Kothalavadi.Film News

Wednesday, July 23, 2025

 

ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ನಿರ್ಮಾಣದ ʼಕೊತ್ತಲವಾಡಿʼ ಟ್ರೇಲರ್‌ ರಿಲೀಸ್‌

 

ಭರವಸೆ ಮೂಡಿಸಿದ ಕೊತ್ತಲವಾಡಿ ಟ್ರೇಲರ್.ಆಗಸ್ಟ್‌ 1ಕ್ಕೆ ಯಶ್‌ ತಾಯಿ ನಿರ್ಮಾಣದ ಚಿತ್ರ ಬಿಡುಗಡೆ

 

ಹೋರಾಟದ ಕಥೆ ಕೊತ್ತಲವಾಡಿ ಟ್ರೇಲರ್..ಭರವಸೆ ಹುಟ್ಟಿಸಿದ ಯಶ್‌ ತಾಯಿ ನಿರ್ಮಾಣದ ಚಿತ್ರ

 

ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಾಣದ ಕೊತ್ತಲವಾಡಿ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ.  ’ಕೊತ್ತಲವಾಡಿ’ ಎಂಬ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ರಾಜಕೀಯ ದಂಗಲ್‌, ಪೊಲೀಸ್‌ ವ್ಯವಸ್ಥೆ,  ಅವಕಾಶವಾದಿತನ, ನಾಯಕನ ಹೋರಾಟ, ಛಲ ಸುತ್ತ ಸಿನಿಮಾ ಸಾಗುತ್ತದೆ. ಹಳ್ಳಿ ಹೈದನಾಗಿ ಪೃಥ್ವಿ ಅಂಬರ್‌ ರಗಡ್‌ ಅವತಾರ ತಾಳಿದ್ದು, ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ ಅದ್ಭುತ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

 

ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ಪುಷ್ಪ ಅರುಣ್‌ ಕುಮಾರ್‌, ಆಗಸ್ಟ್‌ 1ಕ್ಕೆ ಸಿನಿಮಾ ಬರ್ತಿದೆ. ಜನ ಈ ಚಿತ್ರ ಹೇಗೆ ತೆಗೆದುಕೊಳ್ತಾರೋ ಎಂಬ ಭಯವಿದೆ. ಜನ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಸೆಲೆಬ್ರಿಟಿ ಮನೆಯವರಾಗಿ ಭಯ ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಯಶ್‌ಗೆ ಏನೋ ಹೇಳದೇ ಮಾಡಿಲ್ಲ. ಜನ ಒಪ್ಪಿಕೊಂಡರೆ ಅವರಿಗೂ ಖುಷಿ ನಮಗೂ ಖುಷಿ. ಬೇರೆ ದೊಡ್ಡಸ್ತಿಕೆ ಇದರಲ್ಲಿ ಇಲ್ಲ. ಇವೆಲ್ಲಾ ಅಂದುಕೊಳ್ಳಬೇಡಿ. ಮನೆಯಲ್ಲಿರುವ ಬಾಸ್‌ ನೋಡಿ ನಮಗೆ ಸ್ಫೂರ್ತಿ ಪಡೆದು ಸಿನಿಮಾ ಮಾಡಿದ್ದೇವೆ ಎಂದರು.

ನಿರ್ದೇಶಕ ಶ್ರೀರಾಜ್‌ ಮಾತನಾಡಿ, ಖುಷಿ ಅನ್ನೋವುದಕ್ಕಿಂತ ಇದು ಜವಾಬ್ದಾರಿ. ಆಡಿಯನ್ಸ್‌ ನೋಡಿ ಚಿತ್ರಕ್ಕೆ ಪ್ರತಿಕ್ರಿಯೆ ಕೊಡಬೇಕು. ಆಗಸ್ಟ್‌ 1ಕ್ಕೆ ಟ್ರೇಲರ್‌ ಬಿಟ್ಟಿದ್ದೇವೆ. ಈ ಕಥೆ ಶುರುವಾದಾಗ ಪುಷ್ಪ ಅಮ್ಮನ ಚರ್ಚೆ ಮಾಡಿದೆ. ಒಬ್ಬರೇ ಚಿತ್ರತಂಡ ಸೇರಿಕೊಂಡರು. ಯಾವುದಕ್ಕೂ ಕಾಂಪ್ರಮೈಸ್‌ ಆಗಬೇಡ. ನಿನಗೆ ಏನೂ ಬೇಕೋ ಅದು ತೆಗೆದುಕೊಳ್ಳು ಎನ್ನುತ್ತಿದ್ದರು. ಇವತ್ತು ನೀವು ನೋಡುತ್ತಿರುವ ಕ್ವಾಲಿಟಿ, ಕಂಟೆಂಟ್‌ ಕಾರಣ ಪುಷ್ಪ ಅಮ್ಮ. ಈ ರೀತಿ ನಿರ್ಮಾಪಕರು ಕನ್ನಡ ಇಂಡಸ್ಟ್ರೀಗೆ ಬೇಕು ಎಂದು ಹೇಳಿದರು.

 

ಶ್ರೀರಾಜ್ ಕೊತ್ತಲವಾಡಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಟ್ರೇಲರ್‌ ಕ್ವಾಲಿಟಿ ಅದ್ಭುತವಾಗಿದ್ದು, ಒಂದೊಳ್ಳೆ ಕಂಟೆಂಟ್‌ ಚಿತ್ರವನ್ನು ಶ್ರೀರಾಜ್‌ ಮಾಡಿದ್ದಾರೆ. ರಾಜಕೀಯ, ಹಸಿವು, ಬಂಡಾಯ, ಬೆಂಕಿ, ರಕ್ತಸಿಕ್ತ ಕಥೆ ’ಕೊತ್ತಲವಾಡಿ’ ಚಿತ್ರದಲ್ಲಿದೆ. ಟ್ರೈಲರ್‌ನಲ್ಲೇ ನಿಡುವಳ್ಳಿ ಸಂಭಾಷಣೆ ಹೈಲೆಟ್ ಆಗಿದೆ. ಪುಷ್ಪ ಅರುಣ್‌ ಕುಮಾರ್‌ ತಮ್ಮದೇ PA ಪ್ರೊಡಕ್ಷನ್‌ ನಡಿ ಕೊತ್ತಲವಾಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

 

ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಮತ್ತು ಹೀರೋ ಇಂಟ್ರೊಡಕ್ಷನ್ ಹಾಡಿಗೆ ಹಾಗೂ ಹಿನ್ನಲೆ ಸಂಗೀತ ಅಭಿನಂದನ್ ಕಶ್ಯಪ್  ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್‌ ಕಶ್ಯಪ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,