ರೋಣ ಚಿತ್ರದ ಟ್ರೈಲರ್ ಮೆಚ್ಚಿದ ಸಿ.ಎಂ ಸಿದ್ದರಾಮಯ್ಯ
ಚಿತ್ರತಂಡಕ್ಕೆ ಶುಭಾಶಯ
ನವೆಂಬರ್ 7ಕ್ಕೆ ರಾಜ್ಯದಾದ್ಯಂತ ಬಿಡುಗಡೆ
*"ರೋಣ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಸಿಎಂ ಮಾಧ್ಯಮ ಸಲಹೆಗಾರ ಕೆ. ಪ್ರಭಾಕರ್.*
"ನವಂಬರ್ 7ರಂದು ರಂಗಭೂಮಿ ಪ್ರತಿಭೆಗಳ ಸಾರಥ್ಯದಲ್ಲಿ ಸಿದ್ಧವಾಗಿರುವ ರೋಣ ಚಿತ್ರ ಅದ್ದೂರಿಯಾಗಿ ಬಿಡುಗಡೆ".
ಬೆಳ್ಳಿ ಪರದೆ ಮೇಲೆ ಯುವ ಪ್ರತಿಭೆಗಳ ವಿಭಿನ್ನ ಕಥಾನಕ ರೋಣ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ಜಿಟಿ ಮಾಲ್ ನಲ್ಲಿರುವ ಉತ್ಸವ್ ಲೆಗಸಿಯಲ್ಲಿ ಆಯೋಜನೆಗೊಂಡಿದ್ದು , ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ಪ್ರಭಾಕರ್ ರವರು ಆಗಮಿಸಿ ಚಿತ್ರದ ಟ್ರೈಲರ್ ಅನ್ನ ಬಿಡುಗಡೆ ಮಾಡಿದರು. ತದನಂತರ ಮಾತನಾಡುತ್ತಾ ಗ್ರಾಮೀಣ ಭಾಗದ ರಂಗಭೂಮಿ ಪ್ರತಿಭೆಗಳು ಬಹಳ ಆಸಕ್ತಿಯಿಂದ ಒಂದು ಉತ್ತಮ ಚಿತ್ರವನ್ನ ಮಾಡಿದ್ದಾರೆ. ಯುವ ನಟ , ನಿರ್ಮಾಪಕ ರಘು ರಾಜನಂದ ನಿರ್ಮಿಸಿರುವ ಈ ಚಿತ್ರದ ಟ್ರೈಲರನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವೀಕ್ಷಿಸಿ ಇಡೀ ತಂಡಕ್ಕೆ ಶುಭವನ್ನ ಹಾರೈಸಿದರು. ನಾನು ಕೂಡ ತಂಡಕ್ಕೆ ಶುಭ ಕೋರುತ್ತೇನೆ ಚಿತ್ರದ ಟ್ರೈಲರ್ ನೋಡಿದೆ ಬಹಳ ಕುತೂಹಲಕಾರಿಯಾಗಿ ಬಂದಿದೆ. ಸಂಗೀತ ಕೂಡ ಚೆನ್ನಾಗಿದೆ ಎನ್ನುತ್ತಾ ತಾವು ಕೋಲಾರ ವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ , ಆ ಸಮಯದಲ್ಲಿ ತಮಗೆ ಸಹಕರಿಸಿದವರ ಬಗ್ಗೆ ಮಾತನಾಡುತ್ತಾ , ಈ ಯುವ ತಂಡಕ್ಕೆ ನಮ್ಮ ಬೆಂಬಲ ಇರುತ್ತದೆ. ಕನ್ನಡ ಚಿತ್ರವನ್ನು ನೋಡಿ ಬೆಳೆಸಿ ಎಂದು ಹೇಳಿದರು.
ಬಿ. ಆರ್. ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ಈ "ರೋಣ" ಚಿತ್ರವನ್ನು ನಟ , ನಿರ್ಮಾಪಕ ರಘು ರಾಜ ನಂದ ನಿರ್ಮಿಸಿದ್ದು ,ಯುವ ನಿರ್ದೇಶಕ ಸತೀಶ್ ಕುಮಾರ್ ಸಾರಥ್ಯ ವಹಿಸಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಇದೊಂದು
ಹಳ್ಳಿ ಸೊಗಡಿನಲ್ಲಿ ಸಾಗುವ ಸಂಬಂಧಗಳ ಬೆಸುಗೆ , ಧಾರ್ಮಿಕ, ರಾಜಕೀಯ , ವೈಜ್ಞಾನಿಕ ವಿಚಾರಗಳ ಸಂಗಮದ ಕಥೆಯಾಗಿದೆ. ಈ ಚಿತ್ರದ ನಿರ್ದೇಶಕ ಸತೀಶ್ ಕುಮಾರ್ ಮಾತನಾಡುತ್ತಾ ಈ ನಮ್ಮ ಕಥೆ ಬಹಳ ವಿಭಿನ್ನವಾಗಿದೆ. ನಾನು ಹಾಗೂ ನಟ , ನಿರ್ಮಾಪಕ ರಘು ಜೊತೆ ನಮ್ಮ ತಂಡ ಬಹಳಷ್ಟು ಚರ್ಚೆ ಮಾಡಿ ಈ ಸಿನಿಮಾವನ್ನು ಆರಂಭಿಸಿದ್ದು , ಇದು ನನ್ನ ಮೊದಲ ನಿರ್ದೇಶನದ ಚಿತ್ರ. ನಾನು ಚಿತ್ರರಂಗದಲ್ಲಿ ಒಂಬತ್ತು ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು , ನಂತರ ಕೆಲವು ಡಾಕ್ಯೂಮೆಂಟರಿಗಳ ಅನುಭವ ಪಡೆದು, ಈಗ ರೋಣ ಚಿತ್ರದ ಮೂಲಕ ನಿರ್ದೇಶಕನಾಗಿ ಎಂಟ್ರಿ ಪಡೆಯುತ್ತಿದ್ದೇನೆ. ಇದು ಅಪ್ಪ-ಮಗನ ಕಥೆಯನ್ನು ಒಳಗೊಂಡಿದ್ದು , ಹಳ್ಳಿ ಸೊಗಡಿನಲ್ಲಿ ವೈಜ್ಞಾನಿಕ , ಧಾರ್ಮಿಕ, ರಾಜಕೀಯ, ಸ್ನೇಹ , ಪ್ರೀತಿ ಸೇರಿದಂತೆ ಮನೋರಂಜನೆಯ ಎಲ್ಲಾ ಅಂಶಗಳು ಒಳಗೊಂಡಿದೆ. ಇಡೀ ತಾಂತ್ರಿಕ ಬಳಗದ ತಂಡ ನಮಗೆ ಸಾತ್ ನೀಡಿದೆ. ಈ "ರೋಣ" ಚಿತ್ರವನ್ನು 65 ದಿನಗಳ ಕಾಲ ಹೊಸಕೋಟೆ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ನಾವು ಅಂದುಕೊಂಡಂತೆ ಚಿತ್ರ ಮೂಡಿ ಬಂದಿದೆ. ನಮ್ಮ ಚಿತ್ರವನ್ನ ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.
ಈ ಚಿತ್ರದ ನಟ ಹಾಗೂ ನಿರ್ಮಾಪಕ ರಘು ರಾಜ ನಂದ ಮಾತನಾಡುತ್ತಾ ನಮ್ಮ ಟ್ರೈಲರ್ ವೀಕ್ಷಿಸಿ ಶುಭ ಹಾರೈಸಿದ ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ನಮ್ಮ ಕಾರ್ಯಕ್ರಮಕ್ಕೆ ಬಂದು ಟ್ರೈಲರ್ ಬಿಡುಗಡೆ ಮಾಡಿದಂತಹ ಕೆ .ಪ್ರಭಾಕರ್ ಸರ್ ರವರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಈ ಚಿತ್ರವನ್ನು ಬಿ. ಆರ್. ಕೆ. ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿದ್ದು , ನನ್ನ ರಂಗ ಭೂಮಿ ಗುರುಗಳಾದ ಸದಾಶಿವ ನೀನಾಸಂ ಹಾಗೂ ಆಕ್ಟಿಂಗ್ ತರಬೇತಿ ಹೇಳಿ ಕೊಟ್ಟ ಮೂಲಕ ಬಹಳಷ್ಟು ಕಲ್ತಿದ್ದೇನೆ. ಇವರಿಬ್ಬರೂ ನಮ್ಮ ಚಿತ್ರದಲ್ಲಿ ಅಭಿನಯಿಸಿರುವುದು ನನ್ನ ಸೌಭಾಗ್ಯ. ನಾನು ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ, ಕೆರೆ ಬೇಟೆಯಲ್ಲಿ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದ ನಂತರ , ನಾನೇ ಒಂದು ಚಿತ್ರವನ್ನು ಮಾಡಬೇಕೆಂದು ತೀರ್ಮಾನ ಮಾಡಿಕೊಂಡೆ. ಅದರಂತೆ ಈಗ ರೋಣ ಚಿತ್ರದಲ್ಲಿ ನಟಿಸಿ ನಿರ್ಮಾಣವನ್ನು ಮಾಡಿದ್ದೇನೆ. ಬಹಳ ಉತ್ತಮವಾಗಿ ನಮ್ಮ ಚಿತ್ರ ಮೂಡಿಬಂದಿದೆ. ಈ ಚಿತ್ರದಲ್ಲಿ ಎಲ್ಲಾ ರೀತಿಯ ಅಂಶಗಳು ಒಳಗೊಂಡಿದೆ.
ಈಗ ಟೈಲರ್ ಬಿಡುಗಡೆಗೊಂಡಿದೆ , ನಮ್ಮ ಚಿತ್ರದ ದೇವಿ ಹಾಡು ಕೂಡ ಬಹಳ ಸೊಗಸಾಗಿ ಬಂದಿದೆ.
ಅದೇ ರೀತಿ ಕಥೆಗೆ ಪೂರಕವಾಗಿ ಎಲ್ಲಾ ಕಲಾವಿದರು ಅಭಿನಯಿಸಿದ್ದಾರೆ, ಚಿತ್ರ ಖಂಡಿತ ಇಷ್ಟವಾಗುತ್ತದೆ. ನಮಗೆ "ಕ ಪಿಚ್ಚರ್" ಪ್ರವೀಣ್ ರವರು ಬೆಂಬಲವಾಗಿ ನಿಂತಿದ್ದಾರೆ. ಈಗ ಹಂತ ಹಂತವಾಗಿ ಪ್ರಚಾರವು ನಡೆಯುತ್ತಿದೆ. ನಮ್ಮ ಚಿತ್ರ ನವಂಬರ್ 7ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ , ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.
ಈ ಚಿತ್ರದ ನಾಯಕಿ ಪ್ರಕೃತಿ ಪ್ರಸಾದ್ ಮಾತನಾಡುತ್ತಾ ಈ ಚಿತ್ರದಲ್ಲಿ ನನಗೆ ಸಿಕ್ಕಿರುವ ಪಾತ್ರ ಬಹಳ ವಿಭಿನ್ನವಾಗಿದೆ. ನಾನು ಸೀರಿಯಲ್ ಗಳನ್ನ ಮಾಡುತ್ತಾ ಸಿನಿಮಾರಂಗಕ್ಕೆ ಬಂದವಳು , ಇದು ನನ್ನ ಎರಡನೇ ಚಿತ್ರ. ಈ ಚಿತ್ರದಲ್ಲಿ ಅಪ್ಪ ಮಗಳ ಬಾಂಧವ್ಯದ ಕುರಿತು ಹೇಳುವುದರ ಜೊತೆಗೆ ಧಾರ್ಮಿಕ , ವೈಜ್ಞಾನಿಕ ವಿಚಾರವೂ ಇದೆ. ನನ್ನ ಪಾತ್ರವೂ ವಿದ್ಯಾವಂತ ಹುಡುಗಿ ಸಿಟಿಯಿಂದ ಹಳ್ಳಿಗೆ ಹೋಗಿ ಅಲ್ಲಿ ನಡೆಯುವ ಒಂದಷ್ಟು ಘಟನೆಗಳಿಗೆ ಹೇಗೆ ಸಾಕ್ಷಿಯಾಗಿ ಎದುರಿಸುತ್ತಾಳೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇಡೀ ತಂಡ ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿದೆ. ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು. ಈ ಚಿತ್ರದಲ್ಲಿ
ಶರತ್ ಲೋಹಿತಾಶ್ವ ನಾಯಕನ ತಂದೆಯ ಪಾತ್ರದಲ್ಲಿದ್ದು, ಮಾಲೂರು ವಿಜಯ್ , ಚಿಲ್ಲರ್ ಮಂಜು , ಬಲರಾಜವಾಡಿ, ಸಂಗೀತ ಅನೀಲ್ , ರಂಗಭೂಮಿ ಪ್ರತಿಭೆ ಗೀತಾ, ಹಿತೇಶ್ ಅಭಿಷೇಕ್ ಆರ್ಯ, ವಿನೋದ್, ದರ್ಶನ್ ಶೆಟ್ಟಿ , ಮನೋಜ್ ಕುಮಾರ್ ಸೇರಿದಂತೆ ಹಲವರು ಅಭಿನಯಿಸಿದ್ದಾರಂತೆ. ಈ ರೋಣ ಚಿತ್ರ ಸತೀಶ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ. ಬಿ.ಕೆ.ಆರ್ ಪ್ರೊಡಕ್ಷನ್ಸ್ ಅಂಡ್ ಟೀಮ್ ನಿರ್ಮಾಣದಲ್ಲಿ ಕನ್ನಡ ಪಿಚ್ಚರ್ ಅರ್ಪಿಸ್ತಿದೆ. ಅರುಣ್ ಕುಮಾರ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಗಗನ್ ಬದೇರಿಯ ಸಂಗೀತ ಸಂಯೋಜಿಸಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್,ಕಿನ್ನಾಳ ರಾಜ್ ಸಾಹಿತ್ಯವಿದೆ. ರಮೇಶ್ ನೀಡಿರುವ ಕಥೆಗೆ ಚಿತ್ರಕಥೆ , ಸಂಭಾಷಣೆ ಆದೇಶ್ವರ್ ಬರೆದಿದ್ದಾರೆ. ಒಂದು ಉತ್ತಮ ಕಥೆಯನ್ನು ಒಳಗೊಂಡಿರುವ ಈ ರೋಣ ಚಿತ್ರ ನವಂಬರ್ 7ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.