Chamayya S/O Ramachari.News

Monday, September 08, 2025

ಚಾಮಯ್ಯ ಸನ್ ಆಫ್ ರಾಮಾಚಾರಿ ಟ್ರೇಲರ್ ಬಿಡುಗಡೆ

         ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರದ ಎರಡನೇ ಪ್ರಚಾರ ಸಲುವಾಗಿ ಟ್ರೇಲರ್ ಬಿಡುಗಡೆ ಸಮಾರಂಭವು ಎಸ್‌ಆರ್‌ವಿ ಚಿತ್ರಮಂದಿರ ಕಿಕ್ಕಿರಿದ ಜನಸಂದಣಿಯಲ್ಲಿ ಎರಡು ನಿಮಿಷದ ಟ್ರೇಲರ್ ಅನಾವರಣಗೊಂಡಿತು. ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪಲ್ಲಕ್ಕಿ ಬರವಣಿಗೆ, ನಿರ್ದೇಶನ ಮತ್ತು ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಧಾಕೃಷ ಪಲ್ಲಕ್ಕಿ ಬಂಡವಾಳ ಹೂಡಿದ್ದು, ಗೌತಮ್ ಪಲ್ಲಕ್ಕಿ ಮತ್ತು ವಿ.ಗೋವಿಂದರಾಜು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ‘ಕೋಟೆ ನಾಡಿನ ನಾಗರ ಹಾವು’ ಎಂಬ ಅಡಿಬರಹವಿದೆ.

       ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಸಿನಿಮಾದ ಒಂದಳೆ ಸಾರಾಂಶವನ್ನು ಈಗಾಗಲೇ ಹೇಳಿದ್ದೇನೆ. ಕೆಲವು ಸನ್ನಿವೇಶದಲ್ಲಿ ಚಿತ್ರದುರ್ಗದ ಕೋಟೆಯನ್ನು ಬಳಸದೆ, ಹಿನ್ನಲೆಯಲ್ಲಿರುವ ಮಹಾನ್ ನಾಯಕರ ಕೋಟೆಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಹಾಗೂ ಇವರೆಲ್ಲರ ಚರಿತ್ರೆಗಳು ಸಣ್ಣದಾಗಿ ಬಂದು ಹೋಗುತ್ತವೆ. ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಜಲೀಲ್ (ಅಂಬರೀಷ್) ಮಗನಾಗಿ ಚೋಟಾ ಜಲೀಲ್ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ಕೊಲೆ ತನಿಖೆ ಮಾಡುವ ರೋಲ್ ನಿಭಾಯಿಸಿದ್ದೇನೆ.

        ಡಾ.ವಿಷ್ಣುವರ್ಧನ್ ಹುಟ್ಟುಹಬ್ದ, ಸೆಪ್ಟಂಬರ್ ೧೮ರಂದು ತೆರೆಗೆ ತರುವ ಯೋಜನೆ ಇತ್ತು. ಆದರೆ ಈಗಾಗಲೇ ೧೦ ಸಿನಿಮಾಗಳು ಚಿತ್ರಮಂದಿರ ಗೇಟ್‌ನಲ್ಲಿ ನಿಂತಿವೆ. ಆದಕಾರಣ ಸಿನಿಪಂಡಿತರು, ಸಾಹಸ ಸಿಂಹ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಪ್ರದರ್ಶನ ಮಾಡಲು ಚಿಂತನೆ ನಡೆಸಲಾಗಿದೆ. ಮೈಸೂರು, ಚಿತ್ರದುರ್ಗ, ಶಿವಮೊಗ್ಗದಲ್ಲಿ ಹೆಚ್ಚು ಅಭಿಮಾನಿಗಳು ಇರುವುದರಿಂದ, ಒಂದು ದಿನದ ಗಳಿಕೆ ಹಣವನ್ನು ಅಭಿಮಾನ ಸಂಘದ ಸಮಾಜಮುಖಿ ಕಾರ್ಯಕ್ಕೆ ನೀಡಲಾಗುವುದು. ಮಾಧ್ಯಮದವರು ವಿಚಾರವನ್ನು ಪ್ರಚಾರ ಮಾಡಬೇಕೆಂದು ಪಲ್ಲಕ್ಕಿ ಕೋರಿಕೊಂಡರು.

     ರಾಮಾಚಾರಿ ಪಾತ್ರ ನಿರ್ವಹಿಸಿರುವ ಜಯಶ್ರೀರಾಜ್ ಚಿತ್ರೀಕರಣದ ಅನುಭವ ಹಂಚಿಕೊಂಡು, ಪಾತ್ರಕ್ಕಾಗಿ ಸಿದ್ದತೆ ಮಾಡಿಕೊಂಡು ಬದ್ದತೆಯಿಂದ ಪ್ರಯೋಗ ಮಾಡಿದ್ದೇನೆ ಎಂದರು.

      ಪತ್ನಿಯಾಗಿ ಪ್ರೇಮಾಗೌಡ, ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರೀ, ಮಗಳಾಗಿ ಚೈತ್ರಾ, ಮುಂದುವರಿದ ಪ್ರಿನ್ಸಿಪಾಲ್ (ಲೋಕನಾಥ್) ಆಗಿ ಪ್ರಕಾಶ್‌ಅರಸು. ಉಳಿದಂತೆ ಸೀನೂ ಮಾರ್ಕಳಿ, ವರಪ್ರಸಾದ ಶರ್ಮ, ವಿನುತ, ರಾಘವೇಂದ್ರ, ಸುಧಾಕರ, ಸೂರ್ಯತೇಜ, ಕಾರ್ತಿಕ್, ಗುರುಕಿರಣ್, ಸಂದೀಪ್ ಹಾಗೂ ವೃತ್ತಿ ರಂಗಕರ್ಮಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

      ಡಾ.ಕುಮಾರಚಲ್ಯಾ ಮತ್ತು ಹೈತೋ ಸಾಹಿತ್ಯದ ಗಜಲ್ ಗೀತೆಗಳಿಗೆ ಸ್ಯಾಂ ಸಂಗೀತ ಸಂಯೋಜಿಸಿದ್ದಾರೆ. ಹಿನ್ನಲೆ ಶಬ್ದ ಪಳನಿಸೇನಾಪತಿ, ಛಾಯಾಗ್ರಹಣ ಎಂ.ಆರ್.ಸೀನು,  ಎಸ್‌ಎಫ್‌ಎಕ್ಸ್ ಗೋಪಿ, ಸಂಕಲನ ಶಿವಕುಮಾರ್.ಎ ನಿರ್ವಹಿಸಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,