Premam Madhuram.News

Monday, November 03, 2025

 

*ಪ್ರೇಮಂ ಮಧುರಂ ಪ್ರೇಮಂ ಅಮರಂ*

 

      ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ *ಪ್ರೇಮಂ ಮಧುರಂ* ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ರೂಬಿ ಕ್ರಿಯೇಶನ್ಸ್ ಅಡಿಯಲ್ಲಿ *ಅರಗೊಂಡ ಶೇಖರ್‌ರೆಡ್ಡಿ ನಿರ್ಮಾಣ* ಮಾಡಿದ್ದಾರೆ. *ಗಾಂಧಿ.ಎ.ಬಿ ಸಿನಿಮಾಕ್ಕೆ ಕಥೆ, ನಿರ್ದೇಶನ ಜತೆಗೆ ನಾಯಕನಾಗಿ* ಅಭಿನಯಿಸಿದ್ದಾರೆ.

 

      *ನಾಯಕಿಯರಾದ ಐಶ್ವರ್ಯ ದಿನೇಶ್, ಅನುಷಾ ಜೈನ್* ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ತಾರಾಗಣದಲ್ಲಿ ಸಿಹಿಕಹಿಚಂದ್ರು, ರಾಜೇಶ್ವರಿ, ಲಪಂಗ್‌ರಾಜ, ಅನೂಪ್ ಅಗಸ್ತ್ಯ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ವಿಶಾಲ್ ಆಲಾಪ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮಂಜುನಾಥ ಹೆಗಡೆ, ಸಂಕಲನ ಸಂಜೀವ್ ಜಾಗಿರ್‌ದಾರ್, ಹಿನ್ನಲೆ ಶಬ್ದ ಶ್ರೀಮಾನ್ ಗಂಧರ್ವ, ನೃತ್ಯ ಮನೀಷ್ ಕೇಶವ್, ಲೋಕೇಶ್ ಅರ್ಜುನ್, ರಾಂಕುಮಾರ್.ಡಿ, ಗೌತಂ ಸೆಲ್ವರಾಜ್ ಅವರದಾಗಿದೆ.

       ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಹೊಸ ಪ್ರತಿಭೆಗಳು ಹುಟ್ಟಬೇಕು. ಆಮೇಲೆ ನೀವುಗಳು ಕನಿಷ್ಟ ಹತ್ತು ಪ್ರತಿಭೆಗಳನ್ನು ಮೇಲಕ್ಕೆ ತರಬೇಕು ಅಂತ ಷರತ್ತು ಹಾಕಿ ನಿರ್ಮಾಪಕರು ಬಂಡವಾಳ ಹೂಡಿದರು. ಹಲವು ನಿರ್ದೇಶಕರಗಳ ಬಳಿ ಕೆಲಸ ಕಲಿತು, ಪೂನ ಫಿಲಂ ಇನ್ಸಿಟ್ಯೂಟ್‌ದಲ್ಲಿ ತರಭೇತಿ ಪಡೆದಿದ್ದೇನೆ. ಸಿನಿಮಾವು ಪ್ರಸಕ್ತ ಯುವಜನತೆಗೆ ಕನೆಕ್ಟ್ ಆಗುವಂತೆ ಸನ್ನಿವೇಶಗಳು ಇರುತ್ತದೆ.  ಪ್ರತಿಯೊಬ್ಬರ ಬದುಕಲ್ಲಿ ಪ್ರೀತಿ ಯಶಸ್ಸು, ಇಲ್ಲವೆ ಸೋತಿರುತ್ತದೆ. ಅವರೆಲ್ಲರಿಗೂ ಇದು ಅನ್ವಯವಾಗುತ್ತದೆ. ಹೊಸದಾಗಿ ಏನನ್ನು ಹೇಳಲಿಕ್ಕೆ ಹೋಗಿಲ್ಲ. ಸ್ಕೂಲ್, ಕಾಲೇಜ್‌ದಲ್ಲಿ ನಾನು ಅನುಭವಿಸಿದಂತ, ಕಂಡಂತ ಒಂದಷ್ಟು ಅಂಶಗಳನ್ನು ಚಿತ್ರರೂಪಕ್ಕೆ ತರಲಾಗಿದೆ. ಮೂರು ಹಂತಗಳಲ್ಲಿ ಪ್ರೀತಿ ಹೇಗಿರುತ್ತೆ ಎಂಬುದನ್ನು ತೋರಿಸಲಾಗಿದೆ. ಬೆಂಗಳೂರು, ಮಂಗಳೂರು, ಬೈಂದೂರು, ಉಡುಪಿ ಕಾಲ್ತೋಡು, ಮಲ್ಪೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕಾಸು ಕೊಟ್ಟು ಬರುವ ಪ್ರೇಕ್ಷಕನಿಗೆ ಸಂಪೂರ್ಣ ಮನರಂಜನೆ ಕೊಡಲಿದೆ. ಚುಂಬನ ದೃಶ್ಯದಲ್ಲಿ ಪ್ಯಾನಿಕ್ ಆಗಿದ್ದೆ ಎಂದು ಮಾಧ್ಯಮದ ಪ್ರಶ್ನೆಗೆ ಗಾಂಧಿ.ಎ.ಬಿ ಉತ್ತರವಾದರು.

 

      ಹುಟ್ಟೂರು ತಿರುಪತಿ, ಬದುಕು ಕಂಡಿದ್ದು ಬೆಂಗಳೂರು. ಇಲ್ಲಿನ ಋಣ ಹಾಗೂ ಕನಿಷ್ಠ ೧೦ ಹುಡುಗರಿಗೆ ಬದುಕು ಕೊಡುವ ಸಲುವಾಗಿ ಚಿತ್ರ ಮಾಡಿದ್ದೇನೆ. ಚಿರಂಜೀವಿ ಅಪ್ಪಟ ಅಭಿಮಾನಿಯಾಗಿ ಅವರ ಮಾತಿನಂತೆ ನಡೆದುಕೊಂಡಿದ್ದೇನೆ. ಅಂದರೆ ಮಾತು ಕೊಡುವ ಮುಂಚೆ ನೀನು ಯಜಮಾನ. ಕೊಟ್ಟ ಮೇಲೆ ಗುಲಾಮ. ಅದರಂತೆ ನಡೆದುಕೊಳ್ಳುವುದು ಸೂಕ್ತ ಅಂತ ಮೆಘಾಸ್ಟಾರ್ ನುಡಿಯನ್ನು ಪಾಲಿಸಿದ್ದೇನೆ. ಈ ಹುಡುಗರು ಏನೋ ಸಾಧನೆ ಮಾಡಿದ್ದಾರೆ. ಅವರಿಗೆ ನಿಮ್ಮಲ್ಲರ ಆರ್ಶಿವಾದ ಇರಲೆಂದು ಅರಗೊಂಡ ಶೇಖೆರ್‌ರೆಡ್ಡಿ ಕೋರಿಕೊಂಡರು.

 

      ಬಾಗೂರು ಟಾಕೀಸ್ ಸಂಸ್ಥೆಯು ಇದೇ ತಿಂಗಳಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

Copyright@2018 Chitralahari | All Rights Reserved. Photo Journalist K.S. Mokshendra,