Love Otp.Film News

Saturday, October 18, 2025

 

ಅನೀಶ್ ತೇಜೇಶ್ಬರ್ ನಟನೆ, ನಿರ್ದೇಶನದ "ಲವ್ ಒಟಿಪಿ"  ನವೆಂಬರ್ 14 ರಂದು ತೆರೆಗೆ

 

 

ಕನ್ನಡ ಚಿತ್ರರಂಗದ ಭರವಸೆಯ ನಾಯಕ ನಟ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ " ಲವ್ ಒಟಿಪಿ  ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಚಿತ್ರ ನವಂಬರ್ 14 ರಂದು ತೆರೆಗೆ ಬರಲು ಸಜ್ಜಾಗಿದೆ.

 

ತಂದೆ - ಮಗನ‌ ಸಂಬಂಧ, ಪ್ರೀತಿ, ಪ್ರೇಮ ಸೇರಿದಂತೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ.  65 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

 

ಲವ್ ಒಟಿಪಿ" ಚಿತ್ರದ ಮೂಲಕ  ತೆಲುಗು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಿರುವ ಲವ್ ಒಟಿಪಿ ಚಿತ್ರ ನವಂಬರ್ 14 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಮಾಹಿತಿ ಹಂಚಿಕೊಂಡರು.

 

ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಮಾತನಾಡಿ ಸ್ನೇಹಿತ ವಿಜಯ್ ರೆಡ್ಡಿ ಅವರ ಸಹಕಾರದಿಂದ‌ ಉತ್ತಮ ಚಿತ್ರ ಮಾಡಿದ್ದೇನೆ. ಚಿತ್ರದ ನೋಡಿದ ಮಂದಿ ಗುಣಮಟ್ಟದ ವಿಷಯದಲ್ಲಿ ಕಥೆ, ನಿರೂಪಣೆ ವಿಷಯದಲ್ಲಿ ಎಲ್ಲಿಯೂ ರಾಜೀ ಮಾಡಿಕೊಂಡಿಲ್ಲ. ತೆಲುಗಿನ ಹಿರಿಯ ಕಲಾವಿದ ರಾಜೀವ್ ಕನಕಾಲ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ  ಡಬ್ ಮಾಡಿದ್ದಾರೆ.   ರವಿ ಭಟ್ ,ಪ್ರಮೋದಿನಿ, ತುಳಸಿ  ,ಚೇತನ್, ಸ್ವರೂಪಿಣಿ, ಜಾನ್ವಿಕಾ  ನಟಿಸಿದ್ದಾರೆ. ಒಬ್ಬರಿಗಿಂತ ಒಬ್ಬರು ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿಯಿಸಿದ್ದಾರೆ. ಚಿತ್ರ ನೋಡಿದ ಎಲ್ಲರಿಗೂ ಚಿತ್ರ ಇಷ್ಡವಾಗಲಿದೆ ಎಂದರು

ನಟಿ ಜಾನ್ವಿಕಾ ಮಾತನಾಡಿ, ಕನ್ನಡದಲ್ಲಿ ಮೂರನೇ ಚಿತ್ರ. ಕನ್ನಡ ಮತ್ತು ತೆಲುಗಿನಲ್ಲಿ  ನಟಿಸಿದ್ದೇನೆ. ಪ್ರಮೋದಿನಿ, ತುಳಿಸಿ,  ಸೇರಿದಂತೆ ಅನಕ ಹಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ ,ಫಿಸಿಯೋ ಥೆರಪಿಸ್ಟ್ ಪಾತ್ರ ಮಾಡಿದ್ದೇನೆ ಪಾತ್ರ ಸವಾಲಿನಿಂದ ಕೂಡಿತ್ತು ಎಂದರು

 

ನಿರ್ಮಾಪಕ ವಿಜಯ್ ರೆಡ್ಡಿ ಮಾತನಾಡಿ ಅನೀಶ್ ಜೊತೆ ಸಿನಿಮಾ‌ ಮಾಡಲು ದೊಡ್ಡ ಕಥೆ ಇದೆ. 16 ವರ್ಷದಲ್ಲಿ ನಾವಿಬ್ಬರೂ ಸ್ನೇಹಿತರು, ಚಾಮುಂಡಿ ದೇವಿ ದರ್ಶನಕ್ಕೆ ಹೋದಾಗ ಕಥೆ ಕೇಳಿ ಇಷ್ಡವಾಗಿ ಸಿನಿಮಾ ಮಾಡಿದ್ದೇವೆ. ಭಾವಪ್ರೀತ ಎಂದರೆ ಭ್ರಮಾಂಡದಿಂದ ಪ್ರೀತಿಸಲ್ಪಟ್ಟವರು  ಎಂದರ್ಥ ಹಾಗಾಗಿ ಸಿನಿಮಾ‌ ಸಂಸ್ಥೆ ಹೆಸರಲ್ಲಿ ಚಿತ್ರ ಮಾಡಿದ್ದೇವೆ. ಕಥೆ ಸೃಷ್ಟಿ ಆದಾಗ ಸಿನಿಮಾಗೆ ಬೇಕಾದ ಪಾತ್ರವನ್ನು ಆಯ್ಕೆ ಮಾಡಿಕೊಂಡಿದೆ ಎಂದರು

 

ಕನ್ನಡ ಮತ್ತು ತೆಲುಗಿನಲ್ಲಿ ಏಕ ಕಾಲದಲ್ಲಿ ಚಿತ್ರೀಕರಣ ಮಾಡಲಾಗಿದೆ.  ಹೊಸ ಹೊಸ ಚಿತ್ರಗಳನ್ನು ಮಾಡುವ ಉದ್ದೇಶವಿದೆ ಎಂದರು

 

ತೆಲುಗು ನಟ ರಾಜೀವ ಕನಕಾಲ ಮಾತನಾಡಿ , ಸೀರಿಯಲ್ಲಿ ನಟಿಸುತ್ತಿದ್ದ ನನ್ನನ್ನು ರಾಜಮೌಳಿ ಅವರು ಸಿನಿಮಾಕ್ಕೆ ಕರೆ ತಂದರು. ಈಗ ಅನೀಶ್ ಕನ್ನಡಕ್ಕೆ ಕರೆತಂದಿದ್ದಾರೆ ನನ್ನ ಪಾಲಿಗೆ ಅನೀಶ್ ಅವರು ರಾಜಮೌಳಿ ಇದ್ದಂತೆ ಎಂದು‌ ಮೆಚ್ಚುಗೆ ವ್ಯಕ್ತಪಡಿಸಿದರು.

 

ಕಲಾವಿದ ರವಿ ಭಟ್ ಮಾತನಾಡಿ, ಕಥೆ ಹೇಳುವಾಗ, ಚಿತ್ರೀಕರಣ ಮಾಡುವಾಗ ಸಿನಿಮಾ ಬಗ್ಗೆ ಇರುವ ಫ್ಯಾಶನ್ ಮತ್ತು ಕಮಿಟ್ ಮೆಂಟ್, ಪೇಮೆಂಟ್ ವಿಷಯ ಎಲ್ಲೂ ಎದುರಾಗದಂತೆ ಕಲಾವಿದರಿಂದ ಕೆಲಸ ತೆಗೆಸುವಲ್ಲಿ ಅನೀಶ್ ನಿಷ್ಣಾತ.  ಚಿತ್ರೀಕರಣದ ಸಮಯದಲ್ಲಿ ಎಂಜಾಯ್ ಮಾಡಿಕೊಂಡು ನಟನೆ ಮಾಡಿದ್ದೇವೆ..  ಸಿನಿಮಾ ಬಿಡುಗಡೆಯಾದಾಗ ಅನೀಶ್ ನಟನೆಗೆ ಅಥೆಂಟಿಕೇಷನ್ ಆಗಲಿ ಎಂದರು

 

ಮತ್ತೊಬ್ಬ ಕಲಾವಿದ ನಾಟ್ಯರಂಗ ಮಾತನಾಡಿ ನಿರ್ದೇಶನದ ಜೊತೆಗೆ ನಾಯಕನಾಗಿ‌ ನಟಿಸಿರುವ ಅನೀಶ್ ಅವರು ಟಾರ್ಚರ್ ಅನುಭವಿಸಿ ಉತ್ತಮ ಚಿತ್ರ ನೀಡಿದ್ದಾರೆ. ನನ್ನ ಪಾತ್ರ ನಗು ಮತ್ತು ಅಳುವಿನ ಸಂಗಮವಿದೆ. ಚಿತ್ರ‌ಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು

 

ಗೀತರಚನೆಕಾರ ನಾಗಾರ್ಜುನ ಶರ್ಮಾ ಸೇರಿದಂತೆ ಹಲವರು ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಡಿತು

 

Copyright@2018 Chitralahari | All Rights Reserved. Photo Journalist K.S. Mokshendra,