45.Film News

Wednesday, November 05, 2025

 

*ಟ್ರೆಂಡಿಂಗ್ ನಲ್ಲಿ "45" ಚಿತ್ರದ "AFRO ಟಪಾಂಗ" ಪ್ರಮೋಷನ್ ಸಾಂಗ್.* .

 

 *ಬಿಡುಗಡೆಯಾದ ಮೂರೇ ದಿನಗಳಲ್ಲಿ 12 ಮಿಲಿಯನ್ ವೀಕ್ಷಣೆ* .

 

 ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ "AFRO ಟಪಾಂಗ"  ಪ್ರಮೋಷನ್ ಸಾಂಗ್ ಇತ್ತೀಚೆಗಷ್ಟೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿತ್ತು. ಅನಾವರಣವಾದ ಮೂರೇ ದಿನಗಳಲ್ಲಿ ಈ ಹಾಡು 12 ಮಿಲಿಯನ್ ವೀಕ್ಷಣೆಯಾಗಿ ಜನಪ್ರಿಯವಾಗಿದೆ‌. ಟ್ರೆಂಡಿಂಗ್ ನಲ್ಲಿ ALL OVER ಇಂಡಿಯಾದಲ್ಲಿ ಈ ಹಾಡು #23 ನೇ ಸ್ಥಾನದಲ್ಲಿದ್ದರೆ, 

ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ. ಚಿತ್ರದ ನಾಯಕರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಭಾರತಕ್ಕೆ ಮೊದಲ ಬಾರಿ ಬಂದಿರುವ ಉಗಾಂಡದ ಪ್ರಸಿದ್ದ ನೃತ್ಯಗಾರರಾದ ಘೆಟ್ಟೊ ಕಿಡ್ಸ್ ಜೊತೆಗೆ ಈ ಪ್ರಮೋಷನ್ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಮೂವರು ನಾಯಕರ ಲುಕ್ ಗೆ ಹಾಗೂ ಹುಕ್ ಸ್ಟೆಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.  ಚಿತ್ರದ ಪ್ರಮೋಷನ್ ಸಾಂಗ್ ಅನ್ನೇ ಇಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು, ಚಿತ್ರವನ್ನು ಇನ್ನಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ‌. ಮೊದಲ ನಿರ್ದೇಶನದಲ್ಲಿ ಇಂತಹ ಅದ್ಭುತ ಸಾಂಗ್ ನೀಡಿರುವ ನಿರ್ದೇಶಕ ಅರ್ಜುನ್ ಜನ್ಯ ಅವರ ಮೇಲಿರುವ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ‌. ಎಂ.ಸಿ.ಬಿಜ್ಜು ಹಾಗೂ ನಿಶಾನ್ ರೈ ಈ ಹಾಡನ್ನು ಬರೆದು ಹಾಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,