Koragajja.Film News

Thursday, November 06, 2025

 

*ಕೊರಗಜ್ಜ ಚಿತ್ರದ ಕ್ರೇಜ್ ಗೆ ಮಾನ್ಯ ಗೃಹ ಸಚಿವರಿಂದ ಶ್ಲಾಘನೆ: ಚಿತ್ರದ ಯಶಸ್ಸಿಗೆ ಶುಭಹಾರೈಸಿದ ಡಾII ಜಿ ಪರಮೇಶ್ವರ್*

 

 *ರಾಷ್ಟ್ರೀಯ ಮಟ್ಟದ ಪತ್ರಕರ್ತರ ಸಮ್ಮುಖದಲ್ಲಿ ನಡೆಯಲಿದೆಯೇ ಟ್ರೇಲರ್ ಲಾಂಚ್?* ``

 

ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ, ಸುಧೀರ್ ಅತ್ತಾವರ್ ನಿರ್ದೇಶನದ  "ಕೊರಗಜ್ಜ" ಸಿನಿಮಾ ಹುಟ್ಟಿಸುತ್ತಿರುವ ಕ್ರೇಜ್ ಅಷ್ಟಿಷ್ಟಲ್ಲ. ಚಿತ್ರದ ಧನಾತ್ಮಕ ಜನಪ್ರಿಯತೆಯ ಬಗ್ಗೆ ರಾಜ್ಯದ ಗೃಹ ಸಚಿವರು ಹರ್ಷ ವ್ಯಕ್ತಪಡಿಸಿ, ನಶಿಸಿ ಹೋಗುತ್ತಿರುವ ನಮ್ಮ ಪುರಾತನ ಸಂಸ್ಕ್ರತಿ ಹಾಗೂ ಕಲೆಯನ್ನು "ಕೊರಗಜ್ಜ" ರೀತಿಯ ಸಿನಿಮಾಗಳು ಎತ್ತಿಹಿಡಿಯುತ್ತಿರುವುದು ಸಂತೋಷ ನೀಡುತ್ತಿದೆ. ಈ ರೀತಿಯ ಚಿತ್ರಗಳು ಹೆಚ್ಚು ಹೆಚ್ಚು ಮೂಡಿಬರಲಿ ಎಂದು ಆಶಿಸಿ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ತಾಯಾರಾಗಿರುವ "ಕೊರಗಜ್ಜ" ಚಿತ್ರಕ್ಕೆ ಶುಭ ಹಾರೈಸಿದರು.

 ಇದೇ ತಿಂಗಳ  11ರಂದು ಮಂಗಳೂರಿನಲ್ಲಿ ನಡೆಯಲಿರುವ ಅಖಿಲಭಾರತ ಮಟ್ಟದ "ಕೊರಗಜ್ಜ" ಚಿತ್ರದ ಪತ್ರಿಕಾಗೋಷ್ಠಿ ಹಾಗೂ ಅಂದೇ ಸಂಜೆ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಲಿರುವ ಪತ್ರಕರ್ತರ ಮತ್ತು ಸಾವಿರಾರು ಜನರ ಹಾಗೂ ಸಿನಿಮಾ ತಾರೆಯರ ಸಮ್ಮುಖದಲ್ಲಿ  ನಡೆಯಲಿರುವ ಕೊರಗಜ್ಜ ದೈವದ ಅದ್ದೂರಿ ಕೋಲಸೇವೆಯ ಬಗ್ಗೆ ರಾಜ್ಯದ ಗೃಹ ಸಚಿವರೊಂದಿಗೆ ಚಿತ್ರತಂಡ ಚರ್ಚಿಸಿತು. ಕೆಲ ಸ್ಥಳಿಯ ಕಿಡಿಕೇಡಿಗಳು ನೀಡುತ್ತಿರುವ ಬೆದರಿಕೆ ಮತ್ತು ಚಿತ್ರೀಕರಣದ ವೇಳೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಮಾನ್ಯ ಡಾII ಜಿ.ಪರಮೇಶ್ ರವರೊಂದಿಗೆ ನಿರ್ದೇಶಕ ಸುಧೀರ್ ಅತ್ತಾವರ್, ಚಿತ್ರದ ಪ್ರಮುಖ ನಟಿ ಭವ್ಯ,  ನಿರ್ಮಾಪಕ ತ್ರಿವಿಕ್ರಮ್, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ  ಚರ್ಚಿಸಿ ವಿಶೇಷ ಭದ್ರತೆಯ ಬಗ್ಗೆ ಮನವಿ ಮಾಡಿಕೊಂಡರು.ಮಾನ್ಯ ಗ್ರಹ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ, ಮಂಗಳೂರಿನ ಪೋಲಿಸ್ ಕಮಿಷನರ್ ಜೊತೆ ವಿಷಯ ಪ್ರಸ್ತಾಪಿಸಿದರು.

 

ಇತ್ತೀಚೆಗಷ್ಟೇ ಅತ್ಯಂತ ವಿಭಿನ್ನ ರೀತಿಯಲ್ಲಿ ಚಿತ್ರದ ಫಸ್ಟ್ ಲುಕ್ ಮತ್ತು 3ಡಿ ಮೋಷನ್ ಪೋಸ್ಟರ್ ಬಿಡುಗಡೆ ಗೊಳಿಸಿ ಚಿತ್ರದ ಮೇಲಿನ ನಿರೀಕ್ಷೆ ಇಮ್ಮಡಿಗೊಳಿಸಿದ್ದ ಚಿತ್ರತಂಡ ದೇಶಾದ್ಯಂತ ಪತ್ರಕರ್ತರನ್ನು ಒಟ್ಟುಗೂಡುಸಿ, ಚಿತ್ರದ ಟ್ರೇಲರ್ ಅಥವ  ಆಡಿಯೋ ಲಾಂಚ್ ಮಾಡುವ ಪ್ಲಾನ್ ಮಾಡಬಹುದೇ ಎನ್ನುವ ಸಂದೇಹ ಜೋರಾಗಿ ಕೇಳಿಬರುತ್ತಿದೆ...!

 

Copyright@2018 Chitralahari | All Rights Reserved. Photo Journalist K.S. Mokshendra,