Haldwani.News

Saturday, October 25, 2025

 

*ನಾದಬ್ರಹ್ಮ‌ ಹಂಸಲೇಖ ಅವರ ಐದನಿ ಎಂಟರ್ಟೈನ್ಮೆಂಟ್ ಸಂಸ್ಥೆಯ ಐದನಿ ಚಿನ್ನದ ಪದಕ್ಕೆ  ಪ್ರಾಗೈತಿಹಾಸಿಕ ತಜ್ಞ ಪ್ರೊ.ರವಿ ಕೋರಿಶೆಟ್ಟರ್ ಆಯ್ಕೆ*

 

 

*ಈ ಬಾರಿಗೆ ಐದನಿ ಚಿನ್ನದ ಪದಕ್ಕೆ ಪ್ರಾಗೈತಿಹಾಸಿಕ ತಜ್ಞ ಪ್ರೊ.ರವಿ ಕೋರಿಶೆಟ್ಟರ್ ಆಯ್ಕೆ..ಇದು

ಹಂಸಲೇಖ ಸಂಸ್ಥೆಯ ಕಾಣಿಕೆ*

 

 

ನಾದಬ್ರಹ್ಮ ಹಂಸಲೇಖ ಅವರ ಐದನಿ ಎಂಟರ್ಟೈನ್ಮೆಂಟ್ ಸಂಸ್ಥೆಯೂ ಪ್ರತಿ ವರ್ಷ ಒಬ್ಬಬ್ಬೊ ಸಾಧಕರಿಗೆ ಜೀವಮಾನದ ಸಾಧನೆಗಾಗಿ ನೀಡುವ ’ಐದನಿ ಚಿನ್ನದ ಪದಕ’‌ ನೀಡಿ ಗೌರವುಸುತ್ತಾ ಬಂದಿದೆ. ಈ ಮೊದಲ ಗೌರವವನ್ನು  ಡಾ ಶಿವರಾಜ್ ಕುಮಾರ್ ಅವರಿಗೆ, ಎರಡನೆಯದಾಗಿ ಹಿರಿಯ ನಿರ್ದೇಶಕರಾದ ಶ್ರೀ ರಾಜೇಂದ್ರ ಸಿಂಗ್ ಬಾಬು ಅವರಿಗೆ ನೀಡಿತ್ತು. ಇದೀಗ ಮೂರನೆಯವರಾಗಿ ಪ್ರಾಗೈತಿಹಾಸಿಕ ತಜ್ಞ ಡಾ ರವಿ ಕೋರಿ ಶೆಟ್ಟರ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಕುರಿತ ಬೆಂಗಳೂರಿನಲ್ಲಿ ನಿನ್ನೆ ನಡೆದ ಸುದ್ದಿ ಗೋಷ್ಠಿಯಲ್ಲಿ ಘೋಷಿಸಲಾಯಿತು.

ಈ ವೇಳೆ‌ ಮಾತನಾಡಿದ ಹಂಸಲೇಖ,  ನವೆಂಬರ್ 14 ರಂದು ಬಳ್ಳಾರಿಯ ಸಂಗನಕಲ್ಲು ಪುರಾತತ್ವ ಮ್ಯೂಸಿಯಂ ಎದುರು ರವಿ ಕೋರಿಶೆಟ್ಟರ್ ಅವರಿಗೆ ಐದನಿ ಚಿನ್ನದ ಪದಕ ನೀಡಿ ಗೌರವಿಸಲಿದ್ದೇವೆ. ಪದ್ಮಶ್ರೀ ಪ್ರಶಸ್ತಿಗೆ ಅರ್ಹರಾಗಿರುವ ಕೋರಿಶೇಟ್ಟರ್ ಅವರಿಗೆ ಇನ್ನೂ ಸಹ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ವಿಷಾದನೀಯ.

ಮತ್ತು ಈಗಿನ ಸರ್ಕಾರ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಿಲೆಂದು ಹಂಸಲೇಖ ಅವರು ಆಗ್ರಹಿಸಿದರು.

 

ರವಿ ಕೋರಿ ಶೆಟ್ಟರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ   ಹಂಸಲೇಖ ಅವರು ಮಾತಾನಾಡಿರುವುದಾಗಿ ತಿಳಿಸಿದರು.

 

ಸುದ್ದಿಗೋಷ್ಟಿಯಲ್ಲಿ ಡಾ.ಹಂಸಲೇಖ,   ಹರ್ಷಕುಮಾರ್ ಕುಗ್ವೆ ಮತ್ತು ಇತಿಹಾಸ ದರ್ಪಣ ಪತ್ರಿಕೆ ಸಂಪಾದಕರಾದ ಹಂ.ಗು.ರಾಕೇಶ್ ಉಪಸ್ಥಿತರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,