DDD.Film News

Sunday, October 19, 2025

 

*ಧೈರ್ಯಂ ಧರ್ಮಂ ದೇಶಂ ಇವು ಸಮಾಜದ ಅಂಗಗಳು*

 

        ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ *DDD* ಚಿತ್ರದ ಟ್ರೇಲರ್ ಮತ್ತು ನಾಲ್ಕು ಹಾಡುಗಳ ಬಿಡುಗಡೆ ಕಾರ್ಯಕ್ರಮ ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಹೊಸರುದಲ್ಲಿ ಸಗಟು ತರಕಾರಿ ವ್ಯಾಪಾರ ಮಾಡುತ್ತಿರುವ *ಕೆ.ಬಿ.ಮಂಜುನಾಥ್ ಸಿನಿಮಾಕ್ಕೆ ಕಥೆ,ನಿರ್ದೇಶನ ಅಲ್ಲದೆ ಕೆಬಿಎಂ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ* ಮಾಡಿದ್ದಾರೆ. ಮಹೇಶ್ ಹಾಗೂ ಚಂದ್ರಣ್ಣ ಸಹ ನಿರ್ಮಾಪಕರು.

 

       ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಇಲ್ಲಿಯವರೆಗೆ ಎರಡು ಕಿರುಚಿತ್ರಗಳನ್ನು ಮಾಡಿದ್ದೇನೆ. ಇದು ನನಗೆ ಮೊದಲ ಹಿರಿತೆರೆಯ ಅನುಭವ. ಸಾಮಾನ್ಯ ಪ್ರಜೆಯಾದವನು ಧೈರ್ಯ ಮಾಡಬೇಕು. ಅಧಿಕಾರಿಗಳು ಧರ್ಮವನ್ನು ಕಾಪಾಡಬೇಕು. ಯೋಧನಾದವನು ದೇಶವನ್ನು ಕಾಪಾಡಬೇಕು. ಇವುಗಳು ಸಮಾಜದ ಮೂರು ಅಂಗಗಳಾಗಿದೆ. ಅದಕ್ಕಾಗಿ ’DDD’ ಎಂದು ಶೀರ್ಷಿಕೆ ಇಡಲಾಗಿದೆ. ನಾವುಗಳು ಸಮಾಜವನ್ನು ಹೇಗೆ ನೋಡಿಕೊಳ್ಳಬೇಕು. ಅವಘಡಗಳು ಆದಾಗ ಅದನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಹೇಳಲಾಗಿದೆ. ಮಾನವಿಯತೆ, ಪ್ರೀತಿ, ಸಂಬಂಧಗಳ ಬೆಲೆ ಇನ್ನು ಮುಂತಾದವನ್ನು ಐದು ಹಾಡುಗಳಲ್ಲಿ ತೋರಿಸಲಾಗಿದೆ. ಇದು ಸಾರ್ವತ್ರಿಕ ವಿಷಯವಾಗಿರುವುದರಿಂದ ಐದು ಭಾಗಗಳಿಗೆ ಈಗಾಗಲೇ ಚಿತ್ರಕಥೆ ಸಿದ್ದಪಡಿಸಿದ್ದೇನೆ. ಮೊದಲನೆ ಭಾಗ ಇದಾಗಿರುತ್ತದೆ. ಮಾಧ್ಯಮದ ಸಹಕಾರ ಬೇಕೆಂದು ಕೋರಿಕೊಂಡರು.

      ಅರುಣ್‌ವೆಂಕಟರಾಜು ನಾಯಕನಾಗಿ ಎರಡನೇ ಅವಕಾಶ. ಶಿವಮೊಗ್ಗದ ಗಗನಮಲ್ನಾಡ್ ನಾಯಕಿ. ಇನ್ಸ್‌ಪೆಕ್ಟರ್ ಆಗಿ ರಘುಶಿವಮೊಗ್ಗ, ಉಳಿದಂತೆ ಚಾರ್ಲ್ಸ್ ಟೋನಿ, ಸುರೇಶ್‌ಬಾಬು,  ಡಿವಿ.ನಾಗರಾಜು, ಸುರೇಶ್‌ಬಾಬು, ರೋಹಿಣಿ ಮುಂತಾದವರು ಅಭಿನಯಿಸಿದ್ದಾರೆ.

 

       ಬಹದ್ದೂರ್ ಚೇತನ್‌ಕುಮಾರ್, ಗಜೇಂದ್ರ, ಸಂಜಯ್ ಮತ್ತು ಲಕ್ಷಿದಿನೇಶ್ ಸಾಹಿತ್ಯದ ಐದು ಗೀತೆಗಳಿಗೆ ಸೂರಜ್‌ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ.  ಛಾಯಾಗ್ರಹಣ ಎಸ್.ಕೆ.ಮಸ್ತಾನ್ ಷರೀಫ್, ಸಂಕಲನ ಧನುಷ್.ಎಲ್.ಬೇಡಿ ಅವರದಾಗಿದೆ. ಬೆಂಗಳೂರು, ಮಂಗಳೂರು, ಕೊಳ್ಳೆಗಾಲ ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.

 

      ಸಚಿತ್ ಫಿಲಿಂಸ್‌ನ ವೆಂಕಟ್‌ಗೌಡ ಸಾರಥ್ಯದಲ್ಲಿ ನವೆಂಬರ್ ತಿಂಗಳಲ್ಲಿ ಸುಮಾರು 40 ಕೇಂದ್ರಗಳಲ್ಲಿ ಸಿನಿಮಾವು ತೆರೆ ಕಾಣಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,