Kamal Sridevi.News

Sunday, September 14, 2025

 

ಕಮಲ್ ಶ್ರೀದೇವಿ ಪ್ರೀ ರಿಲೀಸ್ ಇವೆಂಟ್

 

ಕಮಲ್ ಶ್ರೀದೇವಿ ಚಿತ್ರ ಇದೇ ವಾರ ಅಂದ್ರೆ 19ನೇ ತಾರೀಖು ರಾಜ್ಯಾದಾದ್ಯಂತ ಬಿಡುಗಡೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ನಗರದ ಮಂತ್ರಿಮಾಲ್ ನಲ್ಲಿ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿತ್ತು. ಪ್ರೇಕ್ಷಕರ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಕಮಲ್ ಶ್ರೀ ದೇವಿ ಚಿತ್ರತಂಡ ಭಾಗಿಯಾಗಿತ್ತು.

ತರುಣ್ ಸುಧೀರ್ ರಿಂದ ಕಮಲ್ ಶ್ರೀದೇವಿ ಫಸ್ಟ್ ರಿವ್ಯೂ

ರಾಗಿಣಿ ದ್ವಿವೇದಿಯಿಂದ ಭರವಸೆಯ ನುಡಿ

ಈ ಚಿತ್ರಕ್ಕೆ ಶುಭ ಕೋರಲು ಮುಖ್ಯ ಅತಿಥಿಗಳಾಗಿ ನಿರ್ದೇಶಕ ನಿರ್ಮಾಪಕ ತರುಣ್ ಸುಧೀರ್ ಹಾಗೂ ರಾಗಿಣಿ ದ್ವಿವೇದಿ ಆಗಮಿಸಿದ್ದರು. ಹಾಗೇ ಚಿತ್ರವನ್ನ ಈಗಾಗ್ಲೇ ನೋಡಿರುವಾಗಿ, ಇದು ಅದ್ಭುತ ಕಥೆಯ ಎಳೆಯಾಗಿದ್ದು, ಸಿನಿಮಾ ಎಷ್ಟೇ ಮಜಭೂತಾಗಿ ಮೂಡಿ ಬಂದಿದ್ದು, ಖಂಡಿತ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿದೆ ಎಂದು ತರುಣ್ ಸುಧೀರ್ ಚಿತ್ರತಂಡಕ್ಕೆ  ಶುಭ ಹಾರೈಸಿದ್ರು. ರಾಗಿಣಿ ಕೂಡ ಮಾತಾಡಿ, ಈ ತಂಡದ ಜೊತೆಗೆ ಪಯಣಿಸಿದ್ದು ಇವ್ರ ಕೆಲಸ ಅದ್ಭುತ ಮತ್ತು ಈ ಕೆಲಸಕ್ಕೆ ಪ್ರೇಕ್ಷಕರಿಂದ ಅತ್ಯಾದ್ಭುತ ಪ್ರತಿಕ್ರಿಯೆ ಸಿಗಲಿದೆ ಎಂದರು.

Quote

200ರೂಗೆ ಕನ್ನಡ ಸಿನ್ಮಾ ಮಾತ್ರ ನೋಡಿ‌..!!

ಕಮಲ್ ಶ್ರೀದೇವಿ ಬೆಸ್ಟ್ ಸ್ಕ್ರಿಪ್ಟ್

ದೊಡ್ಡದಾಗಿ ಗೆಲ್ಲುತ್ತೆ ನಿಲ್ಲುತ್ತೆ

-           ತರುಣ್ ಸುಧೀರ್ , ನಟ ನಿರ್ದೇಶಕ

ಇವ್ರು ಸಿನ್ಮಾ ಹುಚ್ಚರು

ನಾನ್ ನೋಡಿದ ’ಬೆಸ್ಟ್’

ಕಂಟೆಂಟ್ & ಕ್ರಿಯೇಟೀವ್ ಟೀಮ್ – ರಾಗಿಣಿ ದ್ವಿವೇದಿ, ನಟಿ

ಹಿರಿಯ ಕಲಾವಿದರಿಗೆ ಗೌರವ ಪ್ರೋತ್ಸಾಹ

ಪೋಷಕ ಕಲಾವಿದ ಡಿಂಗರಿ ನಾಗರಾಜ್ ಅವರ ಮಗ ರಾಜವರ್ಧನ್ , ತಮ್ಮ ತಂದೆ ಸಮಕಾಲಿನ, ಕಷ್ಟದಲ್ಲಿರುವ ಹಿರಿಯ ಕಲಾವಿದರಿಗೆ ಸಹಾಯಾರ್ಥ ಗೌರವ ಸನ್ಮಾನವನ್ನ ಮಾಡಿದ್ದು ವಿಶೇಷವಾಗಿತ್ತು. ಬೆಂಗಳೂರು ನಾಗೇಶ್, ಎಮ್.ಎನ್ ಲಕ್ಷ್ಮೀದೇವಮ್ಮ, ಬೀರದಾರ್, ಉಮೇಶ್, ಹೊನ್ನವಳ್ಳಿ ಕೃಷ್ಣರಿಗೆ ಕಮಲ್ ಶ್ರೀದೇವಿ ವೇದಿಕೆಯಲ್ಲಿ ಗೌರವ ಸಮರ್ಪಿಸಿ ಆರ್ಥಿಕ ಸಹಾಯ ನೀಡಿ ಗೌರವಿಸಲಾಯ್ತು. ರಾಜವರ್ಧನ್ ರವರ ಈ ಕಾರ್ಯಕ್ಕೆ ಹಿರಿಯ ಜೀವಗಳು ಮನತುಂಬಿ ಹರಸಿ ಹಾರೈಸಿದ್ರು.

 

ಪೋಷಕನಟನ ಮಗನಾಗಿ ಇವತ್ತು ಇಷ್ಟು ಕೆಲಸ ನಾನ್ ಮಾಡ್ತಿದ್ದೀನಿ ಅಂದ್ರೆ ಅದಕ್ಕೆ ಕಾರಣ ತರುಣ್ ಸುಧೀರ್. ಅವ್ರ ಸಲಹೆ ಮಾರ್ಗದರ್ಶನ ಇಲ್ಲಿಗೆ ಬಂದಿದ್ದೇನೆ. ಇವತ್ತು ಈ ಹಿರಿಯ ಜೀವಗಳಿಗೆ ಈ ಗೌರವ ಸಲ್ಲಿಸಿರೋದು ಸಾರ್ಥಕ ಭಾವ ಮೂಡಿದೆ. ಕಮಲ್ ಶ್ರೀದೇವಿ ತುಂಬು ಸಿನಿಮೋತ್ಸಾಹದಲ್ಲಿ ಮಾಡಿರುವಂತಹ ಕೆಲಸ . ಇದು ಕಂಡಿತ ವರ್ಕೌಟ್ ಆಗಲಿದೆ.ಈ ಪ್ರಾಮಾಣಿಕ ಪ್ರಯತ್ನ ಮಾಡಿದ ಇಡೀ ತಂಡಕ್ಕೆ ಧನ್ಯವಾದ- ರಾಜವರ್ಧನ್,ಕ್ರಿಯೇಟೀವ್ ಹೆಡ್ ಸಹ ನಿರ್ಮಾಪಕ

 ಇನ್ನು ಉಳಿದಂತೆ ಚಿತ್ರತಂಡದ ಎಲ್ಲಾ ಕಲಾವಿದರು ತಂತ್ರಜ್ಞರು ಸಿನಿಮಾದ ಪಯಣವನ್ನ ಮೆಲುಕು ಹಾಕಿ, ಈವರೆಗೂ ಪ್ರೇಕ್ಷಕರು ತಮ್ಮ ಸಿನಿಮಾ ಮೇಲೆ ತೋರಿಸುತ್ತಿರುವ ಕುತೂಹಲಕ್ಕೆ, ಮೂಖವಿಸ್ಮಿತರಾಗಿದ್ದು. 19ನೇ ತಾರೀಖು ಅವ್ರ ನಿರೀಕ್ಷೆಯನ್ನ ತಣಿಸೋ ಭರವಸೆಯ ಮಾತುಗಳನ್ನಾಡಿದ್ರು. ಅದ್ರಂತೆ, ನಾಯಕ ಸಚಿನ್ ಚಲುವರಾಯ ಸ್ವಾಮಿ ತರುಣ್ ರಾಗಿಣಿ ಹಾಗೂ ಇಡೀ ತಂಡಕ್ಕೆ ಧವ್ಯನಾದ ಹೇಳಿದರು. ಸಂಗೀತ ಭಟ್ ಸಿನಿಮಾ ರಿಲೀಸ್ ಆದ್ಮೇಲೆ ಈ ಕುರಿತು ಮಾತಾಡೋದು ತುಂಬಾ ಇದೆ ಎಂದು ಸಿನಿಮಾನ 19ಕ್ಕೆ ತಪ್ಪದೇ ನೋಡಿ ಎಂದರು. 

ಚಿತ್ರದ ವಿವರಣೆ

ಕಮಲ್ ಶ್ರೀದೇವಿ ಶ್ರೀ ಎನ್ ಚಲುವರಾಯ ಸ್ವಾಮಿ ಅರ್ಪಿಸಿ, ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಿಸಿ, Barnswallow  companyಯ ರಾಜವರ್ಧನ್ ಸಹ ನಿರ್ಮಾಣದಲ್ಲಿ ತಯಾರಾಗಿರೋ ಚಿತ್ರ.

ಈ ಚಿತ್ರದಲ್ಲಿ ಸಚಿನ್ ಚಲುವರಾಯ ಸ್ವಾಮಿ ನಾಯಕನಟನಾಗಿ ಅಭಿನಯಿಸಿದ್ದಾರೆ.ಕಿಶೋರ್,ರಮೇಶ್ ಇಂದಿರಾ, ಸಂಗೀತಾ ಭಟ್  ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ  ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ. ಕೀರ್ತನ್ ಸಂಗೀತ ಸಂಯೋಜನೆ ಮಾಡಿದ್ದು, ನಾಗೇಶ್ ಆಚಾರ್ಯ ಛಾಯಾಗ್ರಹಣ, ಕೆವಿನ್ ಸಂಕಲನ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,