*ಭಾರತಿ ಟೀಚರ್ ಏಳನೇ ತರಗತಿ ಹಾಡುಗಳ ಲೋಕಾರ್ಪಣೆ*
*ಭಾರತಿ ಟೀಚರ್ ಏಳನೇ ತರಗತಿ* ಚಿತ್ರದ ಡಾ.ವಿ.ನಾಗೇಂದ್ರ ಪ್ರಸಾದ್ ಒಡೆತನದ ’ಮ್ಯೂಸಿಕ್ ಬಜಾರ್’ ಹೊರತಂದಿರುವ ಐದು ಗೀತೆಗಳ ಬಿಡುಗಡೆ ಕಾರ್ಯಕ್ರಮ ನ್ಯಾಷನಲ್ ಕಾಲೇಜು, ಡಾ.ಹೆಚ್.ನರಸಿಂಹಯ್ಯ ಸಭಾಂಗಣದಲ್ಲಿ ಅದ್ದೂರಿಯಾಗಿ ಶಾಲಾ ಮಕ್ಕಳ ಸಮ್ಮುಖದಲ್ಲಿ ನಡೆದಿದ್ದು ವಿಶೇಷ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದಾವಣಗೆರೆ ಮೂಲದ ಡಾ.ವಿ.ವಿಜಯಲಕ್ಷೀ ಮತ್ತು ಉದ್ಯಮಿ ವೀರಕಪುತ್ರ ಶ್ರೀನಿವಾಸ್ ತಲಾ ಒಂದೊಂದು ಹಾಡುಗಳನ್ನು ಲೋಕಾರ್ಪಣೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಸಿರಗುಪ್ಪ ಮೂಲದ ಉದ್ಯಮಿ *ರಾಘವೇಂದ್ರ ರೆಡ್ಡಿ ಅವರು ಪೂಜ್ಯಾಯ ಫಿಲಂಸ್ ಅಡಿಯಲ್ಲಿ ನಿರ್ಮಾಣ* ಮಾಡುತ್ತಿರುವುದು ಹೊಸ ಅನುಭವ. *ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ಸಂಗೀತ ಮತ್ತು ನಿರ್ದೇಶನವನ್ನು ಎಂ.ಎಲ್.ಪ್ರಸನ್ನ* ನಿರ್ವಹಿಸಿದ್ದಾರೆ. ಕ್ರಿಷಿ ಸಂಸ್ಥೆಯ ವೆಂಕಟ್‌ಗೌಡ ಕ್ರಿಯೇಟೀವ್ ಹೆಡ್ ಆಗಿರುತ್ತಾರೆ.
ಶಿಕ್ಷಕರಾಗಿ ಸಿಹಿಕಹಿಚಂದ್ರು, ಟೈಟಲ್ ರೋಲ್‌ದಲ್ಲಿ ಕು.ಯಶಿಕಾ, ಗೋವಿಂದೇಗೌಡ, ಅಶ್ವಿನ್‌ಹಾಸನ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಅಂಚನ್, ಬೆನಕಾ ನಂಜಪ್ಪ, ರೋಹಿತ್‌ರಾಘವೇಂದ್ರ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಎಂ.ಬಿ.ಹಳ್ಳಿಕಟ್ಟಿ, ಸಂಕಲನ ಸುಜಿತ್‌ನಾಯಕ್, ವಾದ್ಯ ಸಂಯೋಜನೆ ಕೆ.ಎಂ.ಇಂದ್ರ, ನೃತ್ಯ ಕಂಬಿರಾಜ್, ಕಾರ್ಯಕಾರಿ ನಿರ್ಮಾಪಕ ರಾಘವ್‌ಸೂರ್ಯ-ದರ್ಶನ್‌ಗೌಡ ಅವರದಾಗಿದೆ.
ರಾಘವೇಂದ್ರ ರೆಡ್ಡಿ ಅವರು ಕನ್ನಡದ ಮೇಲಿನ ಅಭಿಮಾನದಿಂದ ಬಂಡವಾಳ ಹೂಡಿದ್ದಾರೆ. ನನ್ನದೆ ಆಡಿಯೋ ಕಂಪೆನಿ ’ಮ್ಯೂಸಿಕ್ ಬಜಾರ್’ನಿಂದ ಹಾಡುಗಳು ಹೊರಬರುತ್ತಿದೆ. ಇಲ್ಲಿಯತನಕ ಟ್ರಯಲ್ ಆಗಿದ್ದು, ಇನ್ನು ಮುಂದೆ ಚಿತ್ರದ ಹಾಡುಗಳು, ಆಲ್ಬಂ ಗೀತೆಗಳು ಬರಲಿದೆ. ನಾನು ವ್ಯಾಪರಸ್ಥನಲ್ಲ. ಕಲಾವಿದ. ಕಲಾವಿದನ ಕಂಪೆನಿ ಹೇಗಿರುತ್ತೆ. ಪ್ರೀತಿ ಹೆಚ್ಚು ಇರುತ್ತೆ. ಕಲೆಗೆ ಜಾಸ್ತಿ ಪ್ರೋತ್ಸಾಹ ಕೊಡುತ್ತೇನೆಂದು ಡಾ.ವಿ.ನಾಗೇಂದ್ರಪ್ರಸಾದ್ ಹೇಳಿಕೊಂಡರು.
ನಿರ್ದೇಶಕರು ಮಾತನಾಡಿ ಭಾರತಿ ಎನ್ನುವ ಏಳನೇ ತರಗತಿ ವಿದ್ಯಾರ್ಥಿಯೊಬ್ಬಳು ತನ್ನ ಊರಿನವರೆಲ್ಲರನ್ನು ಸಾಕ್ಷರನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಾಳೆ. ಈ ಹಾದಿಯಲ್ಲಿ ಆಕೆ ಎದುರಿಸತಕ್ಕಂತ ನೋವು, ಅವಮಾನ ಎಲ್ಲವು ಆಗಿ, ಕೊನೆಗೆ ಹೇಗೆ ಗೆದ್ದು ನಿಲ್ಲುತ್ತಾಳೆ ಎಂಬುದು ಒಂದು ಎಳೆಯ ಸಾರಾಂಶವಾಗಿದೆ. ಇಲ್ಲಿಯವರೆಗೂ ಮೂವತ್ತ ನಾಲ್ಕು ದಿನಗಳ ಚಿತ್ರೀಕರಣ ನಡೆಸಲಾಗಿದೆ. ಹಾಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜಿಲ್ಲಾದಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಅವರ ಭಾಗದ ಮತ್ತು ಕನ್ನಡಿಗ ಹಾಡಿನ ಶೂಟಿಂಗ್ ಬಾಕಿ ಇದೆ. ಒಟ್ಟು ಹತ್ತು ಗೀತೆಗಳು ಇರಲಿದ್ದು, ಎಲ್ಲವನ್ನು ಚಿತ್ರದಲ್ಲಿ ಉಪಯೋಗಿಸಿಕೊಳ್ಳಲಾಗಿದೆ ಎಂದು ಎಂ.ಎಲ್.ಪ್ರಸನ್ನ ಮಾಹಿತಿ ನೀಡಿದರು.
ವೆಂಕಟ್‌ಗೌಡ ನಿರ್ಮಾಪಕರ ಕಾರ್ಯವೈಖರಿಯನ್ನು ಮೆಚ್ಚಿಕೊಂಡು, ಇಂತವರು ಚಿತ್ರರಂಗಕ್ಕೆ ಅಗತ್ಯವಾಗಿದೆ. ನವೆಂಬರ್ ತಿಂಗಳಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದೇವೆ ಎಂದರು.