Kamal Sridevi.News

Tuesday, September 09, 2025

ಕಮಲ್ ಶ್ರೀದೇವಿ ಟ್ರೈಲರ್ ಬಿಡುಗಡೆ

 

ಸೆಪ್ಟೆಂಬರ್ 19ರಿಂದ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ...

 

ಒಂದು ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ನಿಂದ ವಿಶಿಷ್ಟವಾಗಿ ಗಮನ ಸೆಳೆದಿದ್ದ ಕಮಲ್ ಶ್ರೀದೇವಿ ಚಿತ್ರತಂಡ ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ.

 

ಕಮಲ್ ಶ್ರೀದೇವಿ ಚಿತ್ರದ ಟ್ರೈಲರ್ ಪೋಸ್ಟರ್, ಟೀಸರ್ ಹಾಗೂ ಹಾಡು ಎಷ್ಟು ನಿರೀಕ್ಷೆ ಹುಟ್ಟಿಸಿದ್ವೋ ಅದಕ್ಕೆ ಹತ್ತಪಟ್ಟು ಹೆಚ್ಚು ಚಿತ್ರದ ಮೇಲೆ‌ ಭರವಸೆ ಹುಟ್ಟಿಸಿದೆ.. ತಾಂತ್ರಿಕ ಗುಣಮಟ್ಟ, ಪಾತ್ರಗಳ ವಿಶೇಷ ಕಮಲ್ ಶ್ರೀದೇವಿ ಚಿತ್ರ ಉದ್ಯಮದಲ್ಲಿ ಸಂಚಲನ ಸೃಷ್ಟಿಸೋ ಸೂಚನೆ ಕೊಡ್ತಿದೆ.

 

ಈಗಾಗ್ಲೇ ನಿಮಗೆಲ್ಲಾ ಗೊತ್ತಿರೋ ಕಮಲ್ ಶ್ರೀದೇವಿ

ಶ್ರೀ ಎನ್ ಚಲುವರಾಯ ಸ್ವಾಮಿ ಅರ್ಪಿಸಿ,

 ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ *ಬಿ.ಕೆ ಧನಲಕ್ಷ್ಮೀ* ನಿರ್ಮಿಸಿ, Barnswallow  companyಯ ರಾಜವರ್ಧನ್ ಸಹ ನಿರ್ಮಾಣದಲ್ಲಿ ತಯಾರಾಗಿರೋ ಚಿತ್ರ.

ಈ ಚಿತ್ರದಲ್ಲಿ ಸಚಿನ್ ಚಲುವರಾಯ ಸ್ವಾಮಿ ನಾಯಕನಟನಾಗಿ ಅಭಿನಯಿಸಿದ್ದಾರೆ.

ಕಿಶೋರ್,ರಮೇಶ್ ಇಂದಿರಾ, ಸಂಗೀತಾ ಭಟ್  ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ  ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.

 

 

Quotes

ರಾಜವರ್ಧನ್

 

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಸಹ ನಿರ್ಮಾಪಕ ರಾಜವರ್ಧನ್ ನಟಿ ಸಂಗೀತಾ ಭಟ್ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಎಲ್ಲಾ ಪ್ರಶಸ್ತಿಗಳು ಇವ್ರಿಗೆ‌ಸಲ್ಲಬೇಕೆಂದು ಹಾರೈಸಿದ್ರು.

 

 

 

ಕೊಂಡಾಡುವಿಕೆಯ ಹಿಂದೆ

 ನನ್ನ ಟಾರ್ಚರ್‌ ಇದೆ..!!!

ವೇಷ್ಯೆಯಾಗಿ ’ಸಂಗೀತಾ ಭಟ್’

 ದಿಟ್ಟ ಕಲಾಸ್ಫೂರ್ತಿಗೆ ಸಲಾಂ

  ಎಲ್ಲಾ ಪ್ರಶಸ್ತಿಗಳಿಗೂ ಅರ್ಹ

 

- ರಾಜವರ್ಧನ್ ಧನ್ಯತಾ ನುಡಿ‌

 

 

ನಾನು‌‌ ಫೇಲ್ಯೂರ್ ’ಡೈರೆಕ್ಟರ್’

ಇದು ಗೆಲ್ಲೋ ನಿಲ್ಲೋ ಕಂಟೆಂಟ್

ಕಾಡುವ ಪಾತ್ರಗಳು ಕ್ವಾಲಿಟಿ ಸಿನ್ಮಾ ಹೈಲೈಟ್

- ಸಚಿನ್ ಚಲುವರಾಯ ಸ್ವಾಮಿ

 

 

   ಶ್ರೀದೇವಿ ’ಸಂಕಟ’

ವೃತ್ತಿ ಬದುಕಿಗೆ ತಿರುವು

ಮನಬಿಚ್ಚಿದ ’ಸಂಗೀತ’

ಈ ಪಾತ್ರ ರಿಸ್ಕೇ ಆದ್ರೆ, ವೃತ್ತಿಪರತೆ ಮೀರಿಲ್ಲ

- ಸಂಗೀತಾ ಭಟ್

Copyright@2018 Chitralahari | All Rights Reserved. Photo Journalist K.S. Mokshendra,