*ಮೈ ನೇಮ್ ಈಸ್ ಕೆಡಿ ಟ್ರೇಲರ್ ಬಿಡುಗಡೆ*
’ಇಂತಿ ನಿಮ್ಮ ಭೈರಾ’ ತಂಡದ ಎರಡನೇ ಪ್ರಯತ್ನ ಎನ್ನುವಂತೆ *ಮೈ ನೇಮ್ ಈಸ್ ಕೆಡಿ* ಚಿತ್ರದ ಟ್ರೇಲರ್‌ನ್ನು ಫಿಲಿಂ ಛೇಂಬರ್ ಮಾಜಿ ಅಧ್ಯಕ್ಷ ಬಾ.ಮ.ಹರೀಶ್, ಮಹಾರಾಣಿ ಕಾಲೇಜು ಉಪಕುಲಪತಿ ಶಿವಶಂಕರಪ್ಪ ಮತ್ತು ನಿರ್ದೇಶಕ ಟಿ.ಶಿ.ವೆಂಕಟೇಶ್ ಬಿಡುಗಡೆ ಮಾಡಿ ನಿರ್ಮಾಪಕರ ಸಾಧನೆಯನ್ನು ಕೊಂಡಾಡಿ ತಂಡಕ್ಕೆ ಶುಭ ಹಾರೈಸಿದರು. ಎಸ್‌ಎಸ್‌ಕೆಬಿ ಪ್ರೊಡಕ್ಷನ್ ಅಡಿಯಲ್ಲಿ *ವೆಂಕಟೇಶ್.ಡಿ ನಿರ್ಮಾಣ* ಮಾಡಿದ್ದಾರೆ. ಕುಮಾರ್.ಡಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. *ಕೆ.ಜೆ.ಚಿಕ್ಕು ಆಕ್ಷನ್ ಕಟ್* ಹೇಳಿದ್ದಾರೆ.
ನಿರ್ದೇಶಕರು ಹೇಳುವಂತೆ ಇದೊಂದು ಕಾಮಿಡಿ, ಡ್ರಾಮಾ ಸನ್ನಿವೇಶಗಳನ್ನು ಒಳಗೊಂಡಿದೆ. ಕನಕಪುರ, ಹೆಸರುಘಟ್ಟ, ಆನೇಕಲ್, ಬೆಂಗಳೂರು ಕಡೆಗಳಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳು ಇರಲಿದೆ. ಡಿಸೆಂಬರ್ ತಿಂಗಳಲ್ಲಿ ತೆರೆಗೆ ತರಲು ಯೋಜನೆ ಹಾಕಲಾಗಿದೆ ಅಂತ ಕೆ.ಜಿ.ಚಿಕ್ಕು ಮಾಹಿತಿ ನೀಡಿದರು.
*ಆರ್ಯನ್‌ವೆಂಕಟೇಶ್ ನಾಯಕ*. ’ಗಿಡುಗ’ದಲ್ಲಿ ಕಾಣಿಸಿಕೊಂಡಿದ್ದ *ಭವಾನಿ ನಾಯಕಿ*. ಉಳಿದಂತೆ ಹೊನ್ನವಳ್ಳಿ ಕೃಷ್ಣ, ಗಿರೀಶ್‌ಜತ್ತಿ, ವಿಶ್ವ, ಯತಿರಾಜ್, ಅರಸು ಮಹಾರಾಜ್, ಸುಪ್ರೀತ್‌ಕಾಟಿ, ರೋಹಿಣಿ, ಮಾಸ್ಟರ್ ಲಕ್ಷ್.ಕೆ.ಸಿ ಮುಂತಾದವರು ನಟಿಸಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್, ಪುನೀತ್‌ರಂಗನಾಥ್, ಮನುದೇವನಹಳ್ಳಿ ಸಾಹಿತ್ಯದ ಗೀತೆಗಳಿಗೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಂತೋಸ ಪಂಡಿ, ಸಂಕಲನ ಕಿರಣ್‌ಕುಮಾರ್.ಜೆ, ಕಾರ್ಯಕಾರಿ ನಿರ್ಮಾಪಕ ಅರುಣ್‌ಕುಮಾರ್, ಹಿನ್ನಲೆ ಶಬ್ದ ಪ್ರವೀಣ್, ಸಾಹಸ ಗಣೇಶ್ ಮಾಸ್ಟರ್ ಅವರದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆರ್ಯನ್‌ವೆಂಕಟೇಶ್ ಕಷ್ಟದ ದಿನಗಳನ್ನು ನೆನೆಸಿಕೊಂಡು, ಚಿತ್ರಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ಹಿಂದಿನ ಸಿನಿಮಾ ಗಳಿಕೆ ಕಡಿಮೆ ಬಂದಿತ್ತು. ಒಟಿಟಿಗೆ ಬಿಟ್ಟಾಗ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಇದರ ಸ್ಪೂರ್ತಿಯಿಂದಲೇ ಈಗ ಮತ್ತೋಮ್ಮೆ ನಿಮ್ಮ ಮುಂದೆ ಬಂದಿದ್ದೇವೆ. ಕನಕನಹಳ್ಳಿ ದಾಸೆಗೌಡರ ಮಗ ಎಂಬುದನ್ನು ಚಿಕ್ಕದಾಗಿ ಕೆಡಿ ಎಂದು ಹೆಸರನ್ನು ಇಡಲಾಗಿದೆ. ಗ್ರಾಮೀಣ ಭಾಗದ ಕತೆಯಲ್ಲಿ ಅಮ್ಮನನ್ನು ಉಳಿಸಿಕೊಳ್ಳುವ ಸಲುವಾಗಿ ಏಳನೇ ತರಗತಿ ಓದುತ್ತಿರುವ ಪುತ್ರನು ಶಾಸಕನ ಬಳಿ ಸಹಾಯಕ್ಕೆ ಹೋಗುತ್ತಾನೆ. ಆದರೆ ಆತ ಅವಮಾನ ಮಾಡುತ್ತಾನೆ. ಇದರಿಂದ ಕುಪಿತಕೊಂಡು ನಾನು ಮುಂದೆ ಒಳ್ಳೆಯ ರೀತಿಯಲ್ಲಿ ಹಣಗಳಿಸಿ ಎಂಎಲ್‌ಎ ಆಗಬೇಕೆಂದು ಪಣ ತೊಡುತ್ತಾನೆ. ಅದಕ್ಕಾಗಿ ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಾನೆ. ಅಂತಿಮವಾಗಿ ತನ್ನ ಹಾದಿಯಲ್ಲಿ ಯಶಸ್ಸು ಗಳಿಸುತ್ತಾನಾ ಎಂಬುದು ಒಂದು ಎಳೆಯ ಸಾರಾಂಶವಾಗಿದೆ ಎಂದು ಮಾಧ್ಯಮದ ಸಹಕಾರಬೇಕೆಂದು ಕೋರಿದರು.