ಹಾಡಿನ ಸಾಲು ಚಿತ್ರದ ಶೀರ್ಷಿಕೆ
ಟಿ.ಪಿಕೈಲಾಸಂ ಸಾಹಿತ್ಯ, ಮೈಸೂರು ಅನಂತಸ್ವಾಮಿ ಗಾಯನ ಮತ್ತು ಸಂಗೀತದ ’ತಿಪ್ಪಾರಳಿ ಬಲುದೂರ’ ಜಾನಪದ ಹಾಡಿನ ಪದವನ್ನು ಬಳಸಿಕೊಂಡು *ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು* ಸಿನಿಮಾ ಸಿದ್ದಗೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಟ್ರೇಲರ್ ಮತ್ತು ಹಾಡಿನ ಬಿಡುಗಡೆ ಸಮಾರಂಭ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಗಾವಿ ಮೂಲದ ಉದ್ಯಮಿ *ಗಿರೀಶ ಪ್ರಕಾಶ ಭಸ್ಮೇ ನಾಯಕನಾಗಿ ನಟಿಸುವ ಜತೆಗೆ ಶ್ರೀ ದಾನಮ್ಮ ದೇವಿ ಫಿಲಂಸ್ ಲಾಂಛನದಲ್ಲಿ ಬಂಡವಾಳ ಹೂಡಿದ್ದಾರೆ* ನಾಲ್ಕು ದಶಕಗಳ ಕಾಲ ಸಹ ನಿರ್ದೇಶನ-ಸಹಾಯಕ ನಿರ್ದೇಶಕರಾಗಿ ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿರುವ *ಕೆ.ಮೋಹನ್ ಕುಮಾರ್ ಕಥೆ,ಚಿತ್ರಕಥೆ, ಸಂಭಾಷಣೆ, ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿ ಬಡ್ತಿ ಎನ್ನುವಂತೆ ಆಕ್ಷನ್ ಕಟ್ ಹೇಳಿದ್ದಾರೆ*. ನಾಯಕಿ ಪಾವನಿ. ಇವರೊಂದಿಗೆ ಮೈಸೂರು ರಮಾನಂದ್, ಆಲಿಶಾ, ಸತೀಶ್‌ಗೌಡ್ರು, ಶೂಟಿಂಗ್ ಕೃಷ್ಣ ಮುಂತಾದವರು ನಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ಪ್ರಕಾಶ ಭಸ್ಮೇ ನಾನು ಹೆಚ್2ಓ, ಶ್ರೀರಾಂಪುರ ಪೋಲೀಸ್ ಸ್ಟೇಷನ್ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ರೋಲ್ ಮಾಡಿದ್ದೇನೆ. ಒಮ್ಮೆ ನಿರ್ದೇಶಕರೊಂದಿಗೆ ಶುರುವಾದ ಪರಿಚಯ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಹೆಸರಿಗೆ ತಕ್ಕಂತೆ ಚಿತ್ರವು ಹಾಸ್ಯ, ಭಾವನೆಗಳು, ಪ್ರೀತಿ ಎಲ್ಲವು ತುಂಬಿಕೊಂಡಿದ್ದು ನೋಡುಗರಿಗೆ ಮನರಂಜನೆ ಕೊಡಲಿದೆ. ನಮ್ಮಗಳ ಕೋರಿಕೆಯನ್ನು ಒಪ್ಪಿಸಿಕೊಳ್ಳಿ ಎಂದರು.
ಸಂಗೀತ ಗೋಪಿ ಕಲಾಕಾರ್, ಛಾಯಾಗ್ರಹಣ ಹೊಸೂರು ಮಂಜು, ಸಾಹಸ ಸಂತೋಷ್ ರಾಥೋಡ್, ನೃತ್ಯ ಡಾಲಿ ರಮೇಶ್ ಅವರದಾಗಿದೆ. ಬೆಂಗಳೂರು, ರಾಮನಗರ, ಹಂದಲಗೆರೆ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡಿರುವ ಚಿತ್ರವನ್ನು ಸದ್ಯದಲ್ಲೆ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.