ರೀನಗರ ಕಿಟ್ಟಿ, ನಾಗಭೂಷಣ್, ಮಾಸ್ತಿ ಹಾಗೂ ನಿರ್ದೇಶಕ ಜೈಶ್  ಲವ್ ಕೇಸ್ ಚಿತ್ರದ ಓಳ ನೋಟವನ್ನ ವಿವರಿಸಿ, ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಿದ್ದು, ಆರೇ ತಿಂಗಳುಗಳಲ್ಲಿ ಈ ಚಿತ್ರವನ್ನ ತೆರೆಗೆ ತರೋ ಯೋಜನೆಯಲ್ಲಿದ್ದೇವೆಂದು ತಿಳಿಸಿದ್ರು.

 

Copyright@2018 Chitralahari | All Rights Reserved. Photo Journalist K.S. Mokshendra,