The Task.Film News

Sunday, October 26, 2025

 

*ನಿರೀಕ್ಷೆ ಹೆಚ್ಚಿಸಿದ ’ದಿ ಟಾಸ್ಕ್’ ಟೀಸರ್...ನವೆಂಬರ್ 21ಕ್ಕೆ ರಾಘು ಶಿವಮೊಗ್ಗ ಮೂರನೇ ಪ್ರಯತ್ನ ತೆರೆಗೆ ಎಂಟ್ರಿ*

 

 

*ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಸಿನಿಮಾ ದಿ ಟಾಸ್ಕ್ ಟೀಸರ್ ಅನಾವರಣ*

 

 

ಬೆಳ್ಳಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಾಘು ಶಿವಮೊಗ್ಗ ನಿರ್ದೇಶಿಸಿರುವ ಮೂರನೇ ಸಿನಿಮಾ ದಿ ಟಾಸ್ಕ್ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ನವೆಂಬರ್ 21ಕ್ಕೆ ತೆರೆಗೆ ಎಂಟ್ರಿ ಕೊಡಲಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಜಿಟಿ‌ ಮಾಲ್‌ನಲ್ಲಿ ಜರುಗಿದೆ. ಕಾರ್ಯಕ್ರಮದಲ್ಲಿ ADGP ಎಂ ಚಂದ್ರಶೇಖರ್, ಲಹರಿ ಸಂಸ್ಥೆಯ ಲಹರಿ ವೇಲು, ವಿಷ್ಣು ಸೇನೆಯ ವೀರಕಪುತ್ರ ಶ್ರೀನಿವಾಸ್ ,‌ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಭಾಗಿಯಾಗಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

 

ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಎಂ ಚಂದ್ರಶೇಖರ್,

 ಟಾಸ್ಕ್ ಅಂದರೆ ಆಪರೇಷನ್, ಮಿಷನ್. ಇದನ್ನು ಯುನಿಫಾರ್ಮ್ ಸರ್ವೀಸ್ ನಲ್ಲಿ ಇದನ್ನು ಬಳಸುತ್ತಾರೆ. ಯಾವುದೇ ಒಂದು ಸಿನಿಮಾದಲ್ಲಿ ಮೆಸೇಜ್ ಇರಬೇಕು. ಇದರಿಂದ ಸಮಾಜದಲ್ಲಿ ಪ್ರಭಾವ ಜಾಸ್ತಿ ಇರುತ್ತದೆ. ಕೇವಲ ಎಂಟರ್ಟೈನ್ಮೆಂಟ್ ಅಲ್ಲದೇ ಒಂದು ಮೆಸೇಜ್ ಇರುವ ಸಿನಿಮಾ ದಿ ಟಾಸ್ಕ್. ಒಂದು ಸಿನಿಮಾ ಮಾಡಲು ಸಾಕಷ್ಟು ಕಷ್ಟ ಇರುತ್ತದೆ. ಇಬ್ಬರು ನಾಯಕರಿಗೆ ಒಳ್ಳೆಯದಾಗಲಿ. ಟೀಸರ್ ಚೆನ್ನಾಗಿದೆ. ಒಳ್ಳೆ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಒಳ್ಳೆ ತಾರಾ ಬಳಗ ಇದೆ ಎಂದರು.

 

ಪವನ್ ಒಡೆಯರ್ ಮಾತನಾಡಿ, ಟೀಸರ್ ಪ್ರಾಮಿಸಿಂಗ್ ಆಗಿದೆ. ಇಬ್ಬರು ನಾಯಕರು ಸ್ಕ್ರೀನ್‌ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಬರವಣಿಗೆ, ಸಿನಿಮಾ ಮೇಕಿಂಗ್ ಗೆ ರಾಘು ಸರ್ ಒತ್ತು‌ ನೀಡುತ್ತಾರೆ. ಚಿತ್ರರಂಗಕ್ಕೆ ಮಕ್ಕಳು ಹೋಗ್ತಾರೆ ಎಂದರು ತಂದೆ ತಾಯಿ ಬೇಡ ಎನ್ನುತ್ತಾರೆ. ಈ ವಿಚಾರದಲ್ಲಿ ರಾಜೇಶ್ ಸರ್ ಮಗ ಅದೃಷ್ಟ ಮಾಡಿದ್ದಾರೆ. ಅವರ ತಂದೆ ಮಗನ ಸಿನಿಮಾ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ದಿ ಟಾಸ್ಕ್ ಚಿತ್ರ ಸೂಪರ್ ಹಿಟ್ ಆಗಲಿ ಎಂದರು.

 

 

ಚೇತನ್ ಕುಮಾರ್ ಮಾತನಾಡಿ, ಟೀಸರ್ ನೋಡಿದ್ರೆ ಟೆರಿಫಿಕ್ ಆಗಿದೆ. ಕಥೆ ನೀವು ಗೆಸ್ ಮಾಡಿ ಎಂದು ಡೈರೆಕ್ಟರ್ ಟಾಸ್ಕ್ ಕೊಟ್ಟಿದ್ದಾರೆ. ಇಬ್ಬರು ಹೀರೋಗಳನ್ನು ನೋಡಿದ್ರೆ ಎರಡು ಹುಲಿಗಳನ್ನು ನೋಡಿದ ರೀತಿ ಆಗುತ್ತದೆ. ರಾಘು ಶಿವಮೊಗ್ಗ ಅಭಿನಯ ಎಷ್ಟೋ ನೈಜವಾಗಿ ಇರುತ್ತದೆಯೋ ಅವರು ಆಯ್ಕೆ ಮಾಡಿಕೊಳ್ಳುವ ಕಥೆ ಕೂಡ ನೈಜವಾಗಿ ಇರುತ್ತದೆ. ಕಥೆ ಮೇಲೆ ನಿರೀಕ್ಷೆ ಇದೆ. ಅವರು ಯಾವುದೇ ಸಿನಿಮಾ ಮಾಡಿದರೂ ಕೊನೆ ಸೀನ್ ತನಕ ಹೋಲ್ಡ್ ಮಾಡಿ ಇಡುತ್ತಾರೆ. ಟೆಕ್ನಿಕಲ್ ಟೀಂ ಸ್ಟ್ರಾಂಗ್ ಆಗಿದೆ. ಒಳ್ಳೆ ಕಲಾ ಬಳಗ ಚಿತ್ರದಲ್ಲಿದೆ ಎಂದರು.

 

ಸಿಂಪಲ್ ಸುನಿ ಮಾತನಾಡಿ, ಜಯಸೂರ್ಯ ಮಿಸ್ಟರ್ ಸ್ಯಾಂಡಲ್ ವುಡ್. ಸಾಗರ್ ಪೆಂಟಗನ್ ಸಿನಿಮಾ ಬಳಿಕ ದಿ ಟಾಸ್ಕ್ ನಟಿಸಿದ್ದಾರೆ. ರಾಘು ಸರ್ ಡೈರೆಕ್ಟರ್ ಆಗುವ ಮುಂಚೆಯೇ ಇಂಡಸ್ಟ್ರಿಗೆ  ಗೊತ್ತಿತ್ತು. ಅವರ ಶಾರ್ಟ್ ಮೂವೀ ಸ್ಟೇಟ್ ಅವಾರ್ಡ್ ತೆಗೆದುಕೊಂಡವರು.‌ ಅವರ ಚೂರಿ ಕಟ್ಟೆ ಮೂವೀ ಒಳ್ಳೆ ಕಲ್ಟ್ ಸಿನಿಮಾ. ಇದೀಗ ಟಾಸ್ಕ್ ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.

 

ನಿರ್ದೇಶಕ ರಾಘು ಶಿವಮೊಗ್ಗ ಮಾತನಾಡಿ, ದಿ ಟಾಸ್ಕ್ ಚಿತ್ರವಾಗಲು ನಿರ್ಮಾಪಕರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬ ಟೆಕ್ನಿಷಿಯನ್ ಈ ಚಿತ್ರಕ್ಕೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ದಿ ಟಾಸ್ಕ್ ಆಕ್ಷನ್ ಥ್ರಿಲ್ಲರ್ ಜಾನರ್. ಹಲವು ನೈಜ ಘಟನೆ ಇಟ್ಕೊಂಡು ಕಥೆ ಎಣೆದಿದ್ದೇನೆ ಎಂದು ಮಾಹಿತಿ ನೀಡಿದರು.

 

 

ಈ ಹಿಂದೆ ರಾಘು ಶಿವಮೊಗ್ಗ ನಿರ್ದೇಶನದ ಪೆಂಟಗನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಸಾಗರ್ ಹಾಗೂ ಭೀಮ ಚಿತ್ರದಲ್ಲಿ ಖಳನಾಯಕನಾಗಿ ಪರಿಚಯರಾಗಿದ್ದ ಜಯಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮೀ, ಅರವಿಂದ್ ಕುಪ್ಳಿಕರ್,  ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್, ಸಂಪತ್ ಮೈತ್ರಿಯಾ, ಬಿ ಎಂ ಗಿರಿರಾಜ್, ಭರತ್ ಜಿಬಿ, ಪಿಡಿ ಸತೀಶ್ ಚಂದ್ರ,‌ಕಿರಣ್ ನಾಯ್ಕ್, ಅಶ್ವಿನ್ ಹಾಸನ್ ಸೇರಿದಂತೆ ನಿರ್ದೇಶಕ ರಾಘು ಶಿವಮೊಗ್ಗ ಕೂಡಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

 

ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಅವರು ದಿ ಟಾಸ್ಕ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಪ್ರಕಾಶ್ ಕಾರಿಂಜ ಸಂಕಲನ ಚಿತ್ರಕ್ಕಿದೆ.

 

 

*ಹೇಗಿದೆ ಟೀಸರ್*?

 

ದಿ ಟಾಸ್ಕ್ ಆಕ್ಷನ್ ಪ್ಯಾಕ್ಡ್ ಟೀಸರ್ ಕುತೂಹಲ ಹೆಚ್ಚಿಸಿದೆ. ಎಲ್ಲಿಯೂ ಕಥೆಯ ಗುಟ್ಟುಬಿಟ್ಟು ಕೊಡದೇ ಟೀಸರ್ ಕಟ್ ಮಾಡಲಾಗಿದೆ. ನೈಜ ಘಟನೆ ಸ್ಫೂರ್ತಿ ಆಧಾರಿತ ರಾಘು ಶಿವಮೊಗ್ಗ ದಿ ಟಾಸ್ಕ್ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,